ಕಿನ್ನಿಗೋಳಿ : ಕಂಬ್ಳ ಗುಡ್ಡಕ್ಕೆ ಬೆಂಕಿ

ಕಿನ್ನಿಗೋಳಿ : ಕಿನ್ನಿಗೋಳಿ ಪಂಚಾಯಿತಿ ವ್ಯಾಪ್ತಿಯ ಮೂರನೇ ವಾರ್ಡ್‌ನ ಬಟ್ಟಕೋಡಿ ಕಂಬ್ಳ ಪರಿಸರದಲ್ಲಿ ಆಕಸ್ಮಾತ್ ಆಗಿ ಗುಡ್ಡೆಗೆ ಬೆಂಕಿ ಬಿದ್ದ ಘಟನೆ ಭಾನುವಾರ ರಾತ್ರಿ ನಡೆದಿದೆ. ರಾತ್ರಿ ಸುಮಾರು 8 ಗಂಟೆ ವೇಳೆಗೆ ಸುಮಾರು 30ಎಕರೆ ಪರಿಸರದಲ್ಲಿ ಬೆಂಕಿ ವ್ಯಾಪಿಸಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ವಿಷಯ ತಿಳಿದ ಬೆರಳೆಣಿಕೆಯ ಸ್ಥಳೀಯರು ಹಾಗೂ ನಾಗರೀಕರು ಹರಸಾಹಸದಿಂದ ಬೆಂಕಿ ನಂದಿಸಿದರು. ಬೆಂಕಿ ನಂದಿಸುವ ಕಾರ್ಯದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಊರ ಜನರು ಒಟ್ಟು ಸೇರಿ ಬೆಂಕಿ ನಂದಿಸುವಲ್ಲಿ ಕೈಜೋಡಿಸದಿರುವುದು ವಿಷಾದನೀಯ ಘಟನೆಯಾಗಿದೆ.
ಅಗಾಧ ಪ್ರಮಾಣದ ಮುಳಿಹುಲ್ಲು, ತರಗೆಲೆ ನಿರ್ವಹಣೆ ಮಾಡದಿರುವುದರಿಂದ ಬೆಂಕಿ ಆಕಸ್ಮಿಕಕ್ಕೆ ಕಾರಣವಾಗುತ್ತಿದೆ ಪರಿಸರದ ಜಾಗದ ಮಾಲಕರು ತಮ್ಮ ಜಾಗವನ್ನು ಕಾಲ ಕಾಲಕ್ಕೆ ಸ್ವಚ್ಚವಾಗಿಟ್ಟು ಬೆಂಕಿ ಆಕಸ್ಮಿಕ ಆಗದಂತೆ ಎಚ್ಚರ ವಹಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಈ ಪ್ರದೇಶದಲ್ಲಿ ಪ್ರತೀ ವರ್ಷ ಬೆಂಕಿ ಬೀಳುತ್ತಿರುವುದು ಸರ್ವೆ ಸಾಮಾನ್ಯವಾಗಿದ್ದು ಇನ್ನಾದರೂ ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳು ಕಾಳಜಿ ವ್ಯಕ್ತಪಡಿಸಬೇಕಾಗಿದೆ ಎಂದು ಸ್ಥಳೀಯ ನಾಗರೀಕರು ತಿಳಿಸಿದ್ದಾರೆ.

KInnigoli 10021402 KInnigoli 10021403 KInnigoli 10021404 KInnigoli 10021405 KInnigoli 10021406 KInnigoli 10021407

Comments

comments

Comments are closed.

Read previous post:
ಮುಂಜಾನೆ ದಟ್ಟ ಮಂಜು

ಕಿನ್ನಿಗೋಳಿ : ಕಳೆದ ಎರಡು ದಿನಗಳಿಂದ ಮುಂಜಾನೆ ದಟ್ಟ ಮಂಜಿನಿಂದಾಗಿ ಕಿನ್ನಿಗೋಳಿ ಪರಿಸರದ ರಸ್ತೆಗಳಲ್ಲಿ ಬೆಳಗ್ಗೆ 8 ಗಂಟೆವರೆಗೂ ವಾಹನಗಳ ದೀಪ ಆರಿಸದೇ ಚಾಲಕರು ವಾಹನ ಚಲಾಯಿಸುತ್ತಿದ್ದಾರೆ.

Close