ದೀನ ದಲಿತರ ಅವಶ್ಯಕತೆಗಳಿಗೆ ಸ್ಪಂದಿಸಬೇಕು

ಕಿನ್ನಿಗೋಳಿ: ಮಾನವೀಯ ಮೌಲ್ಯಗಳನ್ನು ಆಧರಿಸಿ ಸಾಮಾಜಿಕ ಕಳಕಳಿಯ ಸೇವೆ ಇಂದಿನ ದಿನಗಳಲ್ಲಿ ಅಗತ್ಯವಿದ್ದು ಸಮಾಜದ ದುರ್ಬಲರ ದೀನ ದಲಿತರ ಅವಶ್ಯಕತೆಗಳಿಗೆ ಸ್ಪಂದಿಸಿ ಸೇವಾ ಕಾರ್ಯಗಳನ್ನು ಮಾಡಬೇಕು ಎಂದು ೩೧೭ ಡಿ ಜಿಲ್ಲಾ ಗವರ್ನರ್ ಕೆ.ಸಿ.ಪ್ರಭು ಹೇಳಿದರು.
ಕಿನ್ನಿಗೋಳಿ ಚರ್ಚ್ ಸಭಾಂಗಣದಲ್ಲಿ ಇತ್ತಿಚೆಗೆ ನಡೆದ ಲಯನ್ಸ್ ಮತ್ತು ಲಯನೆಸ್ ಕ್ಲಬ್‌ಗಳ ಚಾರ್ಟರ್ ನೈಟ್ ಹಾಗೂ ಕ್ಲಬ್ಬಿನ ಅಧಿಕೃತ ಭೇಟಿಯ ಸಂದರ್ಭ ಮಾತನಾಡಿದರು.
ಈ ಸಂದರ್ಭ ಏಳಿಂಜೆ ಲಿಟ್ಲ್ ಫ್ಲವರ್ ಶಾಲೆಗೆ ನೀರಿನ ಟ್ಯಾಂಕ್, ಬಡಕುಟುಂಬ ಧನ ಸಹಾಯ, ಎರಡು ಬಡ ಕುಟುಂಬದ ಸದಸ್ಯರಿಗೆ ವಸ್ತ್ರವಿತರಣೆ, ಅಕಿ ವಿತರಣೆ ಹಾಗೂ ಶಾಲಾ ವಿದ್ಯಾರ್ಥಿನಿ ಪೂಜಾಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಚಾರ್ಟರ್ ಸದಸ್ಯರಾದ ಇ. ಶ್ರೀನಿವಾಸ ಭಟ್, ವೈ ಯೋಗೀಶ್ ರಾವ್, ಕೆ. ಮೋಹನ್‌ದಾಸ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ವಲಯಾಧ್ಯಕ್ಷ ಕೆ. ಜಗದೀಶ್ ಹೊಳ್ಳ, ಅರುಣ್ ಕುಮಾರ್ ಶೆಟ್ಟಿ, ಸುಧಾಕರ ಶೆಟ್ಟಿ, ಪೀಟರ್ ಪಿಂಟೊ, ಕಿನ್ನಿಗೋಳಿ ಚರ್ಚ್ ಪ್ರಧಾನ ಧರ್ಮಗುರು ವಂ| ಆಲ್ಫ್ರೆಡ್ ಜೆ. ಪಿಂಟೊ, ಮಾಜಿ ಗವರ್ನರ್ ಆಲ್ವಿನ್ ಪತ್ರಾವೊ ಮತ್ತು ವಿವಿಧ ಕ್ಲಬ್‌ಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಪ್ರಾಂತೀಯ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಶುಭಾಶಂಸನೆಗೈದರು. ಲಯನ್ಸ್ ಅಧ್ಯಕ್ಷ ವೈ. ಕೃಷ್ಣ ಸಾಲ್ಯಾನ್ ಸ್ವಾಗತಿಸಿ ಕಾರ್ಯದರ್ಶಿ ಫ್ರಾನ್ಸಿಸ್ ಸೆರಾವೊ
ವರದಿ ವಾಚಿಸಿದರು. ಲಾರೆನ್ಸ್ ಫೆರ್ನಾಂಡಿಸ್ ವಂದಿಸಿದರು.

Mulki 07021415

Comments

comments

Comments are closed.

Read previous post:
ಏಳಿಂಜೆಯಲ್ಲಿ ಕಬಡ್ಡಿ ಕ್ರೀಡಾಂಗಣಕ್ಕೆ ಮೂಹೂರ್ತ

ಕಿನ್ನಿಗೋಳಿ: ಶ್ರೀ ಲಕ್ಷ್ಮೀ ಜನಾರ್ಧನ ಮಹಾ ಗಣಪತಿ ದೇವಸ್ಥಾನದ ಬಳಿ ಫೆಬ್ರವರಿ 16 ಭಾನುವಾರ ಸ್ಥಳೀಯ ನವಚೇತನ ಯುವಕ ಮಂಡಲ, ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಶಿಯೇಶನ್ ಹಾಗೂ...

Close