ಧೈರ್ಯ ಮತ್ತು ಸಂಸ್ಕಾರಯುತ ಜೀವನ ಪಾಲಿಸಬೇಕು

ಕಿನ್ನಿಗೋಳಿ: ಮನುಷ್ಯ ಧೈರ್ಯ ಮತ್ತು ಸಂಸ್ಕಾರಯುತ ಜೀವನದಿಂದ ಸರ್ವ ಧರ್ಮ ಸಮಾನತೆಯ ಸಮಾಜ ಸೇವೆ ಹಾಗೂ ಧರ್ಮ ಉದ್ಧಾರದ ಕಾರ್ಯ ಮಾಡಬೇಕು ಎಂದು ಎಂ.ಸಿ.ಎಫ್ ಎಚ್. ಆರ್ ಜನರಲ್ ಮೇನೇಜರ್ ಪಿ.ಜಯಶಂಕರ್ ರೈ ಹೇಳಿದರು.
ಶ್ರೀ ಕೊಂಡೇಲ್ತಾಯ ಸೇವಾ ಸಮಿತಿಯ ಆಶ್ರಯದಲ್ಲಿ ಸೋಮವಾರ ನಡೆದ ಕೊಂಡೇಲ್ತಾಯ ದೈವದ ವಾರ್ಷಿಕ ಉತ್ಸವದ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಟೀಲು ಪದವಿ ಕಾಲೇಜು ಉಪನ್ಯಾಸಕ ಸೋಂದಾ ಭಾಸ್ಕರ ಭಟ್ ಧಾರ್ಮಿಕ ಪ್ರವಚನ ನೀಡಿದರು. ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಜಿ. ಪಂ. ಸದಸ್ಯ ಈಶ್ವರ್ ಕಟೀಲ್, ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ, ಧಾರ್ಮಿಕ ಮುಖಂಡರಾದ ರಾಜೇಶ್, ಮಂಜುನಾಥ್, ಸಮಿತಿ ಉಪಾಧ್ಯಕ್ಷ ಲೋಕಯ್ಯ ಸಾಲಿಯಾನ್, ಕಾರ್ಯದರ್ಶಿ ಸೂರಜ್ ಪೂಜಾರಿ, ತಿಮ್ಮಪ್ಪ ಪೂಜಾರಿ ಉಪಸ್ಥಿತರಿದ್ದರು.
ಶ್ರೀ ಕೊಡೇಲ್ತಾಯ ಸೇವಾ ಸಮಿತಿ ಅಧ್ಯಕ್ಷ ಕೊಂಡೇಲ ತಾರಾನಾಥ ಶೆಟ್ಟಿ ಪಾದೆಮನೆ ಸ್ವಾಗತಿಸಿದರು, ಪ್ರವೀಣ್ ವಂದಿಸಿದರು, ಪದ್ಮನಾಭ ಕಾರ್ಯಕ್ರಮ ನಿರೂಪಿಸಿದರು.

Kinnigoli 04021401

Comments

comments

Comments are closed.

Read previous post:
ಎನ್.ಸಿ.ಸಿ – ಹೆಚ್.ಜಿ.ನಾಗರಾಜ ನಾಯಕ್ ಆಯ್ಕೆ

ಮೂಲ್ಕಿ : ಪಶ್ಚಿಮ ಬಂಗಾಳದ ಡಾರ್ಜಲಿಂಗ್‌ನಲ್ಲಿ ಫೆ.7 ರಿಂದ 18ರ ವರೆಗೆ ನಡೆಯಲಿರುವ ಎನ್.ಸಿ.ಸಿ ರಾಷ್ಟ್ರೀಯ ಭಾವೈಖ್ಯತಾ ಶಿಭಿರದಲ್ಲಿ ಭಾಗವಹಿಸಲು ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್‌ನ ಕಂಟಿಂಜೆಂಟ್...

Close