ಬಡಗುಹಿತ್ಲು ಕೊಂಡಿ ರಸ್ತೆಗೆ ಗುದ್ದಲಿ ಪೂಜೆ

ಮೂಲ್ಕಿ : ಗ್ರಾಮೀಣ ಪ್ರದೇಶದ ಜನ ಸಾಮಾನ್ಯರ ಆರ್ಥಿಕ ಉನ್ನತಿ ಹಾಗೂ ಮೀನುಗಾರಿಕೆಯ ಅಭಿವೃದ್ಧಿಯ ನೆಲೆಯಲ್ಲಿ ಇಲಾಖೆಯ ವತಿಯಿಂದ2013-14 ಸಾಲಿನ ಮೀನುಗಾರಿಕಾ ಕೊಂಡಿ ರಸ್ತೆ ಅಭಿವೃದ್ಧಿ ಹಾಗೂ ನಬಾರ್ಡ್ ಕಾಮಗಾರಿಗಳಿಗಾಗಿ 13.5ಕೋಟಿ ಅನುದಾನ ಮಂಜೂರಾತಿ ನೀಡಲಾಗಿದೆ ಎಂದು ಸಚಿವ ಅಭಯಚಂದ್ರ ಜೈನ್ ಹೇಳಿದರು.
ಮಂಗಳವಾರ ಮೂಲ್ಕಿ ಬಪ್ಪನಾಡು ಶಾಂಭವೀ ನದಿ ತಟದ 13ಲಕ್ಷ ವೆಚ್ಚದಲ್ಲಿ ಬಡಗುಹಿತ್ಲು ಜಲಕದ ಕಡಿ ಮೀನುಗಾರಿಕಾ ಕೊಂಡಿ ರಸ್ತೆಗೆ ಗುದ್ದಲಿ ಪೂಜೆ ನಡೆಸಿ ಮಾತನಾಡಿದರು. ಸಚಿವರಾಗಿ 2013-14 ಸಾಲಿನ ಪ್ರಥಮ ಹಂತದ ಅಭಿವೃದ್ಧಿ ಕಾಮಗಾರಿ ಮಂಜೂರು ಮಾಡಿದ್ದು ಮೂಲ್ಕಿ ಮೂಡಬಿದ್ರಿ ಕ್ಷೇತ್ರಕ್ಕೆ 6.5ಕೋಟಿ ವೆಚ್ಚದ ಯೋಜನೆ ನೀಡಲಾಗಿದೆ. ರಾಜ್ಯದ ಮೀನುಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಆದ್ಯತೆಯಮೇರೆಗೆ ಅರ್ಹ ಪ್ರದೇಶಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚು ಯೋಜನಾ ಅನುದಾನಗಳನ್ನು ನೀಡಲಾಗುವುದು ಎಂದರು. ಈ ಸಂದರ್ಭ ಬಂದರು ಮತ್ತು ಮೀನುಗಾರಿಕಾ ಮಂಗಳೂರು ಉಪ ವಿಭಾಗದ ಇಂಜಿನಿಯರ್ ಸುಜನ್ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಹಳೆಯಂಗಡಿ ಚೆಳಾರು ಅಣೆಕಟ್ಟು ರಸ್ತೆ ಡಾಮರೀಕರಣ ರೂ.22ಲಕ್ಷ ವೆಚ್ಚದಲ್ಲಿ 885×3.25ಮೀ. ರಸ್ತೆ ಅಗಲ ಪೇವರ್ ಪಿನಿಶ್ ಡಾಂಬರೀಕರಣ ಕಾಮಗಾರಿ, ಹಳೆಯಂಗಡಿ ಗ್ರಾ.ಪಂ ವ್ಯಾಪ್ತಿಯ ಪಾವಂಜೆ ಅರಂದು ರಸ್ತೆ ಡಾಂಬರೀಕರಣ ರೂ.20ಲಕ್ಷ ವೆಚ್ಚದಲ್ಲಿ 1125×3.00ಮೀ. ರಸ್ತೆ ಪೇವರ್ ಪಿನಿಶ್ ಡಾಂಬರೀಕರಣ ಕಾಮಗಾರಿ, ಹಳೆಯಂಗಡಿ ಕದಿಕೆ ಮುಟ್ಟಿಕಲ್ಲು ಕಡವಿನ ರಸ್ತೆ ಪೇಚ್ ಕೆಲಸ ಹಾಗೂ ಪುನರಪಿ ಡಾಂಬರೀಕರಣ ರೂ.25ಲಕ್ಷ ವೆಚ್ಚದಲ್ಲಿ760.00×3.50ಮೀ. ಅಗಲ ಪೇವರ್ ಪಿನಿಶ್ ಡಾಂಬರೀಕರಣ, 95.00×3.00ಮೀ. ರಸ್ತೆ ಅಗಲ ಕಾಂಕ್ರೀಟಿಕರಣ ಕಾಮಗಾರಿ, ಹಳೆಯಂಗಡಿ ಗ್ರಾ.ಪಂ ವ್ಯಾಪ್ತಿಯ ಕೊಕುಡೆ ಬೊಳ್ಳೂರು ನಂದಿನಿ ಹೊಳೆ ಬದಿ ರಸ್ತೆ ಅಬಿವೃದ್ಧಿ ರೂ.25ಲಕ್ಷ ವೆಚ್ಚದಲ್ಲಿ 1140×3.25ಮೀ. ರಸ್ತೆ ಅಗಲ ಪೇವರ್ ಪಿನಿಶ್ ಡಾಂರೀಕರಣ ಕಾಮಗಾರಿ, ಹಳೆಯಂಗಡಿ ಗ್ರಾ.ಪಂ ವ್ಯಾಪ್ತಿಯ ಹೊಗೆ ಗುಡ್ಡೆ ಉಮಾಮಹೇಶ್ವರೀ ದೇವಸ್ಥಾನ ರಸ್ತೆ ಅಬಿವೃದ್ಧಿ ರೂ.2.75ಲಕ್ಷ ವೆಚ್ಚದಲ್ಲಿ 400.00×2.50ಮೀ. ರಸ್ತೆ ಅಗಲ ಮಿಕ್ಸ್ ಸೀಲ್ ಕೋಟ್ ಕಾಮಗಾರಿ, ಸಸಿಹಿತ್ಲು ಭಗವತಿ ದೇವಸ್ಥಾನದಿಂದ ಮೂಡು ಕೊಪ್ಪಳ ಹೊಳೆ ಬದಿ ರಸ್ತೆ ಡಾಂಬರೀಕರಣ ರೂ.25ಲಕ್ಷ ವೆಚ್ಚದಲ್ಲಿ 880×3025ಮೀ.ರಸ್ತೆ ಅಗಲ ಪೇವರ್ ಪಿನಿಶ್ ಡಾಂಬರೀಕರಣ ಕಾಮಗಾರಿ, ಮೂಲ್ಕಿ ಕಾರ್ನಾಡು ಚಿತ್ರಾಪು ಪಡುಪಣಂಬೂರು ರಸ್ತೆ ಡಾಂಬರೀಕರಣ ರೂ.35ಲಕ್ಷ ವೆಚ್ಚದಲ್ಲಿ 1935.00×3.00ಮೀ ರಸ್ತೆ ಪೇವರ್ ಪಿನಿಶ್ ಡಾಂಬರೀಕರಣ ಕಾಮಗಾರಿ, ಮೂಲ್ಕಿ ಮಟ್ಟು ಕಕ್ವದಿಂದ ಕೋರ‍್ದಬ್ಬು ದೇವಸ್ಥಾನ ನದಿ ಬದಿವರೆಗೆ ರೂ.37ಲಕ್ಷ ವೆಚ್ಚದಲ್ಲಿ 1685.00×3.00ಮೀ. ರಸ್ತೆ ಅಗಲ ಪೇವರ್ ಪಿನಿಶ್ ಡಾಂಬರೀಕರಣ ಕಾಮಗಾರಿ, ಮಂಗಳೂರು ತಾಲೂಕು ಮೂಲ್ಕಿ ವಿಜಯಾ ಕಾಲೇಜ್‌ನಿಂದ ಬಾನೋಟ್ಟು ರಸ್ತೆ ಪೇಚ್ ಹಾಗೂ ಆಯ್ದ ಭಾಗಗಳಲ್ಲಿ ಡಾಂಬರೀಕರಣ ರೂ.19ಲಕ್ಷ 1690.00×3.00ಮೀ ರಸ್ತೆ ಅಗಲ ಪೇವರ್ ಪಿನಿಶ್ ಡಾಂಬರೀಕರಣ ಕಾಮಗಾರಿ, ಮೂಲ್ಕಿ ಬಾನೊಟ್ಟು ಮೈಲೊಟ್ಟು ಜಂಕ್ಷನ್ ರಸ್ತೆ ಅಬಿವೃದ್ದಿ ರೂ.50ಲಕ್ಷ ವೆಚ್ಚದಲ್ಲಿ 2190.00×3.00ಮೀ ರಸ್ತೆ ಅಗಲ ಪೇವರ್ ಪಿನಿಶ್ ಡಾಂಬರೀಕರಣ ಕಾಮಗಾರಿ, ಮಟ್ಟು ಕ್ರಾಸ್‌ನಿಂದ ಹೊಸ ಕೊಪ್ಪಳ ಜಾರಂದಾಯ ದೇವಸ್ಥಾನದವರೆಗೆ ರಸ್ತೆ ಅಬಿವೃದ್ಧಿ ರೂ.10ಲಕ್ಷ ವೆಚ್ಚದಲ್ಲಿ 270×3.00ಮೀ ರಸ್ತೆ ಅಗಲ ಪೇವರ್ ಪಿನಿಶ್ ಡಾಂಬರೀಕರಣ ಕಾಮಗಾರಿ, ಹಳೆಯಂಗಡಿ ಗ್ರಾ.ಪಂ ವ್ಯಾಪ್ತಿಯ ಕೊಳುವೈಲು ಮೀನುಗಾರಿಕೆ ರಸ್ತೆಯ ಬಲಬದಿ ಗೋರಿ ಬಳಿ ರಸ್ತೆ ಕಾಂಕ್ರೀಟಿಕರಣ ಹಾಗೂ ಒಂದು ಮೋರಿ ರಚನೆ ರೂ.25ಲಕ್ಷ ವೆಚ್ಚದಲ್ಲಿ 185.00×3.50ಮೀ ರಸ್ತೆ ಅಗಲ ಕಾಂಕ್ರೀಟಿಕರಣ, 80.00×3.00ಮೀ. ರಸ್ತೆ ಅಗಲ ಕಾಂಕ್ರೀಟಿಕರಣ ಕಾಮಗಾರಿ, ಹಳೆಯಂಗಡಿ ಗ್ರಾ.ಪಂ. ವ್ಯಾಪ್ತಿಯ ಹಳೆಯಂಗಡಿ ಕರಿತೋಟ ಚೇಳಾರು ರಸ್ತೆ ಅಬಿವೃದ್ಧಿ ರೂ.35ಲಕ್ಷ ವೆಚ್ಚದಲ್ಲಿ 1215.00×3.00ಮೀ ರಸ್ತೆ ಅಗಲ ಕಾಂಕ್ರೀಟಿಕರಣ ಕಾಮಗಾರಿ, ಮಂಗಳೂರು ತಾಲೂಕಿನ ಚೇಳಾರು ಗ್ರಾ.ಪಂ. ಕಂಡಿಗೆ ಎಂಬಲ್ಲಿ ಸೇತುವೆ ನಿರ್ಮಿಸಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮುಕ್ಕ ಪ್ರದೇಶಕ್ಕೆ ಸಂಪರ್ಕ ರಸ್ತೆ ಒದಗಿಸುವುದು ರೂ. ೧೫೦ಲಕ್ಷ ವೆಚ್ಚದಲ್ಲಿ 815×3075ಮೀ.ಅಗಲ ರಸ್ತೆ ನಿರ್ಮಾಣ ಮತ್ತು 30.00×5.20ಮೀ ಅಗಲ ಸೇತುವೆ ನಿರ್ಮಾಣ, ಪಡುಪಣಂಬೂರು ಗ್ರಾ.ಪಂ. ವ್ಯಾಪ್ತಿಯ ಹೊಗೆ ಗುಡ್ಡೆ ದೇವಸ್ಥಾನದಿಂದ ಹಳೆಯಂಗಡಿ ಗ್ರಾ.ಪಂ.ವ್ಯಾಪ್ತಿ ಕಡವಿನ ಬಾಗಿಲು ವರೆಗೆ ಸಂಪರ್ಕ ರಸ್ತೆ ನಿರ್ಮಾಣ ರೂ.2ಕೋಟಿ ವೆಚ್ಚದಲ್ಲಿ 1585.00×3.75ಮೀ. ಅಗಲದ ಹೊಸ ರಸ್ತೆ ನಿರ್ಮಾಣ, 2) ಮಂಗಳೂರು ತಾಲೂಕಿನ ಅಂಬ್ಲಮೊಗರು ಗ್ರಾಮದ ಎಲಿಯಾರ್ ಪದವು ರಸ್ತೆಯಿಂದ ಹರೇಕಳ ಗ್ರಾಮದ ಕಡವಿನ ಬಳಿಯ ಮೀನುಗಾರಿಕಾ ರಸ್ತೆ ಅಬಿವೃದ್ಧಿ ರೂ.15ಲಕ್ಷ ವೆಚ್ಚದಲ್ಲಿ 180.00×4.50ಮೀ. ರಸ್ತೆ ಅಗಲ ಕಾಂಕ್ರೀಟಿಕರಣ ಕಾಮಗಾರಿ, ಉಳ್ಳಾಲ ಪ್ರದೇಶದ ಕೋಟೆಪುರ ಎಂಬಲ್ಲಿ ಮೀನುಗಾರಿಕಾ ಜೆಟ್ಟಿಯ ನಿರ್ಮಾಣ ಕಾಮಗಾರಿ (ನಾರ್ಬಾರ‍್ಡ್ ಆರ್.ಡಿ.ಎಫ್-18 ಯೋಜನೆಯಡಿ) ರೂ. 1ಕೋಟಿ 50ಲಕ್ಷ 30.00×7.70 ಅಗಲ ಪೈಲ್ ಹಾಗೂ ಡಯಾಫ್ರಾಮ್‌ವಾಲ್ ಒದಗಿಸಿ ಧಕ್ಕೆ ನಿರ್ಮಾಣ ಕಾಮಗಾರಿ, ಮಂಗಳೂರು ದಕ್ಷಿಣ ಕ್ಷೇತ್ರದ ಹಳೇ ಮೀನುಗಾರಿಕಾ ಬಂದರಿನ ಪ್ರವೇಶ ದ್ವಾರದ ಲೀಡ್ಸ್ ದ್ವಾರದ ಲೀಡ್ಸ್ ಬಾರ್‌ನ ಎದುರುಗಡೆ ರಸ್ತೆ ಕಾಂಕ್ರೀಟಿಕರಣ ರೂ.15ಲಕ್ಷ ವೆಚ್ಚದಲ್ಲಿ 72.00×4.20ಮೀ. ರಸ್ತೆ ಅಗಲ ಕಾಂಕ್ರೀಟಿಕರಣ ಹಾಗೂ ಎರಡು ಬದಿ ಚರಂಡಿ ನಿರ್ಮಾಣ ಕಾಮಗಾರಿ, ಸುಲ್ತಾನ್ ಬತ್ತೇರಿ ಬಳಿ ಬೊಕ್ಕಪಟ್ನ ಐಡಲ್ ಬರ್ತಿಂಗ್‌ಗಾಗಿ ಮೀನುಗಾರಿಕಾ ಜೆಟ್ಟಿ ನಿರ್ಮಾಣ( ನಾಬಾರ‍್ಡ್ ಆರ್‌ಐಡಿಎಫ್-19ಯೋಜನೆಯಡಿ) ರೂ.5ಕೋಟಿ ವೆಚ್ಚ 98.00×7.70ಮೀ ಅಗಲ ಪೈಲ್ ಹಾಗೂ ಡಯಾಫ್ರಾಮ್‌ವಾಲ್ ಒದಗಿಸಿ ಧಕ್ಕೆ ನಿರ್ಮಾಣ ಕಾಮಗಾರಿ, ಮಂಗಳೂರು ಉತ್ತರಕ್ಷೇತ್ರದ ಸುರತ್ಕಲ್‌ನಿಂದ ಗುಡ್ಡ ಕೊಪ್ಲ ರಸ್ತೆ ಅಬಿವೃದ್ಧಿ ರೂ. 25ಲಕ್ಷ ವೆಚ್ಚದಲ್ಲಿ 330.00×3.50ಮೀ. ರಸ್ತೆ ಅಗಲ ಕಾಂಕ್ರೀಟಿಕರಣ ಕಾಮಗಾರಿ ಮಂಜೂರಾತಿಗೊಂಡಿದೆ ಎಂದರು.
ಜಿಪಂ ಹಿರಿಯ ಇಂಜಿನಿಯರ್ ನಂಜೇಶಯ್ಯ,ಬಪ್ಪನಾಡು ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ್ ಶೆಟ್ಟಿ, ಜಿಪಂಇಂಜಿನಿಯರ್ ಪ್ರಶಾಂತ ಆಳ್ವಾ,ವಸಂತ ಬೆರ್ನಾಡ್, ಶಾಲೆಟ್ ಪಿಂಟೋ,ಪುರುಷೋತ್ತಮ ರಾವ್,ಹರೀಶ್ ಕರ್ಕೇರಾ, ಲೀಲಾಕ್ಷ ಕರ್ಕೇರಾ,ಧನಂಜಯ,ಶಶೀಂದ್ರ ಸಾಲ್ಯಾನ್, ಮೋಹನ್ ಕರ್ಕೇರಾ,ಚಂದ್ರಭಾನು.ಮೋಹನ್ ಕೋಟ್ಯಾನ್ ಮತ್ತು ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Mulki 04021403Bhagyawan Sanil

 

Comments

comments

Comments are closed.

Read previous post:
ಹಳೆಯಂಗಡಿ ರಸ್ತೆ ಕಾಮಗಾರಿಗಳ ಗುದ್ದಲಿ ಪೂಜೆ

ಮೂಲ್ಕಿ: ಜನರ ವಿಶ್ವಾಸದಿಂದ ಆಯ್ಕೆಯಾದ ನನಗೆ ಇಂತಹ ಜನಪರ ಕಾರ್ಯಗಳನ್ನು ಮಾಡಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವಕಾಶ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಎಲ್ಲಾ ರೀತಿಯ ಮೂಲಭೂತ ಸೌಕರ‍್ಯಗಳನ್ನು...

Close