ಅಂಗರಗುಡ್ಡೆ ಜುಮ್ಮ ಮಸೀದಿ ದಫ್ಪ್ ರಾತೀಬ್

ಕಿನ್ನಿಗೋಳಿ : ಕೆಂಚನೆಕೆರೆ ಸಮೀಪದ ಅಂಗರಗುಡ್ಡೆ ಅಲ್ ಮದರಸತುಲ್ ಬದ್ರಿಯಾ ಜುಮ್ಮ ಮಸೀದಿ ಕಮಿಟಿ ಆಶ್ರಯದಲ್ಲಿ 6ನೇ ವರ್ಷದ ಸ್ವಲಾತ್ ಹಾಗೂ 21 ನೇ ವಾರ್ಷಿಕೋತ್ಸವ ಹಾಗೂ ದಫ್ಪ್ ರಾತೀಬ್ ಕಾರ್ಯಕ್ರಮ ಅಂಗರಗುಡ್ಡೆ ಮಸೀದಿ ಆವರಣದಲ್ಲಿ ನಡೆಯಿತು.
ಮೂಡಿಗೆರೆಯ ಶೈಖುನಾ ಅಸ್ಸಯ್ಯದ್ ನಜೀಮುದ್ದೀನ್ ಪೊಕೋಯ ತಂಗಳ ಅಲ್ ಹೈದ್ರೋಸಿ ವಾಳ್ಯ ಆಶೀರ್ವಚನ ನೀಡಿದರು. ಮೂಲ್ಕಿ ಕೇಂದ್ರ ಶಾಫಿ ಜುಮ್ಮಾ ಮಸೀದಿಯ ಅಧ್ಯಕ್ಷ ಇಕ್ಬಾಲ್ ಅಹಮದ್ ಅಧ್ಯಕ್ಷತೆವಹಿಸಿದ್ದರು.
ಮೂಲ್ಕಿ ಕೇಂದ್ರ ಮಸೀದಿ ಖತೀಬರಾದ ಎಸ್. ಬಿ. ಮಹಮ್ಮದ್ ದಾರಿಮಿ, ರಾಜ್ಯ ಇಮಾಮ್ ಕೌನ್ಸಿಲ್ ಸದಸ್ಯ ಜಾಫರ್ ಸಾಧಿಕ್ ಫೈಝಿ, ಅಂಗರಗುಡ್ಡೆ ಮಸೀದಿಯ ಖತೀಬರಾದ ಉಮ್ಮರ್ ಫಾರೂಕ್ ಮದನಿ, ಕಾರ್ನಾಡ್ ಮಸೀದಿಯ ಮುಹಮ್ಮದ್ ಸಲೀಂ ಹನೀಫಿ, ಟಿ. ಕೆ. ಇಬ್ರಾಹಿಂ ಮುಸ್ಲಿಯಾರ್, ಉಡುಪಿ ಜೆಡಿಎಸ್ ಜಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು, ಎಂ. ಬಿ. ನೂರ್ ಮುಹಮ್ಮದ್, ಉದ್ಯಮಿ ರಿಜ್ವಾನ್, ಅಂಗರಗುಡ್ಡೆ ಮಸೀದಿ ಅಧ್ಯಕ್ಷ ರಿಯಾಝ್, ಕಾರ್ಯದರ್ಶಿ ನಿಸಾರ್ ಅಹಮ್ಮದ್, ಮುಹಮ್ಮದ್ ಶರೀಫ್, ಅಬ್ದುಲ್ ರಹಿಮಾನ್ ಗೇರುಕಟ್ಟೆ , ಮುಹಮ್ಮದ್ ಶರೀಫ್ ಉಚ್ಚಿಲ ಅಝೀಜ್ ಅಂಗರಗುಡ್ಡೆ ಉಪಸ್ಥಿತರಿದ್ದರು.

KInnigoli 10021410

Comments

comments

Comments are closed.

Read previous post:
ಕಟೀಲು ದೇವಳ ಮೂಲಸ್ಥಳ ಕುದುರು: ಗರ್ಭಗೃಹ ಪಾದುಕನ್ಯಾಸ

 ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿನ ಕುದುರು ಮೂಲಸ್ಥಳದಲ್ಲಿ 70 ಲಕ್ಷರೂ ವೆಚ್ಚದಲ್ಲಿ  ನಿರ್ಮಾಣವಾಗಲಿರುವ ಗರ್ಭಗೃಹಕ್ಕೆ  ಪಾದುಕನ್ಯಾಸ ಕಾರ್ಯಕ್ರಮ ಜ. 9 ಭಾನುವಾರ ನಡೆಯಿತು. ದೇವಳದ...

Close