ಕಿನ್ನಿಗೋಳಿ ಬಸ್ಸು ನಿರ್ವಾಹಕನಿಗೆ ಗೂಸಾ

ಕಿನ್ನಿಗೋಳಿ: ಕಿನ್ನಿಗೋಳಿಯಿಂದ  ಮಂಗಳೂರು ಕಡೆಗೆ ಹೋಗುತ್ತಿದ್ದ ಬಸ್ಸೊಂದರ ನಿರ್ವಾಹಕನೊಬ್ಬನಿಗೆ ಯುವತಿಯನ್ನು ಚುಡಾಯಿಸಿದ ನೆಪದಲ್ಲಿಯುವತಿ ಕಡೆಯವರು ಕಿನ್ನಿಗೋಳಿ ಬಸ್ಸು ನಿಲ್ದಾಣದಲ್ಲಿ ಗೂಸಾ ಇಕ್ಕಿ ಎಳೆದುಕೊಂಡು ಬಂದು ಸೂಪರ್ ಮಾರ್ಕೇಟಿನ ಅಂಗಡಿಯ ಕೋಣೆಯಲ್ಲಿ ಕೂಡಿ ಹಾಕಿದ ಘಟನೆ ನಿನ್ನೆ ನಡೆದಿದೆ. ಈ ಸುದ್ದಿ ಹೇಗೋ ಮೂಲ್ಕಿ ಪೋಲೀಸರಿಗೆ ತಿಳಿದು ಬಂದಿದ್ದು ಪೋಲೀಸರು ಬರುವ ಮೊದಲೇ ನಿರ್ವಾಹಕನಿಗೆ ಯುವತಿ ಕಡೆಯವರು ಎಚ್ಚರಿಕೆ ನೀಡಿ ಕಳಿಸಿದ್ದಾರೆ.
ಹಳೆಯಂಗಡಿಯ ಬೊಳ್ಳೂರು ಪರಿಸರದ ಬಸ್ಸಿನ ನಿರ್ವಾಹಕ ಸಹಿತ ಮೂವರು ಯುವಕರು ಕಳೆದ ಹಲವಾರು ದಿನಗಳಿಂದ ಕಿನ್ನಿಗೋಳಿಯ ಬಸ್ಸು ನಿಲ್ದಾಣದಲ್ಲಿ ಹೂವು ಮಾರುತ್ತಿರುವ ಸಂಬಂದಿಕ ಯುವತಿಗೆ ಕೀಟಲೆ ಕೊಡುತ್ತಿದ್ದುದೇ ಅಲ್ಲದೆ ಮೊಬೈಲಿನಲ್ಲಿ ಚಿತ್ರ ತೆಗೆದು ಅಶ್ಲೀಲವಾಗಿ ವರ್ತಿಸುತ್ತಿರುವುದನ್ನು ಯುವತಿ ಮನೆಯವರಲ್ಲಿ ತಿಳಿಸಿದಾಗ ಪಡ್ಡೆ ಹುಡುಗರಿಗೆ ತಕ್ಕ ಪಾಠ ಕಲಿಸಲು ಸಿದ್ದರಾಗಿ ಯುವತಿ ಮನೆಯವರು ನಿನ್ನೆ ಮದ್ಯಾಹ್ನಯುವಕರು ಬರುವುದನ್ನೇ ಕಾದು ಬಸ್ಸಿನಿಂದ ಇಳಿಯುತ್ತಿದ್ದಂತೆ ಹಿಡಿಯಲೆತ್ನಿಸಿದಾಗ ಇಬ್ಬರು ಪರಾರಿಯಾಗಿ ಹಳೆಯಂಗಡಿ ಇಂದಿರಾನಗರದ ಟ್ಯಾಂಕ್ ಬಳಿಯ ನಿವಾಸಿ ಬಸ್ಸಿನ ನಿರ್ವಾಹಕ ಆದೀಶ್(22) ಎಂಬವನು ಸಿಕ್ಕಿ ಬಿದ್ದು ಗೂಸಾ ತಿಂದಿದ್ದಾನೆ. ಕೂಡಲೇ ಈತನನ್ನು ಎಳೆದುಕೊಂಡು ಹೋಗಿ ಬಸ್ಸು ನಿಲ್ದಾಣದ ಮೇಲ್ಬದಿಯಲ್ಲಿರುವ ಸೂಪರ್ ಮಾರ್ಕೇಟಿನ ಕೋಣೆಯಲ್ಲಿ ಕೂಡಿ ಹಾಕಿ ಪರಾರಿಯಾದ ಇನ್ನಿಬ್ಬರು ಬಾರದಿದ್ದರೆ ನಿನ್ನನ್ನು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡುತ್ತಿದ್ದಂತೆ ಜನ ಗುಂಪು ಕೂಡಲು ಶುರುವಾಗಿ ಮೂಲ್ಕಿ ಪೋಲೀಸರಿಗೆ ಮಾಹಿತಿ ನೀಡಿ ಪೋಲೀಸರು ಬರುತ್ತಿದ್ದಂತೆ ಯುವಕನಿಗೆ ಎಚ್ಚರಿಕೆ ನೀಡಿ ಕಳಿಸಿಕೊಟ್ಟಿದ್ದಾರೆ.

Puneethakrishna Sk

Comments

comments

Comments are closed.

Read previous post:
ಬಪ್ಪನಾಡು ನಾಗಮಂಡಲ ಸೇವೆಗೆ ಚಾಲನೆ

ಮೂಲ್ಕಿ: ಬಪ್ಪನಾಡು ಬಡಗುಹಿತ್ಲು ನಾಗಸಾನಿಧ್ಯದ ಜೀರ್ಣೋದ್ದಾರ ಮತ್ತು ನಾಗಮಂಡಲ ಸೇವೆಯ ಪೂರ್ವಭಾವಿಯಾಗಿ ಕ್ಷೇತ್ರದ ಕಛೇರಿ ಕಟ್ಟಡ ಹಾಗೂ ನಾಗಮಂಡಲೋತ್ಸವ ಕಾರ್ಯಕ್ರಮಗಳ ಚಾಲನೆಯನ್ನು ಎಡಪದವು ಶ್ರೀ ಕ್ಷೇತ್ರ ಶಾಸ್ತಾವು...

Close