ಜೀವವಿಮಾ ಪಾಲಿಸಿಗಳ ಬಗ್ಗೆ ಜಾಗೃತಿ

ಮೂಲ್ಕಿ; ಭಾರತ್ ಬ್ಯಾಂಕ್‌ನ ವ್ಯವಹಾರ ಹತ್ತು ಸಾವಿರ ಕೋಟಿ ರೂ. ದಾಟಿದ್ದು ಮುಂದಿನ ಐದು ವರ್ಷದಲ್ಲಿ 25 ಸಾವಿರ ಕೋಟಿ ರೂ. ವ್ಯವಹಾರ ನಡೆಸುವ ಗುರಿಯನ್ನು ಹೊಂದಿದ್ದು 100 ಶಾಖೆಗಳನ್ನು ತೆರೆಯುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಗ್ರಾಹಕರ ಹಿತದೃಷ್ಟಿಯಿಂದ ಹಲವಾರು ಯೋಜನೆಗಳು ಜಾರಿಯಾಗಿದ್ದು ಅದರಲ್ಲಿ ಜೀವವಿಮಾ ಪಾಲಿಸಿಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನ ನಡೆಸಿದೆ ಎಂದು ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸುವರ್ಣ ಹೇಳಿದರು.

ಮೂಲ್ಕಿ ಭಾರತ್ ಬ್ಯಾಂಕ್ ಶಾಖೆಯಲ್ಲಿ ಸೋಮವಾರ ಭಾರತೀಯ ಜೀವವಿಮಾ ನಿಗಮದ ಸಂಹಯೋಗದಲ್ಲಿ ನಡೆದ ಎಲ್‌ಐಸಿ ಪಾಲಿಸಿಯ ಮಾರಾಟದ ಸಪ್ತಾಹವನ್ನು ಚಾಲನೆ ನೀಡಿ ಮಾತನಾಡಿದರು.
ಭಾರತೀಯ ಜೀವವಿಮಾ ಸಂಸ್ಥೆಯ ಹಿರಿಯ ಅಧಿಕಾರಿಗಳಾದ ಶಶಿಧರ್ ಹಾಗೂ ಇ.ಬಿ.ಲೋಬೋರವರು ಜೀವವಿಮಾ ಪಾಲಿಸಿಯ ಬಗ್ಗೆ ಮಾಹಿತಿ ನೀಡಿದರು.
ಬ್ಯಾಂಕಿನ ನಿರ್ದೇಶಕ ಸೂರ್ಯಕಾಂತ್ ಸುವರ್ಣ, ದಕ್ಷಿಣ ಕನ್ನಡ ಜಿಲ್ಲಾ ವಲಯಾಧಿಕಾರಿ ಬಾಲಕೃಷ್ಣ ಕರ್ಕೇರ, ಮೂಲ್ಕಿ ಶಾಖಾ ಪ್ರಬಂಧಕ ಲಕ್ಷ್ಮೀನಾರಾಯಣ ಸಾಲ್ಯಾನ್, ಉಪ ಪ್ರಬಂಧಕ ರಾಜೀವ್ ಪೂಜಾರಿ, ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಯದೀಶ್ ಅಮಿನ್ ಕೊಕ್ಕರ್‌ಕಲ್, ಅಡ್ವೆ ಗರಡಿಮನೆ ರಾಮ ಪೂಜಾರಿ, ದೊಂಬ ಪೂಜಾರಿ, ಜಿನರಾಜ್ ಬಂಗೇರ, ಉದ್ಯಮಿಗಳಾದ ಶಶಿ ಅಮಿನ್, ಸಂತೋಷ್ ಪೂಜಾರಿ, ಅಡ್ವೆ ತಾರಾನಾಥ ಸುವರ್ಣ, ಸುಧೀರ್ ಕರ್ಕೇರ, ಲೋಕೇಶ್ ಅಮಿನ್, ನಾಗಭೂಷಣ್, ಸಂಪತ್ ಶೆಟ್ಟಿ, ಅನಿಲ್ ಬಂಗೇರ ಮುಕ್ಕ, ವಾಸು ಪೂಜಾರಿ, ಯೋಗೀಶ್ ಕೊಟ್ಯಾನ್, ತಾರಾನಾಥ ಹೆಜಮಾಡಿ, ಪಯ್ಯೋಟ್ಟು ಸದಾಶಿವ ಸಾಲ್ಯಾನ್ ಇನ್ನಿತರರು ಉಪಸ್ಥಿತರಿದ್ದರು.

Kinnigoli 19021423 Kinnigoli 19021424

Narendra Kerekadu

Comments

comments

Comments are closed.

Read previous post:
ಕೊಲ್ನಾಡು – ಕಾರುಗಳೆರಡರ ಅಪಘಾತ

ಮೂಲ್ಕಿ; ರಾಷ್ಟ್ರೀಯ ಹೆದ್ದಾರಿ 66ರ ಕೋಲ್ನಾಡಿನ ಗುಂಡಾಲುಗುತ್ತು ಬಳಿ ಓಮ್ನಿ ಮತ್ತು ಸ್ವಿಫ್ಟ್ ಕಾರುಗಳೆರಡು ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಒಮ್ನಿ ಕಾರಿನ ಚಾಲಕ ತೀವ್ರ ಗಾಯಗೊಂಡು ಮುಕ್ಕ...

Close