ಸುರತ್ಕಲ್ ನಲ್ಲಿ ಕೊಲೆ ಪ್ರಕರಣ

ಸುರತ್ಕಲ್: ಸುರತ್ಕಲ್: ಪಣಂಬೂರು ಠಾಣಾ ವ್ಯಾಪ್ತಿಯ ಕೋಡಿಕೆರೆ ಎಂಬಲ್ಲಿ ಕಳೆದ 2012ರ ಜುಲೈ 19ರಂದು ರಾತ್ರಿ ನಡೆದಿದ್ದ ಮೆಕ್ಯಾನಿಕ್ ಶಿವರಾಜ್ ಕುಲಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜೈಲು ವಾಸದ ನಂತರ ಬಿಡುಗಡೆಯಾದ ಇಬ್ಬರು ಆರೋಪಿಗಳಲ್ಲಿ ಒಬ್ಬನಾದ ಪ್ರಕಾಶ್ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಪ್ರಕಾಶ್ ಮತ್ತು ದಿನೇಶ್‌ಗೆ ವಿದೇಶದಿಂದ ಸುಪಾರಿ ನೀಡಲಾಗಿದೆ ಎಂದು ಸ್ಥಳಿಯರು ಆರೋಪಿಸುತ್ತಲೇ ಬಂದಿದ್ದು, ಶಿವರಾಜ್(23) ಕೊಲೆ ಪ್ರಕರಣ ನಡೆದು ಹಲವು ತಿಂಗಳು ಕಳೆದರೂ ಈ ಪ್ರಕರಣದ ನೈಜ ಆರೋಪಿಗಳ ಸೆರೆಗೆ ಆಗ್ರಹಿಸಿ ಎರಡು ಸಲ ಗಡುವು ನೀಡಿ ಪ್ರತಿಭಟನೆ ನಡೆಸಿದ್ದಾರೆ.
ನಂತರದ ದಿನಗಳಲ್ಲಿ ಪ್ರಕಾಶ್ ಹೈದರಬಾದಿನಲ್ಲಿ ನೆಲೆಸಿದ್ದ ಅಲ್ಲದೆ ಮಂಗಳೂರು ಕೊರ್ಟ್ ಗೆ ಹಾಜಾರಾಗುತ್ತಿದ್ದನು.
ಇಂದು ಮಂಗಳೂರು ನ್ಯಾಯಲಯದಲ್ಲಿ ಪ್ರಕರಣದ ಬಗ್ಗೆ ವಿಚಾರಣೆಯನ್ನು ಮುಗಿಸಿ ಮಂಗಳೂರಿನಲ್ಲಿ ಎಕ್ಸ್ ಪ್ರೆಸ್ ಬಸ್ಸು ಹತ್ತಿ ಸುರತ್ಕಲ್ ಸಮೀಪದ ಎನ್. ಐ.ಟಿ.ಕೆ. ಕಾಲೇಜಿನ ಬಳಿ ಆಮ್ನಿಯಲ್ಲಿ ಬಂದ ಅಪರಿಚಿತರು ಪ್ರಕಾಶನ್ನು ಎಳೆದು ಹಾಕಿ ಕೊಲೆಗೈದು ಪರಾರಿಯಾಗಿದ್ದಾರೆ. ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Comments

comments

Comments are closed.

Read previous post:
ಜಿ.ಎಸ್. ಬಿ ಪ್ರತಿಷ್ಠಾ ವರ್ಧಂತಿ ಮಹೋತ್ಸವ

ಕಿನ್ನಿಗೋಳಿ : ಜಿ.ಎಸ್. ಬಿ ಸಮಾಜದ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಮಂಗಳವಾರ ಕಿನ್ನಿಗೋಳಿ ಶ್ರೀ ರಾಮಂದಿರದಲ್ಲಿ ನಡೆಯಿತು.

Close