ಮೋದಿ-ಅಭಯ ಫ್ಲೆಕ್ಸ್ ಸಮರ

ಮೂಲ್ಕಿ: ಲೋಕಸಭೆಯ ಚುನಾವಣೆಗೆ ವೇದಿಕೆ ಸಜ್ಜಾಗುತ್ತಿರುವಂತಹ ವಾತಾವರಣ ಈಗೀಗ ಫ್ಲೆಕ್ಸ್ ಬ್ಯಾನರ್ ಅಳವಡಿಸುವ ಮೂಲಕ ಗಮನ ಸೆಳೆಯುತ್ತಿದ್ದು ಇದರ ಒಂದು ಭಾಗವಾಗಿ ಮೂಲ್ಕಿಯಲ್ಲಿ ನರೇಂದ್ರ ಮೋದಿ ಹಾಗೂ ಅಭಯಚಂದ್ರರ ಬ್ಯಾನರ್ ರಾಜಕೀಯ ಸಮರ ಮುಗಿಲು ಮುಟ್ಟಿದ್ದು ಇಂದು ಬೆಳಿಗ್ಗೆ ಸಚಿವರ ಬ್ಯಾನರ್ ಹರಿಯುವುದರೊಂದಿಗೆ ಪರಿಸರವನ್ನು ಮತ್ತಷ್ಟು ಬಿಸಿ ಏರಿಸಿದೆ.
ಮೂಲ್ಕಿ ಬಳಿಯ ಶಿಮಂತೂರು ಆದಿ ಜನಾರ್ಧನ ದೇವಸ್ಥಾನದಲ್ಲಿ ಈಗ ಜಾತ್ರೆಯ ಸಡಗರ ಇಲ್ಲಿ ಈಗ ಬಿಜೆಪಿ ಹಾಗೂ ಕಾಂಗ್ರೇಸ್‌ನ ಕಾರ್ಯಕರ್ತರ ನಡುವೆ ಬ್ಯಾನರ್ ಪೈಪೋಟಿ ನಡೆದಿದ್ದು ಇದಕ್ಕೆಲ್ಲ ಕಾರಣ ಮೋದಿ ಮೋಡಿ ಎನ್ನಲಾಗಿದೆ. ಜಾತ್ರೆಯ ಸಂದರ್ಭದಲ್ಲಿ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ಶಿಮಂತೂರು ಪ್ರವೇಶ ದ್ವಾರದ ಬಳಿ ಅಧಿಕೃತವಾಗಿ ನರೇಂದ್ರ ಮೋದಿಯನ್ನು ಬೆಂಬಲಿಸುವ ಬೃಹತ್ ಫ್ಲೆಕ್ಸ್‌ನ್ನು ಅಳವಡಿಸಿದ್ದು ಸಹಜವಾಗಿ ಕಾಂಗ್ರೆಸ್ ಕಾರ್ಯಕರ್ತರನ್ನು ಕೆರಳಿಸಿತ್ತು.
ಶಿಮಂತೂರು ರಸ್ತೆಗೆ ಫೇವರ್ ಫಿನಿಶ್ ಡಾಮರು ಹಾಕಿಸಿದ ಸಚಿವ ಅಭಯಚಂದ್ರರನ್ನು ಕಡೆಗಣಿಸಿದ್ದರಿಂದ ಅವರ ಹೆಸರಿನ ಬೃಹತ್ ಬ್ಯಾನರ್ ಜೊತೆಗೆ ರಸ್ತೆಯ ಉದ್ದಕ್ಕೂ ಸುಮಾರು 10 ಬ್ಯಾನರ್‌ಗಳನ್ನು ಹಾಕುವ ಯೋಜನೆ ಸಜ್ಜಾಗಿತ್ತಲ್ಲದೆ ಪ್ರವೇಶ ದ್ವಾರದ ಬಳಿಯಲ್ಲಿ ಡೊಡ್ಡ ಕಟೌಟ್ ಸಹ ಒಂದು ದಿನದ ಹಿಂದೆ ಬಿದ್ದಿತು. ಇತ್ತ ಮೋದಿ ಪ್ರಿಯರು ಹಾಗೂ ಬಿಜೆಪಿಯ ಕಾರ್ಯಕರ್ತರು ಸೇರಿಕೊಂಡು ಎಳತ್ತೂರು ಶಿಮಂತೂರು ರಸ್ತೆಯನ್ನು ಸಂಸದ ನಳಿನ್‌ಕುಮಾರ್ ಕಟೀಲುರವರು ಪ್ರಧಾನ ಮಂತ್ರಿ ಸಡಕ್ ಯೋಜನೆಯಲ್ಲಿ ನಿರ್ಮಿಸಿದ್ದಾರೆ ಎಂದು ಹೇಳಿ ನಳಿನ್, ಮೋದಿಯೊಂದಿಗೆ ಮೂಲ್ಕಿಯಲ್ಲಿ ಅಗಲಿದ ಬಿಜೆಪಿ ನಾಯಕ ಸುಖಾನಂದ ಶೆಟ್ಟಿಯ ಭಾವಚಿತ್ರವಿರುವ ಬೃಹತ್ ಕಟೌಟ್ ಈಗ ರಾರಾಜಿಸುತ್ತಿದೆ.
ಈ ನಡುವೆ ಇಂದು ಬೆಳಿಗ್ಗೆ ಅದರ ಪಕ್ಕದಲ್ಲಿರುವ ಸಚಿವ ಅಭಯಚಂದ್ರರ ಬ್ಯಾನರ್ ಹರಿದ ಸ್ಥಿತಿಯಲ್ಲಿದ್ದು ಕಾಂಗ್ರೆಸ್ ಕಾರ್ಯಕರ್ತರನ್ನು ಕೆರಳಿಸಿದೆ ಇದು ಪ್ರತಿಭಟನೆ ನಡೆಸುವ ಹಂತಕ್ಕೆ ಬಂದು ಮೂಲ್ಕಿ ಠಾಣೆಗೆ ಪ್ರಕಾಶ್ ಎಂಬುವವರು ಕಾಂಗ್ರೆಸ್ ನಾಯಕರೊಂದಿಗೆ ಮೂಲ್ಕಿ ಠಾಣೆಗೆ ತೆರಳಿ ಶಿಮಂತೂರಿನ ಕಿಶೋರ್ ಶೆಟ್ಟಿ, ಸಂಪತ್ ಹಾಗೂ ಕಿಶೋರ್ ಮತ್ತಿರರು ಈ ಬ್ಯಾನರ್ ಹರಿದವರು ಎಂದು ಸಂಶಯದ ಮೇಲೆ ದೂರು ನೀಡಿದರು. ಈ ಬಗ್ಗೆ ಆರೋಪ ಹೊರಿಸಿದವರನ್ನು ಸಂಪರ್ಕಿಸಿ ಅವರ ಮೇಲೆ ಅಧಿಕೃತವಾಗಿ ಯಾವುದೇ ಪ್ರಕರಣ ದಾಖಲಿಸಿಕೊಳ್ಳದೇ ಕೇವಲ ಹೇಳಿಕೆಯನ್ನು ನೀಡಲು ತಿಳಿಸಿದ್ದರು.
ಸಂಜೆ ಆರೋಪ ಹೊತ್ತವರೊಂದಿಗೆ ಮೂಲ್ಕಿ ಠಾಣೆಗೆ ಬಿಜೆಪಿ ನಾಯಕರ ಸಹಿತ ಸುಮಾರು ನೂರಾರು ಕಾರ್ಯಕರ್ತರು ಬಂದು ಆರೋಪ ಮಾಡಿದವರ ಮೇಲೆಯೂ ಕ್ರಮ ಕೈಗೊಳ್ಳಬೇಕು ಸುಳ್ಳು ದೂರನ್ನು ದಾಖಲಿಸುವ ಮೊದಲು ಅವರು ಸತ್ಯ ಪ್ರಮಾಣ ಮಾಡಲು ಧಾರ್ಮಿಕ ಕ್ಷೇತ್ರಕ್ಕೆ ಬರಲಿ ಎಂದು ಸವಾಲು ಹಾಕಿದರಲ್ಲದೇ ತಮ್ಮ ಕಾರ್ಯಕರ್ತರ ಮೇಲೆ ಜೀವ ಬೆದರಿಕೆ ಹಾಕಿರುವುದನ್ನು ಬಿಜೆಪಿ ಕ್ಷೇತ್ರದ ಅಧ್ಯಕ್ಷ ಸುಚರಿತ ಶೆಟ್ಟಿ, ಜಗದೀಶ ಅಧಿಕಾರಿ, ಸತೀಶ ಅಂಚನ್, ಕೃಷ್ಣ ಶೆಟ್ಟಿಗಾರ್, ದೇವಪ್ರಸಾದ ಪುನರೂರು ಇನ್ನಿತರರು ತೀವ್ರವಾಗಿ ಆಕ್ರೋಶಿತರಾಗಿ ಖಂಡಿಸಿದ ಘಟನೆ ನಡೆಯಿತು.
ಕೊನೆಗೆ ಠಾಣೆಗೆ ಪ್ರಭಾರ ವೃತ್ತ ನಿರೀಕ್ಷಕ ವೆಲಂಟೆನ್ ಡಿಸೋಜಾ ಬಂದು ಅವರನ್ನು ಸಮಾಧಾನಿಸಿ ಆರೋಪ ಮಾಡಿದವರ ಪ್ರತಿಹೇಳಿಕೆಯನ್ನು ಪಡೆದರಲ್ಲದೇ ಕಿಶೋರ್ ಶೆಟ್ಟಿ ಎಂಬವರಿಗೆ ದೂರವಾಣಿ ಮೂಲಕ ಜೀವಬೆದರಿಕೆ ಹಾಕಿದ ಮೋಹನ್ ಕೋಟ್ಯಾನ್‌ರ ವಿರುದ್ಧ ದೂರು ನೀಡಲಾಯಿತು ಈ ಬಗ್ಗೆ ಸೂಕ್ತ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಆದರೆ ಈ ಫ್ಲೆಕ್ಸ್ ಬ್ಯಾನರ್ ಸಮರ ಹೀಗೆಯೇ ಮುಂದುವರಿದಲ್ಲಿ ಮೂಲ್ಕಿ ಪರಿಸರದಲ್ಲಿ ಅಶಾಂತಿ ಮೂಡುವುದು ಸಹಜ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಮೋದಿ ಟೀ ಸ್ಟಾಲ್ ಎಂಬ ಕಾನ್ಸೆಪ್ಟ್ ಜಾತ್ರೆಯಲ್ಲಿ ಬೆಳಕಿಗೆ ಬರಲಿದೆ ಎಂದು ಮೋದಿ ಅಭಿಮಾನಿಗಳು ಹೇಳಿಕೊಂಡಿದ್ದು ಅಂತೂ ಶಿಮಂತೂರು ಜಾತ್ರೆ ಸಡಗರದೊಂದಿಗೆ ಅವಘಡ ಆಗದಿರಲಿ ಎಂಬ ಹಾರೈಕೆ ಭಕ್ತರದ್ದು.

Kinnigoli 12021413

 Narendra Kerekadu

Comments

comments

Comments are closed.

Read previous post:
ಫೆ.18ರಂದು ಏಳಿಂಜೆಯಲ್ಲಿ ಲಕ್ಷ ಮೋದಕ ಹವನ

ಕಿನ್ನಿಗೋಳಿ: ಸುಮಾರು 900 ಸಂವತ್ಸರಗಳ ಇತಿಹಾಸವುಳ್ಳ ಕಿನ್ನಿಗೋಳಿ ಸಮೀಪದ ಏಳಿಂಜೆ ಕ್ಷೇತ್ರವೆಂದೇ ಸುಪ್ರಸಿದ್ಧವಾಗಿರುವ ಶ್ರೀ ಲಕ್ಷ್ಮೀಜನಾರ್ದನ ಮತ್ತು ಮಹಾಗಣಪತಿ ದೇವರ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ಮೋದಕ ಪ್ರಿಯ ಮಹಾಗಣಪತಿಗೆ...

Close