ಜೀವನದ ಯಶಸ್ವಿಗೆ ಮೌಲ್ಯಯುತ ಸಂಸ್ಕಾರ ಅಗತ್ಯ

ಕಿನ್ನಿಗೋಳಿ: ಮನುಷ್ಯ ತನ್ನ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರವನ್ನು ಪೋಷಕರು ನೀಡಬೇಕು ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ಪದವಿ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ| ಸೋಂದಾ ಭಾಸ್ಕರ್ ಭಟ್ ಹೇಳಿದರು.
ಕಿನ್ನಿಗೋಳಿ ಸಮೀಪದ ಕೊಲ್ಲೂರು ಹಳೆ ವಿದ್ಯಾರ್ಥಿ ಸಂಘದ 30ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಬಳ್ಕುಂಜೆ ಗ್ರಾಮ ಪಂಚಾಯಿತಿ ಸದಸ್ಯ ವಿಲ್ಸನ್ ರೋಡ್ರಿಗಸ್ ವಾರ್ಷಿಕೋತ್ಸವವನ್ನು ಉದ್ಘಾಟಿಸಿದರು. ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್ ಅಧ್ಯಕ್ಷತೆ ವಹಿಸಿದ್ದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಬಳ್ಕುಂಜೆ ಚರ್ಚ್ ಧರ್ಮಗುರು ಫಾ| ಮೈಕಲ್ ಡಿಸಿಲ್ವ, ಕೊಲ್ಲೂರು ಆಯುರ್ವೇದ ಆಸ್ಪತ್ರೆ ವ್ಯೆದ್ಯಾಧಿಕಾರಿ ಡಾ| ಮುರಳೀಧರ್, ಮೂಲ್ಕಿ ಭಾರತ್ ಬ್ಯಾಂಕ್ ಶಾಖಾಧಿಕಾರಿ ಲಕ್ಷ್ಮೀನಾರಾಯಣ ಸಾಲ್ಯಾನ್, ಹಳೆ ವಿದ್ಯಾರ್ಥಿ ಸಂಘ ಸ್ಥಾಪಕ ಅಧ್ಯಕ್ಷ ಐತಪ್ಪ ಸಾಲ್ಯಾನ್, ಕಾರ್ಯದರ್ಶಿ ಸದಾಶಿವ ನಾಯ್ಕ್, ಶಾಲಾ ಮುಖ್ಯ ಶಿಕ್ಷಕಿ ಸುಧಾಸಿನಿ, ಪಂಚಾಯಿತಿ ಸದಸ್ಯೆ ಗೀತಾ ಆರ್ ಅಮೀನ್, ನೋಟರಿ ವಕೀಲರು ಬಿಪಿನ್ ಪ್ರಸಾದ್, ಗಂಗಾಧರ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಮೈಕಲ್ ರೋಡ್ರಿಗಸ್ ಸ್ವಾಗತಿಸಿದರು. ಮಾಲತಿ ನಾಯ್ಕ್ ವರದಿ ವಾಚಿಸಿ ಎಲ್ಲಪ್ಪ ಸಾಲ್ಯಾನ್ ವಂದಿಸಿದರು. ವಿನಯ್ ಕುಮಾರ್ ಮತ್ತು ಫ್ರೀಡಾ ರೋಡ್ರಿಗಸ್ ಕಾರ್ಯಕ್ರಮ ನಿರೂಪಿದರು.

ಮಕ್ಕಳಿಂದ ಹಾಗೂ ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಉಮೇಶ್ ಕೆ. ವಿರಚಿತ ಉಂದು ನಾಟಕ ಅತ್ತ್ ಎಂಬ ತುಳು ನಾಟಕ ನಡೆಯಿತು.

Balkunje 13021404 Balkunje 13021405 Balkunje 13021406 Balkunje 13021407

Comments

comments

Comments are closed.

Read previous post:
ಕೆಮ್ರಾಲ್ : ಲೋಹ ಸಂಗ್ರಹ ಕಾರ್ಯ

ಕಿನ್ನಿಗೋಳಿ: ವಲ್ಲಭಭಾಯಿ ಪಟೇಲ್ ಪ್ರತಿಮೆ ನಿರ್ಮಾಣಕ್ಕೆ ಅಗತ್ಯವಾಗಿರುವ ಲೋಹ ಸಂಗ್ರಹ ಕಾರ್ಯ ಕೆಮ್ರಾಲ್‌ನಲ್ಲಿ ನಡೆಯಿತು. ಈ ಸಂದರ್ಭ ಬಿಜೆಪಿ ಜಿಲ್ಲಾ ಮುಖಂಡರಾದ ಕಸ್ತೂರಿ ಪಂಜ, ಆಶಾ ರತ್ನಾಕರ ಸುವರ್ಣ,...

Close