ಸಮಾಜ ಸುಧಾರಕ ಡಾ| ಸಂಜೀವನಾಥ ಐಕಳ

ಕಿನ್ನಿಗೋಳಿ: ಡಾ| ಸಂಜೀವನಾಥ ಐಕಳರು ದೇಶಕ್ಕಾಗಿ ಹಾಗೂ ಶಿಕ್ಷಣಕ್ಕಾಗಿ ತನ್ನ ಸರ್ವಸ್ವವನ್ನು ಮುಡಿಪಾಗಿಟ್ಟ ಶ್ರೇಷ್ಟ ರಾಜಕಾರಣಿ ಹಾಗೂ ಸಮಾಜ ಸುಧಾರಕ. ಪುನರೂರು ಭಾರತಾಮಾತ ಶಾಲೆ ಸ್ಥಾಪಿಸಿ, ಅಭಿವೃದ್ಧಿಗಾಗಿ ಎಲ್ಲಾ ರೀತಿಯಲ್ಲಿ ಶ್ರಮಿಸಿ ಸಮಾಜಕ್ಕೆ ಉತ್ತಮ ಶೈಕ್ಷಣಿಕ ಕೊಡುಗೆ ನೀಡಿದ್ದಾರೆ. ಎಂದು ಮಾಜಿ ಸಚಿವ ಅಮರನಾಥ ಶೆಟ್ಟಿ ಹೇಳಿದರು.
ಹಿರಿಯ ಸ್ವಾತಂತ್ಯ ಹೊರಾಟಗಾರ, ಮಾಜಿ ಶಾಸಕ ಡಾ| ಸಂಜೀವನಾಥ ಐಕಳರ ಅಭಿಮಾನಿ ಬಳಗದವರಿಂದ ಮಂಗಳವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಐಕಳರು ಭ್ರಷ್ಟಚಾರ ರಹಿತ ರಾಜಕೀಯ ವ್ಯಕ್ತಿಯಾಗಿದ್ದರು. ಶಾಲೆಗಾಗಿ ತನ್ನ ಜಾಗವನ್ನು ಮಾರಿದ್ದಲ್ಲದೆ ಪ್ರೌಢ ಶಾಲೆಗೆ ಅನುದಾನ ಇಲ್ಲದ ಸಂದರ್ಭದಲ್ಲಿ ತನ್ನ ಶಾಸಕ ಹಾಗೂ ಸ್ವಾತಂತ್ಯ ಹೊರಾಟಗಾರ ಪಿಂಚಣಿ ಹಣದಿಂದ ಶಿಕ್ಷಕರ ಸಂಬಳ ನೀಡಿದ್ದರು. ಅವರ ತ್ಯಾಗ ಮನೋಭಾವ ಸ್ಮರಣೀಯವಾಗಿದೆ. ಎಂದು ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.

ಶಾಲೆಗಾಗಿ ತನ್ನ ಸರ್ವಸ್ವ ತ್ಯಾಗ ಮಾಡಿದ ಐಕಳರ ಪುತ್ಥಳಿಯನ್ನು ನಿರ್ಮಾಣ ಮಾಡಬೇಕು ಹಾಗೂ ಶಾಲೆಯನ್ನು ಕಾಲೇಜು, ಐ. ಟಿ. ಐಯನ್ನಾಗಿ ಅಭಿಮಾನಿಗಳು ಸಂಕಲ್ಪ ಮಾಡಬೇಕು ಎಂದು ಹಿರಿಯ ಸಾಹಿತಿ ಉಮೇಶ್ ರಾವ್ ಎಕ್ಕಾರ್ ತಿಳಿಸಿದರು.
ಐಕಳ ದೇವಿಪ್ರಸಾದ್ ಶೆಟ್ಟಿ ಮಾತನಾಡಿ ಶಾಲೆಯಲ್ಲಿ ಬೆಂಗಳೂರಿನ ದಾನಿ ರಿಜ್ವಾನ್ ಅವರ ಕೊಡುಗೆಯಾಗಿ ಐಕಳರ ಪುತ್ಥಳಿ ನಿರ್ಮಿಸಲಾಗುವುದು ಹಾಗೂ ಶಾಲೆಯನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.
ಬಿಜೆಪಿ ಮುಖಂಡ ಜಗದೀಶ ಅಧಿಕಾರಿ, ಕೆ. ಭುವನಾಭಿರಾಮ ಉಡುಪ, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ಕಟೀಲು ಪದವಿ ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ , ಕಟೀಲು ಪ. ಪೂ. ಕಾಲೇಜು ಪ್ರಿನ್ಸಿಪಾಲ್ ಜಯರಾಮ ಪೂಂಜಾ, ಎನ್. ಪಿ. ಶೆಟ್ಟಿ, ವೈ. ಕೃಷ್ಣ ಸಾಲಿಯಾನ್, ಪುನರೂರು ಶಾಲಾ ಮುಖ್ಯ ಶಿಕ್ಷಕ ರಾಘವೇಂದ್ರ ರಾವ್ ಐಕಳರ ಬಗ್ಗೆ ಮಾತನಾಡಿದರು. ಐಕಳರ ಅಭಿಮಾನಿಗಳು, ಕುಟುಂಬಿಕರು ಉಪಸ್ಥಿತರಿದ್ದರು.

Kinnigoli 12021408 Kinnigoli 12021409 Kinnigoli 12021410 Kinnigoli 120214113

Comments

comments

Comments are closed.

Read previous post:
ನೀರುಪಾಲಾದ ವಿದ್ಯಾರ್ಥಿಗೆ ಅಂತಿಮ ವಿದಾಯ

ಮೂಲ್ಕಿ: ಅಪಾಯಕಾರಿ ಈಜು ತಾಣವೆಂದೇ ಕುಖ್ಯಾತಿ ಪಡೆದಿರುವ ಮೂಲ್ಕಿ ಬಳಿಯ ಕೊಳಚಿಕಂಬಳದಲ್ಲಿ ಮೂಲ್ಕಿ ಸೈಂಟ್ ಆನ್ಸ್ ಕಾಲೇಜಿನ ವಿದ್ಯಾರ್ಥಿ ತಂಡವೊಂದು ಈಜಲು ಹೋಗಿ ನೀರು ಪಾಲಾದ ಘಟನೆ...

Close