ಕಲಿಯುವ ಆಸಕ್ತಿಯಿದ್ದರೆ ಜೀವನ ಯಶಸ್ಸು

ಕಿನ್ನಿಗೋಳಿ : ಕಲಿಯುವ ಆಸಕ್ತಿಯಿದ್ದರೆ ಜೀವನದಲ್ಲಿ ಉತ್ತಮ ಯಶಸ್ಸನ್ನು ಕಾಣಬಹುದು ಎಂದು ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಕಿನ್ನಿಗೋಳಿಯ ನೇಕಾರ ಸೌಧ ಸಭಾಭವನದಲ್ಲಿ ಭಾನುವಾರ ನಡೆದ ಕಿನ್ನಿಗೋಳಿಯ ಕೆಐಸಿಟಿ ಹಾಗೂ ಎಂಸಿಟಿಸಿ ತಾಂತ್ರಿಕ ಮತ್ತು ಕಂಪ್ಯೂಟರ್ ಶಿಕ್ಷಣ ಸಂಸ್ಥೆಯ ೮ ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದರ್ಭ ಕಂಪ್ಯೂಟರ್ ಶಿಕ್ಷಣದಲ್ಲಿ ರ‍್ಯಾಂಕ್ ವಿಜೇತೆ ಶ್ರೀವಿದ್ಯಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಮೂಡಬಿದ್ರೆ ಆಳ್ವಾಸ್ ಕಾಲೇಜು ಉಪನ್ಯಾಸಕಿ ಸುಧಾರಾಣಿ, ನಿವೃತ್ತ ಅಂಚೆ ಸಿಬ್ಬಂದಿ ವೈ. ಕಿಟ್ಟ ಕರ್ಕೇರ, ವಿದ್ಯಾರ್ಥಿ ನಾಯಕ ಮುಹಮ್ಮದ್ ರಾಝೀನ್ , ಸಂಸ್ಥೆಯ ನಿರ್ದೇಶಕ ಹರ್ಷದ್ ಎಂ. ಎ, ಪ್ರಾಚಾರ್ಯ ನವೀನ್ ವೈ, ಕುಸುಮ, ಸುಮಾ, ಇರ್ಷಾದ್ ಮತ್ತಿತರರು ಉಪಸ್ಥಿತರಿದ್ದರು.

KInnigoli 10021409

Comments

comments

Comments are closed.

Read previous post:
ಕ್ರೀಡೆಯಲ್ಲಿ ಆರೋಗ್ಯ, ಮಾನಸಿಕ ಕ್ಷಮತೆ ಮುಖ್ಯ

ಕಿನ್ನಿಗೋಳಿ : ಕ್ರೀಡೆಯಲ್ಲಿ ಆರೋಗ್ಯ, ಮಾನಸಿಕ ಕ್ಷಮತೆ ಹಾಗೂ ಸಮನ್ವಯದ ಗುಣಗಳನ್ನು ಕಂಡುಕೊಳ್ಳಬೇಕು ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಶನಿವಾರ ರಾತ್ರಿ ತಾಳಿಪಾಡಿ ಗುತ್ತಕಾಡು...

Close