ಸಂಜೀವನಾಥ ಐಕಳ ಅಂತಿಮ ಯಾತ್ರೆ

ಕಿನ್ನಿಗೋಳಿ: ಹಿರಿಯ ಸ್ವಾತಂತ್ಯ ಹೊರಾಟಗಾರ,ಮಾಜಿ ಶಾಸಕ ಸಂಜೀವನಾಥ ಐಕಳ ಗುರುವಾರ ಕಾರ್ನಾಡು ಮರ್ಕುಂಜದ ಮನೆ ಸಜನಿಯಲ್ಲಿ ನಿಧನ ಹೊಂದಿದ್ದು ಅವರ ಅಂತಿಮ ಯಾತ್ರೆ ಶುಕ್ರವಾರ ಬೆಳಿಗ್ಗೆ ಗಂಟೆ 9ರಿಂದ ಮನೆಯಿಂದ ಹೊರಟು ಮುಲ್ಕಿ ಬಸ್ ಸ್ಟಾಂಡ್, ಪುನರೂರು, ಕಿನ್ನಿಗೋಳಿ ಮೂರುಕಾವೇರಿ ಮೂಲಕ ಸಾಗಿ ಐಕಳ ಬಾವ ಕುಟುಂಬದ ಮನೆ ಸಮೀಪ ಅಂತ್ಯಕ್ರಿಯೆ ನಡೆಯಿತು. ಅಂತಿಮ ಯಾತ್ರೆಯುದ್ದಕ್ಕೂ ಸಾವಿರಾರು ಅಭಿಮಾನಿಗಳು ಹಾರ ಹಾಕಿ ತಮ್ಮ ನೆಚ್ಚಿನ ನಾಯಕರ ಅಂತಿಮ ದರ್ಶನ ಪಡೆದರು. ಅವರ ಪ್ರೀತಿಯ ಶಾಲೆ ಪುನರೂರು ಭಾರತಮಾತಾ ಹೈಸ್ಕೂಲು ಅವರಣದಲ್ಲಿ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಅಂತಿಮ ದರ್ಶನವನ್ನು ಪಡೆದರು.
ಈ ಸಂದರ್ಭ ಮಾಜಿ ಸಚಿವ ಕೆ. ಅಮರ್‌ನಾಥ ಶೆಟ್ಟಿ, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ನ್ಯಾಯವಾದಿ ಐಕಳ ಮುರಳೀಧರ ಶೆಟ್ಟಿ, ಐಕಳ ಭಾವ ದೇವಿಪ್ರಸಾದ್ ಶೆಟ್ಟಿ, ಚಿತ್ತರಂಜನ್ ಭಂಡಾರಿ, ಕಿನ್ನಿಗೋಳಿ ದುರ್ಗ ಪ್ರಸಾದ್ ಶೆಟ್ಟಿ, ಜಯಪಾಲ ಶೆಟ್ಟಿ, ಎಪಿ.ಎಂಸಿ. ಸದಸ್ಯ ಪ್ರಮೋದ್ ಕುಮಾರ್, ಜೊಸ್ಸಿಪಿಂಟೊ, ಶಾಲೆಟ್ ಪಿಂಟೊ, ಕೆ. ಭುವನಾಭಿರಾಮ ಉಡುಪ, ಹರಿಕೃಷ್ಣ ಪುನರೂರು, ಸುಚರಿತ ಶೆಟ್ಟಿ, ಕಸ್ತೂರಿ ಪಂಜ, ಈಶ್ವರ್ ಕಟೀಲು, ಮಂಗಳೂರು ದಾಯ್ಜಿ ವೀಕ್ಲಿ ಸಂಪಾದಕ ಹೇಮಾಚಾರ್ಯ, ಕಿನ್ನಿಗೋಳಿ ಉಮೇಶ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.

Mulki 07021401 Mulki 07021402 Mulki 07021403 Mulki 07021404 Mulki 07021405 Mulki 07021406 Mulki 07021407 Mulki 07021408 Mulki 07021409 Mulki 07021410 Mulki 07021411

Comments

comments

Comments are closed.

Read previous post:
ಪೈಪ್‌ಲೈನ್ ಕಾಮಗಾರಿ ಗುದ್ದಲಿ ಪೂಜೆ

ಕಿನ್ನಿಗೋಳಿ : ದ.ಕ.ಜಿಲ್ಲಾ ಪಂಚಾಯಿತಿ ಅನುದಾನದಿಂದ 3 ಲಕ್ಷ ರೂ. ವೆಚ್ಚದಲ್ಲಿ ನೀರಿನ ಪೈಪ್‌ಲೈನ್ ಕಾಮಗಾರಿಯ ಗುದ್ದಲಿ ಪೂಜೆಯನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ ನೆರವೇರಿಸಿದರು....

Close