ಸಂಜೀವನಾಥ ಐಕಳ

ಮೂಲ್ಕಿ: ಸ್ವಾತಂತ್ರ್ಯಯೋಧ ಹಾಗೂ ಮಾಜಿ ಶಾಸಕ ಸಂಜೀವನಾಥ ಐಕಳ(95) ಗುರುವಾರ ಕಾರ್ನಾಡು ಮರ್ಕುಂಜದ ಮನೆಯಲ್ಲಿ ಬೆಳಿಗ್ಗೆ ನಿಧನರಾದರು. ಅವರು ಇಬ್ಬರು ಪುತ್ರರು ಮತ್ತು ಒರ್ವ ಪುತ್ರಿಯನ್ನು ಅಗಲಿದ್ದಾರೆ.

ಸ್ವಾತಂತ್ರ್ಯ ಹೋರಾಟ: 1936ರಲ್ಲಿ ಸ್ವಾತತ್ರ್ಯ ಚಳುವಳಿ ಯ ಗಾಳಿ ಬಲವಾಗಿ ಬೀಸುತ್ತಿರುವ ಸಮಯ ಮುಲ್ಕಿ ಯ ಮಹಾನ್ ಸ್ವಾತಂತ್ರ್ಯ ಹೋರಾಟಗರ ಕಾರ್ನಾಡು ಸದಾಶಿವ ರಾಯರು ಮುಲ್ಕಿ ಯ ಈಗಿನ ಗಾಂಧಿ ಮೈದಾನ ದಲ್ಲಿ ಮಾಡಿದ ಭಾಷಣ ದಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದವರು ಮಾನ್ಯ ಐಕಳರು.

ಜನನ ಮತ್ತು ವಿದ್ಯಾಬ್ಯಾಸ: ಮುಲ್ಕಿ ಸೀಮೆಯ ಗೌರವಾನ್ವಿತ ಐಕಳಬಾವ ಮನೆತನದಲ್ಲಿ 1921ರಲ್ಲಿ ಜನಿಸಿದರು.ಐಕಳ ನಿಡ್ಡೋಡಿ ಸತ್ಯನಾರಾಯಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದು ಪ್ರಾರಂಭ,ಮುಂದೆ ಮುಲ್ಕಿ ಸರ್ಕಾರಿ ಮಾದರಿ ಫೌಢಶಾಲೆಯಲ್ಲಿ ಕಲಿಕೆ.ಆ ಸಮಯದಲ್ಲಿ ಮುಲ್ಕಿಯಲ್ಲಿ ನಡೆಯುತಿದ್ದ ಸ್ವಾತಂತ್ರ್ಯ ಚಳುವಳಿಗೆ ಸೇರ್ಪಡೆ.1940ರಲ್ಲಿ ಬಳ್ಳಾರಿಗೆ ಪ್ರಯಾಣ ಪಂಡಿತ ತಾರಾನಾಥರಲ್ಲಿ ಅಯುರ್ವೇದ ಅದ್ಯಯನ ಮತ್ತು ವೃತ್ತಿ ಪ್ರಾರಂಭ.

ರಾಜಕೀಯ: ಜಯಪ್ರಕಾಶ ನಾರಾಯಣ್ ರವರ ಪ್ರಜಾ ಸೋಷಲಿಷ್ಟ್ ಪಕ್ಷವನ್ನು ಸೇರಿದ ಐಕಳರವರು 1961ರಲ್ಲಿ ಪಕ್ಷವನ್ನು ಪ್ರತಿನಿಧಿಸಿ ಗೆದ್ದು ಒಂದು ಅವಧಿಗೆ ಶಾಸಕರಾಗಿದ್ದಷ್ಟು ಸಮಯ ಅವರು ಮಾಡಿದ ಕೆಲಸ ಅವಿಸ್ಮರಣೀಯ.

ಶಿಕ್ಷಣ ಸೇವೆಯಲ್ಲಿ : ಪುನರೂರಿನ ಜೈ ಬಾರತಮಾತಾ ಶಾಲೆಯನ್ನು 1953ರಲ್ಲಿ ನಡೆಸಲು ಪಡೆದುಕೊಂಡ ಐಕಳರು ಶಾಲೆಗಾಗಿ ಮಾಡಿದ ತ್ಯಾಗ ಅಮೋಘ.

ವಿವಿದ ರಂಗಗಳಲ್ಲಿ: 1975ರಿಂದ ಲಯನ್ಸ್ ಸದಸ್ಯರಾಗಿ,ಬೆಳ್ತಂಗಡಿಯ ನಾಗರೀಕ ಹಿತ ರಕ್ಷಣಾ ಸಮಿತಿಯ ಸದಸ್ಯರಾಗಿ, ಶುದ್ಧ ಚಾರಿತ್ರ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಅಂತ್ಯಕ್ರಿಯೆ: ಶುಕ್ರವಾರ ಕಾರ್ನಾಡು ಮರ್ಕುಂಜದ ಮನೆ ಸಜನಿಯಿಂದ ಬೆಳಿಗ್ಗೆ ಗಂಟೆ 9ರಿಂದ ಮೃತರ ಅಂತಿಮ ಯಾತ್ರೆ ಹೊರಟು ಐಕಳದಲ್ಲಿ ಅಂತಿಮ ಕ್ರಿಯೆ ಜರುಗಲಿದೆ.

Mulki 06021401

Comments

comments

Comments are closed.

Read previous post:
ಸುರತ್ಕಲ್ ನಲ್ಲಿ ಕೊಲೆ ಪ್ರಕರಣ

ಸುರತ್ಕಲ್: ಸುರತ್ಕಲ್: ಪಣಂಬೂರು ಠಾಣಾ ವ್ಯಾಪ್ತಿಯ ಕೋಡಿಕೆರೆ ಎಂಬಲ್ಲಿ ಕಳೆದ 2012ರ ಜುಲೈ 19ರಂದು ರಾತ್ರಿ ನಡೆದಿದ್ದ ಮೆಕ್ಯಾನಿಕ್ ಶಿವರಾಜ್ ಕುಲಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜೈಲು ವಾಸದ...

Close