ಕೃಷಿಭೂಮಿಯ ಅಭಿವೃದ್ಧಿಗೆ ಅಣೆಕಟ್ಟು ಅಗತ್ಯ

ಮೂಲ್ಕಿ: ಅಂತರ್‌ಜಲ ಅಭಿವೃದ್ದಿ ಹಾಗೂ ಕೃಷಿ ಭೂಮಿಯ ಅಭಿವೃದ್ದಿಗೆ ಇಂದಿನ ಯುಗದಲ್ಲಿ ಅಣೆಕಟ್ಟು ಅಗತ್ಯ, ಸ್ಥಳೀಯ ನಾಗರಿಕರು ಇದರ ಸದುಪಯೋಗಪಡಿಸಿಕೊಂಡು ಕೃಷಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಯುವಜನ ಸಚಿವ ಅಭಯಚಂದ್ರ ಕರೆ ನೀಡಿದರು.

ಸುಮಾರು 40ಲಕ್ಷ ವೆಚ್ಚದಲ್ಲಿ ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದ ಬಳಿ ಸುತ್ತಮುತ್ತಲಿನ ಕೃಷಿಭೂಮಿ ಮತ್ತು ಆಂತರ್ಜಲ ವೃದ್ಧಿಗಾಗಿ ಆಣೆಕಟ್ಟುವಿನ ಶಂಖುಸ್ಥಾಪನೆಯನ್ನು ನಡೆಸಿಕೊಟ್ಟು ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಸಡಕ್ ಯೋಜನೆಯಿಂದ 5 ಕೋಟಿ 14 ಲಕ್ಷ ರೂಪಾಯಿ ವೆಚ್ಚದಲ್ಲಿ ಅಂಗರಗುಡ್ಡೆ-ಶಿಮಂತೂರು-ಪಂಜಿನಡ್ಕ ಸುಮಾರು 7 ಕಿಲೋಮೀಟರ್ ಉದ್ದದ್ದ ರಸ್ತೆಯ ಡಾಮರೀಕರಣ ಕೆಲಸ ಶೀಘ್ರದಲ್ಲಿ ನಡೆಸಲಾಗುವುದು ಸಚಿವರು ತಿಳಿಸಿದರು. ಹಾಗೂ ಶೀಘ್ರದಲ್ಲೇ ಮೂಲ್ಕಿ ಠಾಣೆಗೆ ನೂತನ ಪಿಸಿಆರ್ ವಾಹನದ ವ್ಯವಸ್ಥೆಯನ್ನೂ ಮಾಡಿಕೊಡಲು ಗೃಹಸಚಿವರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅರ್ಚಕ ರಾಮಚಂದ್ರ ಭಟ್ ಶಿಮಂತೂರು, ಶಿಮಂತೂರು ದೇವಳದ ಮೊಕ್ತೇಸರ ಉದಯಕುಮಾರ್ ಶೆಟ್ಟಿ, ಗೋಪೀನಾಥ ಪಡಂಗ, ಮನೋಹರ ಕೋಟ್ಯಾನ್, ಸೀತಾರಾಮ ಭಟ್ ಶಿಮಂತೂರು, ಉದ್ಯಮಿ ಉದಯ ಕುಮಾರ ಶೆಟ್ಟಿ, ಕಿಲ್ಪಾಡಿಪಂ ಮತ್ತಿತರರು ಉಪಸ್ಥಿತರಿದ್ದರು.

Kinnigoli 17021417

Comments

comments

Comments are closed.

Read previous post:
ಶ್ರೀ ಜಾರಂದಾಯ ದೈವಸ್ಥಾನ

ಮೂಲ್ಕಿ: ನಡಿಕುದ್ರು ಶ್ರೀ ಜಾರಂದಾಯ ದೈವಸ್ಥಾನದ ವಾರ್ಷಿಕ ಉತ್ಸವ ಪ್ರಯುಕ್ತ ಗಡುವಾಡು ನೇಮೋತ್ಸವ ಜರುಗಿತು. Bhagyawan Sanil

Close