ಏಳಿಂಜೆ ಕಬಡ್ಡಿ ಪಂದ್ಯಾಟ

ಕಿನ್ನಿಗೋಳಿ: ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ಮಹಾಗಣಪತಿ ಕ್ಷೇತ್ರದಲ್ಲಿ ಏಳಿಂಜೆ ನವಚೇತನ ಯುವಕ ಮಂಡಲ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಹಾಗೂ ಏಳಿಂಜೆ, ಐಕಳ, ಪಟ್ಟೆ, ಉಳೆಪಾಡಿ ಗ್ರಾಮಸ್ಥರ ಸಹಯೋಗದಿಂದ ಶ್ರೀ ಲಕ್ಷ್ಮೀ ಜನಾರ್ದನ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಪಂದ್ಯಾಟವನ್ನು ಏಳಿಂಜೆ ಕೋಂಜಾಲು ಗುತ್ತು ದಿವಾಕರ ಶೆಟ್ಟಿ ಉದ್ಘಾಟಿಸಿದರು.
ಈ ಸಂದರ್ಭ ಕಬಡ್ಡಿ ಕ್ಷೇತ್ರದ ಸಾಧಕರಾದ ವನಿತ, ಜಯ ಶೆಟ್ಟಿ ಶಿಮಂತೂರು, ಛಾಯ ಜಯ ಶೆಟ್ಟಿ ಹಾಗೂ ಉದಯ ಚೌಟ ಅವರನ್ನು ಸನ್ಮಾನಿಸಲಾಯಿತು.
ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ಮಹಾಗಣಪತಿ ದೇವಳದ ಆಡಳಿತ ಮೊಕ್ತೇಸರ ಏಳಿಂಜೆ ಕೋಂಜಾಲಗುತ್ತು ಪ್ರಭಾಕರ ಶೆಟ್ಟಿ, ದೇವಳದ ಅರ್ಚಕ ವೈ. ಗಣೇಶ್ ಭಟ್, ಸದಾನಂದ ಶೆಟ್ಟಿ ಭಂಡಸಾಲೆ, ಐಕಳ ಹರೀಶ ಶೆಟ್ಟಿ, ಭುವನಾಭಿರಾಮ ಉಡುಪ, ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಸಂಸ್ಥೆ ಅಧ್ಯಕ್ಷ ಬಿ. ಅಮರ್‌ನಾಥ್ ರೈ, ಪೊಂಪೈ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಫಾ. ಜೆರೋಮ್ ಡಿ’ಸೋಜಾ, ಮೂಲ್ಕಿ ವಿಜಯಾ ಕಾಲೇಜು ಪ್ರಿನ್ಸಿಪಾಲ್ ಕೆ. ಆರ್. ಶಂಕರ್, ಏಳಿಂಜೆ ನವಚೇತನ ಯುವಕ ಮಂಡಲ ಗೌರವಾಧ್ಯಕ್ಷ ಕೊಂಜಾಲಗುತ್ತು ಅನಿಲ್ ಶೆಟ್ಟಿ, ಅಧ್ಯಕ್ಷ ಕೃಷ್ಣ ಮೂಲ್ಯ, ರಘುರಾಮ ಅಡ್ಯಂತಾಯ, ವೈ. ಕೃಷ್ಣ ಸಾಲ್ಯಾನ್, ಏಳಿಂಜೆ ಭಂಡಸಾಲೆ ಬಾಲಕೃಷ್ಣ ಶೆಟ್ಟಿ, ಕಿಟ್ಟಣ್ಣ ಶೆಟ್ಟಿ, ಸಂಜೀವ ಶೆಟ್ಟಿ ನಂದನ ಮನೆ, ಸುಧಾಕರ ಶೆಟ್ಟಿ, ಜಯರಾಮ್ ಶೆಟ್ಟಿ, ಸಖರಾಂ ಶೆಟ್ಟಿ, ಗುಂಡು ಯಾನೆ ವಿಶ್ವನಾಥ ಶೆಟ್ಟಿ, ತುಳಸಿದಾಸ ಗಿಲಾನಿ, ಗುಣಪಾಲ್ ಶೆಟ್ಟಿ ಐಕಳ, ಮತ್ತಿತರರು ಉಪಸ್ಥಿತರಿದ್ದರು.
ಸಾಯಿನಾಥ ಶೆಟ್ಟಿ , ಶರತ್ ಶೆಟ್ಟಿ, ಕಾರ್ಯಕ್ರಮ ನಿರೂಪಿಸಿದರು.

Kinnigoli 17021418 Kinnigoli 17021419 Kinnigoli 17021420 Kinnigoli 17021421 Kinnigoli 17021422 Kinnigoli 17021423 Kinnigoli 17021424 Kinnigoli 17021425

Comments

comments

Comments are closed.

Read previous post:
ಕೃಷಿಭೂಮಿಯ ಅಭಿವೃದ್ಧಿಗೆ ಅಣೆಕಟ್ಟು ಅಗತ್ಯ

ಮೂಲ್ಕಿ: ಅಂತರ್‌ಜಲ ಅಭಿವೃದ್ದಿ ಹಾಗೂ ಕೃಷಿ ಭೂಮಿಯ ಅಭಿವೃದ್ದಿಗೆ ಇಂದಿನ ಯುಗದಲ್ಲಿ ಅಣೆಕಟ್ಟು ಅಗತ್ಯ, ಸ್ಥಳೀಯ ನಾಗರಿಕರು ಇದರ ಸದುಪಯೋಗಪಡಿಸಿಕೊಂಡು ಕೃಷಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಯುವಜನ...

Close