ಮೂಲ್ಕಿ : ನೀರುಪಾಲಾದ ವಿದ್ಯಾರ್ಥಿ

ಮೂಲ್ಕಿ:ಅಪಾಯಕಾರಿ ಈಜು ತಾಣವೆಂದೇ ಕುಖ್ಯಾತಿ ಪಡೆದಿರುವ ಮೂಲ್ಕಿ ಬಳಿಯ ಕೊಳಚಿಕಂಬಳದಲ್ಲಿ ಭಾನುವಾರ ಕಾಲೇಜು ವಿದ್ಯಾರ್ಥಿ ತಂಡವೊಂದು ಈಜಾಡಲು ತೆರಳಿದ್ದು ಮೂಲ್ಕಿ ಸೈಂಟ್ ಆನ್ಸ್ ಕಾಲೇಜಿನ ಗುಜರಾತ್ ಮೂಲದ ಜಿಗ್ನೇಶ್ (18)ಎಂಬಾತ ನೀರುಪಾಲಾಗಿದ್ದು ಈತನ ಶವ ಸುರತ್ಕಲ್ ಠಾಣಾ ವ್ಯಾಪ್ತಿಯ ಸಸಿಹಿತ್ಲು ಶಾಲೆಯ ಬಳಿಯ ಸಮುದ್ರ ಕಿನಾರೆಯಲ್ಲಿ ಸೋಮವಾರ ಮದ್ಯಾಹ್ನ ಪತ್ತೆಯಾಗಿದೆ. ಸುರತ್ಕಲ್ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭಾನುವಾರ ರಜಾ ದಿನವಾದುದರಿಂದ ಸೈಂಟ್ ಆನ್ಸ್ ಕಾಲೇಜಿನ ಸಹಪಾಠಿಗಳಾದ ಮಹೀಂದ್ರ ರಾಣ, ನಿತೇಶ್, ಪ್ರಕಾಶ್, ಜಿಗ್ನೇಶ್, ಸುಮರ್‌ಲಂಗ್ ಜೊತೆಗೆ ಸಂಜೆ ಈಜಾಡಲು ತೆರಳಿದ್ದಾಗ ಈ ದುರ್ಘಟನೆ ನಡೆದಿದೆ.
ಎಲ್ಲರೂ ಕೊಳಚಿಕಂಬಳದ ಶಾಂಭವಿ ನದಿಯ ದಡದ ಪಕ್ಕದಲ್ಲಿಯೇ ಈಜಾಡುತ್ತಿದ್ದರೆ ಜಿಗ್ನೇಶ್ ಮತ್ತು ವಿರಾಲ್ ಅಳವೆ ಬಾಗಿಲಿನತ್ತ ಈಜುತ್ತಾ ತೆರಳಿದ್ದು ಅಲ್ಲಿ ನೀರಿನ ಸೆಳೆತಕ್ಕೆ ಇಬ್ಬರೂ ಒಳಗಾದಾಗ ಉಳಿದವರು ವಿರಾಲ್‌ನನ್ನು ರಕ್ಷಿಸಲು ಯಶಸ್ಸಾದರು. ತೀವ್ರ ಗಾಯಗೊಂಡ ವಿರಾಲ್ ಮುಕ್ಕ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆಂದು ತಿಳಿದು ಬಂದಿದೆ. ಭಾನುವಾರದಿಂದ ಸೋಮವಾರ ಮಧ್ಯಾಹ್ನದವರೆಗೆ ಸ್ಥಳೀಯ ಈಜುಗಾರರು ಹಾಗೂ ಮಂಗಳೂರಿನ ಅಗ್ನಿಶಾಮಕ ದಳದ ಸಿಬ್ಬಂದಿಗಳು ಪರಿಸರದ ಸುತ್ತಲೂ ಜಿಗ್ನೇಶ್‌ಗಾಗಿ ಹುಡುಕಾಟ ನಡೆಸಿದ್ದರು.

Mulki 11021401

Puneethakrishna

Comments

comments

Comments are closed.

Read previous post:
ಕಲಿಯುವ ಆಸಕ್ತಿಯಿದ್ದರೆ ಜೀವನ ಯಶಸ್ಸು

ಕಿನ್ನಿಗೋಳಿ : ಕಲಿಯುವ ಆಸಕ್ತಿಯಿದ್ದರೆ ಜೀವನದಲ್ಲಿ ಉತ್ತಮ ಯಶಸ್ಸನ್ನು ಕಾಣಬಹುದು ಎಂದು ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು. ಕಿನ್ನಿಗೋಳಿಯ ನೇಕಾರ ಸೌಧ ಸಭಾಭವನದಲ್ಲಿ ಭಾನುವಾರ ನಡೆದ...

Close