ಏಳಿಂಜೆಯಲ್ಲಿ ಕಬಡ್ಡಿ ಕ್ರೀಡಾಂಗಣಕ್ಕೆ ಮೂಹೂರ್ತ

ಕಿನ್ನಿಗೋಳಿ: ಶ್ರೀ ಲಕ್ಷ್ಮೀ ಜನಾರ್ಧನ ಮಹಾ ಗಣಪತಿ ದೇವಸ್ಥಾನದ ಬಳಿ ಫೆಬ್ರವರಿ 16 ಭಾನುವಾರ ಸ್ಥಳೀಯ ನವಚೇತನ ಯುವಕ ಮಂಡಲ, ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಶಿಯೇಶನ್ ಹಾಗೂ ಏಳಿಂಜೆ, ಉಳೆಪಾಡಿ, ಐಕಳ, ಪಟ್ಟೆ, ಶುಂಠಿಪಾಡಿ, ಗ್ರಾಮಸ್ಥರ ಸಹಕಾರದಿಂದ ನಡೆಯಲಿರುವ, ದ.ಕ-ಉಡುಪಿ-ಕಾಸರಗೋಡು, ಜಿಲ್ಲಾ ಮಟ್ಟದ ವಿಶೇಷ ಆಹ್ವಾನಿತ ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಪಂದ್ಯಾಟದ ಕ್ರೀಡಾಂಗಣದ ಮೂಹೂರ್ತವನ್ನು ಕ್ಷೇತ್ರದ ಆರ್ಚಕ ಗಣೇಶ್ ಭಟ್ ನೆರೆವೇರಿಸಿದರು. ಮೊಕ್ತೇಸರರಾದ ವೈ. ಯೋಗೀಶ್ ರಾವ್, ಗುಂಡು ಯಾನೆ ವಿಶ್ವನಾಥ ಶೆಟ್ಟಿ, ಯುವಕ ಮಂಡಲದ ಗೌರವಾಧ್ಯಕ್ಷ ಕೊಂಜಾಲಗುತ್ತು ಅನಿಲ್ ಶೆಟ್ಟಿ, ಅಧ್ಯಕ್ಷ ಕೃಷ್ಣ ಮೂಲ್ಯ, ಮತ್ತಿತರರು ಉಪಸ್ಥಿತರಿದ್ದರು.

Mulki 07021414

Comments

comments

Comments are closed.

Read previous post:
Mulki 07021402
ಸಂಜೀವನಾಥ ಐಕಳ ಅಂತಿಮ ಯಾತ್ರೆ

ಕಿನ್ನಿಗೋಳಿ: ಹಿರಿಯ ಸ್ವಾತಂತ್ಯ ಹೊರಾಟಗಾರ,ಮಾಜಿ ಶಾಸಕ ಸಂಜೀವನಾಥ ಐಕಳ ಗುರುವಾರ ಕಾರ್ನಾಡು ಮರ್ಕುಂಜದ ಮನೆ ಸಜನಿಯಲ್ಲಿ ನಿಧನ ಹೊಂದಿದ್ದು ಅವರ ಅಂತಿಮ ಯಾತ್ರೆ ಶುಕ್ರವಾರ ಬೆಳಿಗ್ಗೆ ಗಂಟೆ 9ರಿಂದ...

Close