ಮಂಗಳೂರು ಸಂಸದರ ನಿಧಿಯಿಂದ 17 ಕೋಟಿ

Nalin-Kumar-Kateel-k

ಕಿನ್ನಿಗೋಳಿ: ಮಂಗಳೂರು ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ 17 ಕೋಟಿಯ ಅನುದಾನ ಬಿಡುಗಡೆಯಾಗಿದ್ದು ಫೆಬ್ರವರಿ ತಿಂಗಳೊಳಗೆದ ಉಳಿದ 2ಕೋಟಿಗಳನ್ನು ಯೋಜನೆಗಳಿಗೆ ಬಳಸಿ ಸಂಸಸದರ ನಿಧಿಯ ಸಂಫೂರ್ಣ 19 ಕೋಟಿಯನ್ನು ಬಳಸಲಾಗುವುದು ಅಲ್ಲದೆ ನರೆಗಾ ಸಹಿತ ವಿವಿಧ ಯೋಜನೆಗಳು ಸೇರಿ ಒಟ್ಟು 1,100ಕೋಟಿ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ವಿನಿಯೋಗಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಭಾನುವಾರ ಕಿನ್ನಿಗೋಳಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಮೂಲ್ಕಿ ಮೂಡಬಿದಿರೆ ಕ್ಷೇತ್ರಕ್ಕೆ ಈಗಾಗಲೇ 5.5 ಕೋಟಿ ರೂ ಗಳನ್ನು ವಿವಿಧ ಅಭಿವೃದ್ಧಿ ಕೆಲಸಗಳಿಗೆ ನೀಡಲಾಗಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ರೇಲ್ವೆ ಇಲಾಖೆಯ 17 ಮೇಲು ಸೇತುವೆಗಳು ಪ್ರಸ್ತಾವನೆಯಲ್ಲಿದ್ದು. ಪಡೀಲ್‌ನಲ್ಲಿ 4 ಕೋಟಿ ರೂ, ಜಪ್ಪು 5 ಕೋಟಿ, ಆಡ್ಯಾರ್ 50 ಲಕ್ಷ ಅನುದಾನ ಹಾಗೂ ಬೈಕಂಪಾಡಿ ಮೇಲು ಸೇತುವೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಜೊತೆಗೆ ಮಾತುಕತೆ ನಡೆಸಿ ಕೆಲಸ ಕಾರ್ಯಗತಗೊಂಡಿದೆ.

ಉಷ್ಣವಿದ್ಯುತ್ ಸ್ಥಾವರದ ಬಗ್ಗೆ ಸರಕಾರದ ನಿರ್ಲಕ್ಷ
ಪರಿಸರ ಮಾರಕ ಜನವಿರೋಧಿ ಯೋಜನೆಗಳು ಗ್ರಾಮೀಣ ಪ್ರದೇಶಗಳಿಗೆ ಬರುವುದು ಬೇಡ, ರಾಜ್ಯ ಸರಕಾರ ಇನ್ನಾದರೂ ಕೇಂದ್ರಕ್ಕೆ ಸ್ಪಷ್ಟವಾಗಿ ನಿಡ್ಡೋಡಿಯಲ್ಲಿ ಇಂತಹ ಯೋಜನೆ ಸ್ಥಾಪಿಸುವುದು ಬೇಡ ತಿಳಿ ಹೇಳಾಬೇಕಾದ ಕಾರ್ಯ ಆಗಬೇಕಾಗಿದೆ. ಜನರನ್ನು ಹಾಗೂ ಜನಪ್ರತಿನಿಧಿಗಳನ್ನು ಕತ್ತಲಲ್ಲಿ ಇಟ್ಟು ರೂಪಿಸಿದ ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರಕ್ಕೆ ನಮ್ಮ ವಿರೋಧವಿದೆ ಎಂದರು.

ಫೆ. 18 ರಂದು ಮಂಗಳೂರಿಗೆ ಮೋದಿ
ಫೆ. 18 ರಂದು ಮೋದಿ ಮಂಗಳೂರಿಗೆ ಆಗಮಿಸಲಿದ್ದು ಸುಮಾರು 1.5ಲಕ್ಷ ಜನ ಹಾಗೂ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ಎಂದು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್ ಮಾಹಿತಿ ನೀಡಿದರು. ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿಯ ಮುಖಂಡರಾದ ಸುಚರಿತ ಶೆಟ್ಟಿ , ಕೆ. ಆರ್. ಪಂಡಿತ್, ಭುವನಾಭಿರಾಮ ಉಡುಪ, ದೇವಪ್ರಸಾದ್ ಪುನರೂರು ಸುದ್ದಿಗೋಷ್ಟಿಯಲ್ಲಿದ್ದರು.

Comments

comments

Comments are closed.

Read previous post:
ರಾಮರಾವ್ ಬಕ್ಕಿಲ್ಲಾಯ

ಸ್ವಾತಂತ್ರ್ಯ ಹೋರಾಟಗಾರ ರಾಮರಾವ್  ಮೂಲ್ಕಿ : ಸ್ವಾತಂತ್ರ್ಯ ಹೋರಾಟಗಾರ ರಾಮರಾವ್ ಬಕ್ಕಿಲ್ಲಾಯ ಸೋಮವಾರ ನಿಧನ ಹೊಂದಿದರು.28-3-1923ರಲ್ಲಿ ಉಡುಪಿಯ ಗುಂಡಿಬೈಲಿನಲ್ಲಿ ಹುಟ್ಟಿದ ಉಪ್ಪಿಕಳ ರಾಮರಾವ್ ಮಂಗಳೂರು ಸೈಂಟ್ ಎಲೋಶಿಯಸ್...

Close