ಕಿನ್ನಿಗೋಳಿಯಲ್ಲಿ ಮೋದಿ ಟೀ ಸ್ಟಾಲ್

ಕಿನ್ನಿಗೋಳಿ : ಕಾಂಗ್ರೆಸ್‌ನಿಂದಾಗಿ ದಿವಾಳಿ ಆಗುತ್ತಿರುವ ದೇಶವನ್ನು ರಕ್ಷಿಸಲು ನರೇಂದ್ರ ಮೋದಿಯಿಂದ ಮಾತ್ರ ಸಾಧ್ಯ, ಬಡವರು ಚಾ ಕುಡಿಯುವುದನ್ನು ಸಹ ಗೇಲಿ ಮಾಡುವ ನಾಯಕರಿಂದ ಈ ದೇಶ ಕಟ್ಟಲು ಸಾಧ್ಯವೇ ಎಂದು ಪ್ರತಿಯೊಬ್ಬರ ಮನದಲ್ಲಿ ಮೂಡುತ್ತಿದೆ. ದ.ಕ. ಜಿಲ್ಲೆಗೆ ಆಗಮಿಸುವ ನರೇಂದ್ರ ಮೋದಿಯನ್ನು ಸ್ವಾಗತಿಸಲು ದೇಶದ ಹಿತಬಯಸುವ ಪ್ರತಿಯೊಬ್ಬರು ಸಜ್ಜಾಗಿದ್ದಾರೆ ಎಂದು ಕಾರ್ಕಳದ ಶಾಸಕ ವಿ. ಸುನಿಲ್‌ಕುಮಾರ್ ಹೇಳಿದರು.
ಗುರುವಾರ ಕಿನ್ನಿಗೋಳಿ ಬಸ್ ನಿಲ್ದಾಣದಲ್ಲಿ ನರೇಂದ್ರ ಮೋದಿ ಟಿ ಸ್ಟಾಲ್‌ಗೆ ಚಾಲನೆ ನೀಡಿ ಮಾತನಾಡಿದರು.
ಬಿಜೆಪಿ ಕ್ಷೇತ್ರದ ಅಧ್ಯಕ್ಷ ಸುಚರಿತ ಶೆಟ್ಟಿಯವರಿಗೆ ಚಾ ವನ್ನು ನೀಡುವ ಮೂಲಕ ಮೋದಿ ಟಿ ಸ್ಟಾಲ್‌ಗೆ ಚಾಲನೆ ನೀಡಲಾಯಿತು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ರಿತೀಶ್ ಶೆಟ್ಟಿ, ಸದಸ್ಯರಾದ ಈಶ್ವರ ಕಟೀಲು, ಆಶಾ ಸುವರ್ಣ, ತಾ.ಪಂ.ಸದಸ್ಯರಾದ ಸಾವಿತ್ರಿ ಸುವರ್ಣ, ಬೇಬಿ ಸುಂದರ ಕೋಟ್ಯಾನ್, ಜೋಕಿಂ ಡಿ ಸೋಜಾ, ದ.ಕ. ಬಿಜೆಪಿ ಜಿಲ್ಲಾ ಸಮಿತಿಯ ಕೊಡೆತ್ತೂರು ಭುವನಾಭಿರಾಮ ಉಡುಪ, ಕಸ್ತೂರಿ ಪಂಜ, ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ದೇವಪ್ರಸಾದ ಪುನರೂರು, ನಾಗರಾಜ ಪೂಜಾರಿ, ಮೂಲ್ಕಿ ಶಕ್ತಿ ಕೇಂದ್ರದ ಅಧ್ಯಕ್ಷ ಸತೀಶ್ ಅಂಚನ್ ಮೂಲ್ಕಿ, ಮೆನ್ನಬೆಟ್ಟು ಗ್ರಾ.ಪಂ. ಅಧ್ಯಕ್ಷ ಜನಾರ್ದನ ಕಿಲೆಂಜೂರು, ಪಡುಪಣಂಬೂರು ಗ್ರಾ.ಪಂ. ಉಪಾಧ್ಯಕ್ಷೆ ಕುಸುಮಾ, ಸುದರ್ಶನ್ ಮೂಡಬಿದಿರೆ, ಆದರ್ಶ ಶೆಟ್ಟಿ ಎಕ್ಕಾರು, ಲೀಲಾ ಬಂಜನ್, ಕೃಷ್ಣ ಶೆಟ್ಟಿಗಾರ್, ಜೀವನ್ ಶೆಟ್ಟಿ ಅಂಗರಗುಡ್ಡೆ, ಶರತ್ ಕುಬೆವೂರು, ಪ್ರಾಣೇಶ್, ಮಾಧವ, ನವೀನ್ ರಾಜ್ ಬಪ್ಪನಾಡು ಮತ್ತಿತರರು ಉಪಸ್ಥಿತರಿದ್ದರು.

Kinnigoli 13021411 Kinnigoli 13021412 Kinnigoli 13021413

Comments

comments

Comments are closed.

Read previous post:
ಕಿನ್ನಿಗೋಳಿ: ವಿದ್ಯುತ್ ಬೀದಿ ದೀಪ ಕೊಡುಗೆ

ಕಿನ್ನಿಗೋಳಿ : ಕಿನ್ನಿಗೋಳಿ ಬಸ್ ನಿಲ್ದಾಣದಲ್ಲಿ ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್ ಪ್ರಾಯೋಜಿತ, ಕೊಡುಗೆಯಾಗಿ ನೀಡಿದ ವಿದ್ಯುತ್ ಬೀದಿ ದೀಪವನ್ನು ಬುಧವಾರ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಪಿ....

Close