ಹರ್ಷ ಮೊಯಿಲಿ ಮೂಲ್ಕಿಗೆ ಭೇಟಿ

ಮೂಲ್ಕಿ: ಅನಿರೀಕ್ಷಿತವಾಗಿ ಮಾದ್ಯಮಕ್ಕೂ ತಿಳಿಸದೆ ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ಹರ್ಷ ಮೊಯಿಲಿ ನಿನ್ನೆ ಬೆಳಗ್ಗೆ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಯ್ಯೋಟ್ಟು ಸದಾಶಿವ ಸಾಲ್ಯಾನ್‌ರ ಸಹಿತ ಪ್ರಮುಖ ನಾಯಕರನ್ನು ಗುಪ್ತವಾಗಿ ಭೇಟಿ ಮಾಡಿ ಮುಂದಿನ ಲೋಕಸಭಾ ಚುನಾವಣೆ ಬಗ್ಗೆ ರಣತಂತ್ರ ರೂಪಿಸಿ ಚರ್ಚೆ ನಡೆಸಿದ ಬಗ್ಗೆ ತಿಳಿದು ಬಂದಿದೆ.
ನಿನ್ನೆಬೆಳಿಗ್ಗೆ ಅನಿರೀಕ್ಷಿತವಾಗಿ ಜನಾರ್ದನ ಪೂಜಾರಿಯ ಭದ್ರ ಕೋಟೆಯಾದ ಮೂಲ್ಕಿಯ ವಿವಿದ ಕಡೆ ಭೇಟಿ ನೀಡಿ ಕಾಂಗ್ರೆಸ್ಸಿನ ಸ್ಥಳೀಯ ನಾಯಕರೊಂದಿಗೆ ಮಾತುಕತೆ ನಡೆಸಿದ ಹರ್ಷ ಮೊಯಿಲಿ ನಂತರ ನೇರವಾಗಿ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಅಧಿಕೃತವಾಗಿ ಭೇಟಿ ನೀಡಿಪಕ್ಷದ ಕಾರ್ಯಕರ್ತರೊಡನೆ ಇತ್ತೀಚೆಗೆ ಮೂಲ್ಕಿ ಪಟ್ಟಣ ಪಂಚಾಯತಿಯ ಸೋಲಿನ ಬಗ್ಗೆ ಅಹವಾಲುಗಳ ಸ್ವೀಕರಿಸುತ್ತಿದ್ದಾಗ ಕಾರ್ಯಕರ್ತರು ಸೋಲಿನ ಪರಾಮರ್ಶೆಯಲ್ಲಿ ಆರೋಪ ಪ್ರತ್ಯಾರೋಪಗಳನ್ನು ಮೊಯಿಲಿ ಜತೆ ಮಂಡಿಸುತ್ತಿದ್ದರು.ಹರ್ಷ ಮೊಯಿಲಿ ಆಗಮನದ ವಿವರ ಹೇಗೋ ಮಾದ್ಯಮಕ್ಕೆ ತಿಳಿದು ಬರುವಷ್ಟರಲ್ಲಿ ಚರ್ಚೆಯ ವಿವರವೇ ಬದಲಾಗಿ ಕೂಡಲೇ ಸಭೆ ಮೊಟಕುಗೊಳಿಸಲಾಯಿತು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ತಮ್ಮ ಲೋಕಸಭಾ ಅಭ್ಯರ್ಥಿ ಸ್ಥಾನಕ್ಕಾಗಿ ನಾಯಕರಲ್ಲಿ ಮನದಟ್ಟು ಮಾಡಲು ಪ್ರವಾಸ ಕೈಗೊಂಡಿದ್ದು, ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತನಾಗಿರುವುದರಿಂದ ಎಲ್ಲೂ ಗೊಂದಲವನ್ನು ನಿರ್ಮಿಸುವುದಿಲ್ಲ ಹಾಗೂ ಹಿರಿಯ ನಾಯಕ ಜನಾರ್ದನ ಪೂಜಾರಿಯವರು ಲೋಕಸಭೆಗೆ ಸ್ಪರ್ಧಿಸಿದಲ್ಲಿ ತಾನು ಸಹ ಅವರೊಂದಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಜವಬ್ದಾರಿ ಹೊರಲಿದ್ದೇನೆ ಎಂದು ಬೆಣ್ಣೆ ಸವರಿದ ಮಾತುಗಳನ್ನಾಡಿದರು..ಆದರೆ ಹರ್ಷ ಮೊಯಿಲಿ ಭೇಟಿ ಪೂಜಾರಿ ಪಾಳಯದಲ್ಲಿ ಕಸಿವಿಸಿ ಉಂಟಾಗಿದ್ದು ಪೂಜಾರಿಯ ಭದ್ರ ಕೋಟೆಯಾದ ಮೂಲ್ಕಿಗೇ ಹರ್ಷಮೊಯಿಲಿ ಕಾಲಿಟ್ಟದ್ದು ಪೂಜಾರಿ ಬೆಂಬಲಿಗರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ತಿಳಿದು ಬಂದಿದ್ದು ಪೂಜಾರಿ ಬೆಂಬಲಿಗರಿಗೆ ನಡುಕ ಶುರುವಾಗಿದೆ ಎಂದು ಕಾಂಗ್ರೆಸ್ಸಿನ ಮೂಲಗಳೇ ತಿಳಿಸಿವೆ. ಮೂಲ್ಕಿಯ ಘಟಾನುಘಟಿ ನಾಯಕರೇ ಈ ಸಭೆಗೆ ಬಂದಿದ್ದು ಎಐಸಿಸಿ ಸದಸ್ಯ ಕೃಷ್ಣ ಮೂರ್ತಿ, ನಾಯಕರಾದ ಅಶೋಕ್, ಪ್ರಭಾಕರ ಶೆಟ್ಟಿ, ಸ್ಥಳೀಯ ಮೂಲ್ಕಿ ನಗರ ಪಂಚಾಯತ್ ಸದಸ್ಯರಾದ ಬಿ.ಎಂ.ಆಸಿಫ್, ಪುತ್ತುಬಾವ, ವಿಮಲ ಪೂಜಾರಿ, ನಾಯಕರಾದ ವಸಂತ ಬೆರ್ನಾರ್ಡ್, ಗೋಪಿನಾಥ ಪಡಂಗ ಮುಖ್ಯವಾಗಿ ಕಾಣಿಸಿಕೊಂಡಿದ್ದು ಎಲ್ಲವೂ ಸಚಿವ ಅಭಯಚಂದ್ರರ ಅಣತಿಯಂತೆ ನಡೆಯುತ್ತಿದೆ ಎಂದು ಕಾಂಗ್ರೆಸ್ಸಿನ ಮೂಲಗಳು ತಿಳಿಸಿವೆ.

Mulki 14021401

Comments

comments

Comments are closed.

Read previous post:
ವಾರಿಜಾ ವಾಸುದೇವ ಆಚಾರ್ಯ

ಹಳೆಯಂಗಡಿ: ಹಳೆಯಂಗಡಿಯ ಶ್ರೀ ದುರ್ಗಾ ಜ್ಯುವೆಲ್ಲರ‍್ಸ್‌ನ ಸಂಸ್ಥಾಪಕ ಸ್ವರ್ಣೋದ್ಯಮಿಯಾಗಿ ಪ್ರಸಿದ್ಧರಾಗಿದ್ದ ಬೊಳ್ಳೂರು ದಿ.ವಾಸುದೇವ ಆಚಾರ್ಯರವರ ಪತ್ನಿ ವಾರಿಜಾ ವಾಸುದೇವ ಆಚಾರ್ಯ(80)ರವರು ಗುರುವಾರ ತಮ್ಮ ಬೊಳ್ಳೂರಿನ ಸ್ವಗೃಹದಲ್ಲಿ ನಿಧನರಾದರು. ವಾರಿಜಾ...

Close