ರಾಮರಾವ್ ಬಕ್ಕಿಲ್ಲಾಯ

ಸ್ವಾತಂತ್ರ್ಯ ಹೋರಾಟಗಾರ ರಾಮರಾವ್ 
ಮೂಲ್ಕಿ : ಸ್ವಾತಂತ್ರ್ಯ ಹೋರಾಟಗಾರ ರಾಮರಾವ್ ಬಕ್ಕಿಲ್ಲಾಯ ಸೋಮವಾರ ನಿಧನ ಹೊಂದಿದರು.28-3-1923ರಲ್ಲಿ ಉಡುಪಿಯ ಗುಂಡಿಬೈಲಿನಲ್ಲಿ ಹುಟ್ಟಿದ ಉಪ್ಪಿಕಳ ರಾಮರಾವ್ ಮಂಗಳೂರು ಸೈಂಟ್ ಎಲೋಶಿಯಸ್ ಜ್ಯೂನಿಯರ್ ಕಾಲೇಜಿನಲ್ಲಿ ಬಿ.ಎ ವ್ಯಾಸಂಗ ಮಾಡುತ್ತಿರುವಾಗಲೇ ಬ್ರಿಟೀಷರ ವಿರುದ್ಧ ಕ್ವಿಟ್ ಇಂಡಿಯಾ ಚಳುವಳಿಗೆ ಧುಮಿಕಿ 1942 ಆಗಸ್ಟ್ 9ರಂದು ಬ್ರಿಟೀಷ್ ಸರಕಾರದಿಂದ ಬಂಧನಕ್ಕೊಳಗಾದರು. ಮೂರು ದಿನಗಳ ಕಾಲ ಮಂಗಳೂರು ಸಬ್ ಜೈಲಿನಲ್ಲಿ ಇರಿಸಿದ ಬಳಿಕ ಬಳ್ಳಾರಿಯ ಆಲಿಪುರಂ ಜೈಲಿಗೆ ೬ ತಿಂಗಳ ಕಾಲ ಕಠಿಣ ಸಜೆಯನ್ನು ಅನುಭವಿಸಿದರು. ಸೆರೆಮನೆ ವಾಸವನ್ನು ಮುಗಿಸಿ ಬಂದ ಮೇಲೆ ಮತ್ತೆ ವಿದ್ಯಾಭ್ಯಾಸವನ್ನು ಮುಂದುವರಿಸುವ ಆಕಾಂಕ್ಷೆಯಿಂದ ಕಾಲೇಜಿಗೆ ಸೇರಲು ಬಂದರೆ ಸೆರೆಮನೆ ವಾಸವನ್ನು ಅನುಭವಿಸಿ ಬಂದ ಅವರನ್ನು ಕಾಲೇಜಿಗೆ ಸೇರಿಸಿಕೊಳ್ಳಲು ಪ್ರಾಂಶುಪಾಲರು ಒಪ್ಪಲಿಲ್ಲ. ಮುಂದೆ ದೇಶ ಸ್ವಾತಂತ್ರ್ಯವನ್ನು ಪಡೆವಲ್ಲಿಯವರೆಗೂ ಪೋಲಿಸರ ಕಣ್ತಪ್ಪಿಸಿ ತಲೆಮರೆಸಿಕೊಂಡು ಬ್ರಿಟೀಷರ ವಿರುದ್ಧ ಹೋರಾಡಿದರು.
ಸ್ವಾತಂತ್ರ್ಯದ ಬಳಿಕ ಸ್ವಲ್ಪ ಕಾಲ ಚೌಕಿ ಇನ್ಸ್‌ಪೆಕ್ಟರ್ ಆಗಿ ಬಳಿಕ ಕೆನರಾ ಬ್ಯಾಂಕಿನಲ್ಲಿ ಉದ್ಯೋಗಿಯಾಗಿ ಮಂಗಳೂರು ಹಾಗೂ ಉಡುಪಿಯಲ್ಲಿ ಬ್ಯಾಂಕಿನಲ್ಲಿ ದುಡಿದರು. ವರ್ಗಾವಣೆಗೊಂಡಾಗ ಕೆಲಸಕ್ಕೆ ರಾಜಿನಾಮೆಯಿತ್ತು ಬೇಸಾಯ ವೃತ್ತಿಯನ್ನು ಆರಂಭಿಸಿದರು.
ಭಾರತ ಸರಕಾರ 25ನೇ ಸ್ವಾತಂತ್ರ್ಯೋತ್ಸವದಂದು ಆಗಿನ ಪ್ರಧಾನಿ ಶ್ರೀಮತಿ ಇಂದಿರಾಗಾಂದಿ ಸಂಮಾನಿಸಿ ತಾಮ್ರ ಪತ್ರವನ್ನು ನೀಡಿದ್ದಾರೆ. 2008ನೇ ಅಕ್ಟೋಬರ್ ೨ರಂದು ಗಾಂಧಿಜಯಂತಿಯಂದು ಮಾಜಿ ಪ್ರಧಾನಿ ಲಾಲ್‌ಕೃಷ್ಣ ಅಡ್ವಾಣಿಯವರು ಲಕ್ನೋದಲ್ಲಿ ಸಂಮಾನಿಸಲ್ಪಟ್ಟಿದ್ದಾರೆ.
ಧರ್ಮಪತ್ನಿ ಯು.ಬಿ. ರಾಜೀವಿ, ಒಂದು ಹೆಣ್ಣು ಹಾಗೂ 7 ಗಂಡು ಮಕ್ಕಳು ಹೊಂದಿದ್ದಾರೆ.

Kinnigoli 03021406

Comments

comments

Comments are closed.

Read previous post:
Kinnigoli 03021405
ಮೆನ್ನಬೆಟ್ಟು-ಶೌಚ ಶುದ್ಧೀಕರಣ ಘಟಕ

ಕಿನ್ನಿಗೋಳಿ: ದಕ್ಷಿಣ ಕನ್ನಡ ಜಿಲ್ಲೆ ಆರ್ಗಾನಿಕ್ ಜಿಲ್ಲೆ ಎಂದು ಘೋಷಣೆಯಾಗಿದ್ದು ಮಂಗಳೂರು ತಾಲೂಕಿನ ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯಲ್ಲಿ ಜಿ.ಎಮ್.ಎಸ್. ಟೆಕ್ನಾಲಜಿ ಮೈಸೂರು ಮತ್ತು ಭಗೀರಥ ಸಂಸ್ಥೆಯ ಮಾರ್ಗದರ್ಶನದಿಂದ ಜಪಾನ್...

Close