ಹಳೆಯಂಗಡಿ ರಸ್ತೆ ಕಾಮಗಾರಿಗಳ ಗುದ್ದಲಿ ಪೂಜೆ

ಮೂಲ್ಕಿ: ಜನರ ವಿಶ್ವಾಸದಿಂದ ಆಯ್ಕೆಯಾದ ನನಗೆ ಇಂತಹ ಜನಪರ ಕಾರ್ಯಗಳನ್ನು ಮಾಡಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವಕಾಶ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಎಲ್ಲಾ ರೀತಿಯ ಮೂಲಭೂತ ಸೌಕರ‍್ಯಗಳನ್ನು ಒದಗಿಸಿಕೊಡಲಾಗುವುದು ಎಂದು ಯುವಜನ ಕ್ರೀಡೆ ಮತ್ತು ಮೀನುಗಾರಿಕಾ ಸಚಿವರಾದ ಕೆ. ಅಭಯಚಂದ್ರರವರು ಹೇಳಿದರು. ಇದೇ ಸಂದರ್ಭದಲ್ಲಿ ಅವರು ಹಳೆಯಂಗಡಿ ಗ್ರಾಮ ಪಂಚಾಯತ್‌ನ ಕರಿತೋಟ ಎಂಬಲ್ಲಿ ಹಳೆಯಂಗಡಿ ಕರಿತೋಟ – ಚೆಳಾರು ರಸ್ತೆ ಕಾಮಗಾರಿಗಳ ಗುದ್ದಲಿ ಪೂಜೆ ನಡೆಸಿದರು.
2013-14 ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯ ಮೂಲಕ ಹಳೆಯಂಗಡಿ ಕರಿತೋಟ – ಚೆಳಾರು ರಸ್ತೆ ಡಾಮರೀಕರಣ 35 ಲಕ್ಷ, ಹಳೆಯಂಗಡಿ ಕೊಳುವೈಲು, ಸೇತುವೆ ರಸ್ತೆ ಕಾಂಕ್ರೇಟಿಕರಣ ಮತ್ತು ಮೋರಿ ರಚನೆ 25 ಲಕ್ಷ, ಹಳೆಯಂಗಡಿ ಸಸಿಹಿತ್ಲು ಭಗವತೀ ದೇವಸ್ಥಾನ – ಮೂಡುಕೊಪ್ಪಳ ರಸ್ತೆ ಡಾಮರೀಕರಣ 25 ಲಕ್ಷ, ಹಳೆಯಂಗಡಿ-ಕೊಪ್ಪಲ ರಸ್ತೆ ಡಾಮರೀಕರಣ 25 ಲಕ್ಷ, ಹಳೆಯಂಗಡಿ ಪಾವಂಜೆ ಅರಂದು ರಸ್ತೆ ಡಾಮರೀಕರಣ 20 ಲಕ್ಷ, ಹಳೆಯಂಗಡಿ ಇಂದಿರಾನಗರ-ಚೆಳ್ಳಾಯರು ಅಣೆಕಟ್ಟು ರಸ್ತೆ ಡಾಮರೀಕರಣ 22 ಲಕ್ಷ, ಪಡುಪಣಂಬೂರು ಕದಿಕೆ ಮಸೀದಿ ರಸ್ತೆ ಡಾಮರೀಕರಣ 25 ಲಕ್ಷ, ಪಡುಪಣಂಬೂರು ಅರಮನೆ-ಚಿತ್ರಾಪು ಸೇತುವೆ ರಸ್ತೆ 35 ಲಕ್ಷ, ಪಡುಪಣಂಬೂರು ಹೊಯ್ಗೆಗುಡ್ಡೆ ದೇವಸ್ಥಾನ ರಸ್ತೆ ಡಾಮರೀಕರಣ 2.75ಲಕ್ಷ, ಮುಲ್ಕಿ-ಕಕ್ವದಿಂದ ಮಟ್ಟು ಕೋರ‍್ದಬ್ಬು ದೈವಸ್ಥಾನ ನದಿಬದಿವರೆಗೆ ರಸ್ತೆ ಡಾಮರೀಕರಣ 37 ಲಕ್ಷ, ಮುಲ್ಕಿ ವಿಜಯಾ ಕಾಲೇಜು – ಬಾನೊಟ್ಟು ರಸ್ತೆ ಡಾಮರೀಕರಣ 19 ಲಕ್ಷ, ಮುಲ್ಕಿ ಬಾನೊಟ್ಟು-ಮೈಲೊಟ್ಟು ಜಂಕ್ಷನ್ ರಸ್ತೆ ಅಭಿವೃದ್ಧಿ 50 ಲಕ್ಷ, ಮುಲ್ಕಿ ಮಟ್ಟು ರಮೇಶ್ ಕೋಟ್ಯಾನ್‌ರವರ ಮನೆ ಬಳಿಯಿಂದ ಹೊಸ ಕೊಪ್ಪಳ ಜಾರಂದಾಯ ದೇವಸ್ಥಾನರವರ ರಸ್ತೆ ಅಭಿವೃದ್ಧಿ 10 ಲಕ್ಷ. ಒಟ್ಟು 3.35 ಕೋಟಿ ಮೊತ್ತದ ಕಾಮಗಾರಿಗಳು ನಡೆಯಲಿದ್ದು, ಈಗಾಗಲೇ ಗುತ್ತಿಗೆದಾರರನ್ನು ನೇಮಕ ಮಾಡಲಾಗಿದ್ದು, ಕೂಡಲೇ ಉನ್ನತ ದರ್ಜೆ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಲಾಗುದೆಂದು ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಕ್ಷಿಕೆರೆ ಚರ್ಚ್‌ನ ಸಹಾಯಕ ಧರ್ಮ ಗುರುಗಳಾದ ಫಾ| ಜೇಸುದಾಸ್ ಕ್ರಾಸ್ತ,ಡಿ.ಸಿ.ಸಿ. ಸದಸ್ಯರಾದ ಗುಣಪಾಲ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶಾಲೆಟ್ ಪಿಂಟೋ, ತಾಲೂಕು ಪಂಚಾಯತ್ ಸದಸ್ಯರಾದ ರಾಜು ಕುಂದರ್, ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪೂರ್ಣಿಮಾ ಮಧು, ಚೆಳಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುಷ್ಪ, ಮಾಜಿ ಅಧ್ಯಕ್ಷರುಗಳಾದ ಎಚ್. ವಸಂತ್ ಬೆರ್ನಾಡ್, ಚಂದ್ರಶೇಖರ್ ನಾನಿಲ್, ಉಪಾಧ್ಯಕ್ಷರಾದ ಅಬ್ದುಲ್ ಖಾದರ್, ಇಂಜಿನಿಯರ್ ಸುಜನ್ ಚಂದ್ರರಾವ್, ಸಹಾಯಕ ಇಂಜಿನಿಯರ್ ಪ್ರವೀಣ್ ಕುಮಾರ್, ಉದ್ಯಮಿ ಶಶೀಂದ್ರ ಎಂ. ಸಾಲ್ಯಾನ್, ಗ್ರಾಮ ಪಂಚಾಯತ್ ಸದಸ್ಯರಾದ ಎಚ್. ಹಮೀದ್, ಸುಜಾತ ವಾಸುದೇವ್, ಜಲಜ, ಲೀಲಾ, ಸ್ಥಳೀಯ ಮುಂಖಡರುಗಳಾದ ಗೋಪೀನಾಥ ಪಡಂಗ,ಈಶ್ವರ್ ದೇವಾಡಿಗ, ಯಶೋಧರ್ ಸಾಲ್ಯಾನ್, ಮೋಹನ್ ವಿ. ಸುವರ್ಣ, ಲಾರೆನ್ಸ್ ಕುಟಿನ್ಹೋ, ಚಾಲ್ಸ್ ಕುಟಿನ್ಹೋ, ದಯಾನಂದ್ ಮೂಡಬಿದ್ರೆ ಮೊದಲಾದವರು ಉಪಸ್ಥಿತರಿದ್ದರು.

Mulki 04021402Puneeth Krishna

Comments

comments

Comments are closed.

Read previous post:
ಧೈರ್ಯ ಮತ್ತು ಸಂಸ್ಕಾರಯುತ ಜೀವನ ಪಾಲಿಸಬೇಕು

ಕಿನ್ನಿಗೋಳಿ: ಮನುಷ್ಯ ಧೈರ್ಯ ಮತ್ತು ಸಂಸ್ಕಾರಯುತ ಜೀವನದಿಂದ ಸರ್ವ ಧರ್ಮ ಸಮಾನತೆಯ ಸಮಾಜ ಸೇವೆ ಹಾಗೂ ಧರ್ಮ ಉದ್ಧಾರದ ಕಾರ್ಯ ಮಾಡಬೇಕು ಎಂದು ಎಂ.ಸಿ.ಎಫ್ ಎಚ್. ಆರ್ ಜನರಲ್...

Close