ಕಟೀಲು ದೇವಳ ಮೂಲಸ್ಥಳ ಕುದುರು: ಗರ್ಭಗೃಹ ಪಾದುಕನ್ಯಾಸ

 ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿನ ಕುದುರು ಮೂಲಸ್ಥಳದಲ್ಲಿ 70 ಲಕ್ಷರೂ ವೆಚ್ಚದಲ್ಲಿ  ನಿರ್ಮಾಣವಾಗಲಿರುವ ಗರ್ಭಗೃಹಕ್ಕೆ  ಪಾದುಕನ್ಯಾಸ ಕಾರ್ಯಕ್ರಮ ಜ. 9 ಭಾನುವಾರ ನಡೆಯಿತು. ದೇವಳದ ತಂತ್ರಿ ಕೃಷ್ಣ  ತಂತ್ರಿ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು. ದೇವಳದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ , ಹರಿನಾರಾಯಣದಾಸ ಆಸ್ರಣ್ಣ , ದೇವಳದ ಆಡಳಿತಾಧಿಕಾರಿ ಕೃಷ್ಣ ಮೂರ್ತಿ, ಬಲು ರಾಘವೇಂದ್ರ ಉಡುಪ, ದಾನಿಗಳಾದ ಪಡುಬಿದ್ರಿ  ಸುನಂದ ರೈ, ಸದಾನಂದ ಶೆಟ್ಟಿ , ಇಂಜಿನಿಯರ ವಿಷ್ಣುಮೂರ್ತಿ ಭಟ್ ಎಲ್ಲೂರು, ದಯಾಕರ ಭಂಡಾರಿ, ಪ್ರಬಂಧಕ ವಿಶ್ವೇಶ್ವರ ಭಟ್ ಮತ್ತಿತರರು ಉಪಸ್ಥಿತರಿದ್ದರು.

KInnigoli 10021411

Comments

comments

Comments are closed.

Read previous post:
ಫೆ.11: ಡಾ| ಸಂಜೀವನಾಥ ಐಕಳ : ಶ್ರದ್ಧಾಂಜಲಿ ಸಭೆ

 ಕಿನ್ನಿಗೋಳಿ : ಹಿರಿಯ ಸ್ವಾತಂತ್ಯ ಹೊರಾಟಗಾರ,ಮಾಜಿ ಶಾಸಕ ಧಾರ್ಮಿಕ, ಶೈಕ್ಷಣಿಕ, ಕೃಷಿ, ವೈದಕೀಯ, ಸಾಮಾಜಿಕ ಕ್ಷೇತ್ರದ ಸಾಧಕರಾಗಿರುವ ಡಾ| ಸಂಜೀವನಾಥ ಐಕಳ ಅವರು ಕಳೆದ ಫೆಬ್ರವರಿ 6 ಗುರುವಾರದಂದು...

Close