ಯೋಜನೆಗಳ ವೈಜ್ಞಾನಿಕ ಅಧ್ಯಯನ ಅಗತ್ಯ : ನಳಿನ್

Kateel 14021405

ಕಿನ್ನಿಗೊಳಿ: ನೇತ್ರಾವತಿ ನದಿ ತಿರುವು ಹಾಗೂ ಎತ್ತಿನಹೊಳೆ ಯೋಜನೆಗಳ ವೈಜ್ಞಾನಿಕ ಅಧ್ಯಯನ ಆಗಬೇಕು ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು
ಶುಕ್ರವಾರ ಕಟೀಲಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ದಕ್ಷಿಣ ಕನ್ನಡದ ನೇತ್ರಾವತಿ ಕಣಿವೆಯಲ್ಲಿನ ಕೃಷಿಕರಿಗೆ ಹಾಗೂ ಮಂಗಳೂರಿನ ಜನತೆಗೆ ಕುಡಿಯುವ ನೀರಿನ ಅಭಾವ ಕರಾವಳಿಯ ಮೀನುಗಾರರು ತಮ್ಮ ಕಸುಬನ್ನು ಬಿಡುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು ನೇತ್ರಾವತಿ ತಿರುವು ಯೋಜನೆಯನ್ನು ಸ್ಪಷ್ಟವಾಗಿ ವಿರೋಧಿಸುತ್ತೇನೆ ಹಾಗೂ ಪ್ರತಿಭಟನೆಯಲ್ಲಿಯೂ ಮುಕ್ತವಾಗಿ ಭಾಗವಹಿಸುತ್ತೇನೆ. ನಿಡ್ಡೋಡಿ ಯೋಜನೆಗೆ ತಮ್ಮ ವಿರೋಧದ ನಿಲುವು ಸ್ಪಷ್ಟವಾಗಿದ್ದು ಜನರ ಹಾದಿ ತಪ್ಪಿಸುವ ಹೇಳಿಕೆಗಳನ್ನು ಜನಪ್ರತಿನಿಧಿಗಳು ನೀಡಬಾರದು ಪ್ರಾಮಾಣಿಕ ಪ್ರಯತ್ನ ಅಗತ್ಯ ಜನರ ಬೆಂಬಲಕ್ಕೆ ನಾವಿದ್ದೇವೆ ಎಂದು ಹೇಳಿದರು.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ದ.ಕ ಜಿಲ್ಲೆಗೆ 90 ಕಿಲೋ ಮೀಟರ್ ರಸ್ತೆ ರಚನೆಗೆ ಒಟ್ಟು 75.97ಕೋಟಿ ರೂ. ಬಿಡುಗಡೆ ಆಗಿದೆ. ಮಂಗಳೂರು ತಾಲೂಕಿನಲ್ಲಿ 22.4 ಕಿಲೋ ಮೀಟರ್ ರಸ್ತೆ ರಚನೆಗೆ 16.48 ಕೋಟಿ ಬಿಡುಗಡೆಯಾಗಿದ್ದು ಅದರಲ್ಲಿ ಅಂಗರಗುಡ್ಡೆ ಎಳತ್ತೂರು ಶಿಮಂತೂರು ರಸ್ತೆ, ಕುದ್ರಿಪದವು ಪಟ್ಟೆ ಕ್ರಾಸ್, ಸಂಕಲಕರಿಯ ರಸ್ತೆ, ರಾಜಗುಡ್ಡೆ ಪಾಲಡ್ಕ ಸಂಪಿಗೆ ಎಲ್ಯಾರ್ ಪದವು ರಸ್ತೆ, ಚೊಂಬುಗುಡ್ಡೆ ವರ್ಣಬೆಟ್ಟು ರಸ್ತೆಯನ್ನು ರಚನೆ ಮಾಡಲಾಗುತ್ತಿದ್ದು ಅದು ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಈ ಯೋಜನೆ ಕಾರ್ಯರೂಪಕ್ಕೆ ತರಲು ಎಲ್ಲಾ ಜನಪ್ರತಿನಿಧಿಗಳು ಹೊಣೆಗಾರರಾಗಿರುತ್ತಾರೆ ಆದರೆ ಯೋಜನೆಯೇ ತಮ್ಮದೆಂದು ಹೇಳುವುದು ತಕ್ಕುದ್ದಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕಳೆದ ಐದು ವರ್ಷದಲ್ಲಿ ಒಟ್ಟು 1340.83ಕೋಟಿ ರೂ. ಅನುದಾನದ ಕಾಮಗಾರಿ ನಡೆದಿದೆ. ನರೇಂದ್ರ ಮೋದಿ ಪ್ರಧಾನಿ ಆಗುವಲ್ಲಿ ಕರಾವಳಿ ಭಾಗದ ಜನತೆಯೂ ಆಶೀರ್ವಾದ ಮಾಡಲಿದ್ದಾರೆ.

ಆಮೆಗತಿಯಲ್ಲಿ ಸಾಗುತ್ತಿರುವ ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಕಳಪೆಯಾಗಿದ್ದು ಸಾರ್ವಜನಿಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ದೂರು ತಮ್ಮ ಗಮನಕ್ಕೆ ಬಂದಿದ್ದು ಈ ಬಗ್ಗೆ ಶೀಘ್ರದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳ ವಿಶೇಷ ಸಭೆ, ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ನಳಿನ್‌ಕುಮಾರ್ ಕಟೀಲು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕುವೈಟ್ ಮಂಗಳೂರು ವಿಮಾನಯಾನ ರದ್ದಾಗಬಾರದು.
ಕುವೈಟ್ ನಲ್ಲಿರುವ ಕರ್ನಾಟಕದ ದ.ಕ. ಆಸುಪಾಸಿನ ಜಿಲ್ಲೆಗಳು ಮತ್ತು ಕೇರಳದ ಅನಿವಾಸಿ ಭಾರತೀಯರಿಗೆ ನಿರಾಸೆ ಮೂಡಿಸಿದ್ದು ಏರ್ ಇಂಡಿಯ ಎಕ್ಸ್‌ಪ್ರೆಸ್ ಸಂಸ್ಥೆಯು ತನ್ನ ಕುವೈಟ್ ಮತ್ತು ಮಂಗಳೂರು ನಡುವಿನ ವಿಮಾನಯಾನವನ್ನು 15ನೇ ಫೆಬ್ರವರಿಯಿಂದ ಸ್ಥಗಿತ ಗೊಳಿಸಲು ನಿರ್ಧರಿಸಿರುವ ತೀರ್ಮಾನವನ್ನು ಹಿಂಪಡೆದು, ಮಂಗಳೂರು ಕುವೈಟ್ ವಿಮಾನ ಸೇವೆಗಳನ್ನು ಮುಂದುವರಿಸಬೇಕಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವರಲ್ಲಿ ಒತ್ತಾಯಮಾಡುತ್ತೇನೆ ಎಂದು ತಿಳಿಸಿದರು.

 

Comments

comments

Comments are closed.

Read previous post:
ಮಲ್ಲಿಗೆಯಂಗಡಿ ರಸ್ತೆ ಗುದ್ದಲಿಪೂಜೆ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾ, ಪಂ ವ್ಯಾಪ್ತಿಯ ಸಂಸದರ ನಿಧಿಯಿಂದ 5 ಲಕ್ಷ ರೂ ವೆಚ್ಚದಲ್ಲಿ ಮಲ್ಲಿಗೆಯಂಗಡಿ ರಸ್ತೆ ಡಾಮರೀಕರಣದ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶುಕ್ರವಾರ ಮಂಗಳೂರು ಸಂಸದ...

Close