ಕೊಲ್ನಾಡು – ಕಾರುಗಳೆರಡರ ಅಪಘಾತ

ಮೂಲ್ಕಿ; ರಾಷ್ಟ್ರೀಯ ಹೆದ್ದಾರಿ 66ರ ಕೋಲ್ನಾಡಿನ ಗುಂಡಾಲುಗುತ್ತು ಬಳಿ ಓಮ್ನಿ ಮತ್ತು ಸ್ವಿಫ್ಟ್ ಕಾರುಗಳೆರಡು ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಒಮ್ನಿ ಕಾರಿನ ಚಾಲಕ ತೀವ್ರ ಗಾಯಗೊಂಡು ಮುಕ್ಕ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಬಪ್ಪನಾಡು ಮೇಳದ ವ್ಯವಸ್ಥಾಪಕರಾದ ವಿನೋದಕುಮಾರ್ ಎಂಬವರ ಚಾಲಕ ಮಂಗಳೂರಿನ ಬೋಂದೇಲ್ ನಿವಾಸಿ ಸುರೇಶ(೨೨) ಎಂಬವರು ಚಲಾಯಿಸುತ್ತಿದ ಓಮ್ನಿ ಕಾರು ಅತೀ ವೇಗದಿಂದ ಮೂಲ್ಕಿ ಕಡೆಗೆ ಹೋಗುತ್ತಿದ್ದು ಮಣಿಪಾಲದಿಂದ ಪತ್ರಕರ್ತರನ್ನು ಕರೆದುಕೊಂಡು ಬಜಪೆ ಕಡೆಗೆ ಹೋಗುತ್ತಿದ್ದ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದು ಸಿನಮೀಯ ಮಾದರಿಯಲ್ಲಿ ಪಲ್ಟಿಯಾಗಿ ಹೆದ್ದಾರಿಯಲ್ಲಿ ಬಿದ್ದು ಚಾಲಕ ಅದರಲ್ಲೇ ಸಿಕ್ಕಿ ಹಾಕಿಕೊಂಡು ಒದ್ದಾಡುತ್ತಿದ್ದಾಗ ಸ್ಥಳೀಯರು ಪ್ರಯಾಸದಿಂದ ಹೊರ ತೆಗೆದು ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ.ಅಫಘಾತ ಎಷ್ಟು ತೀವ್ರವಾಗಿತ್ತೆಂದರೆ ಓಮ್ನಿ ಪೂರಾ ಹುಡಿ ಹುಡಿಯಾಗಿದೆ. ಅಪಘಾತದ ಸಂದರ್ಭ ಹೆದ್ದಾರಿ ಕೂಡ ಬ್ಲಾಕ್ ಆಗಿದ್ದು ಕೂಡಲೇ ಮುಲ್ಕಿ ಪೋಲೀಸರು ಮತ್ತು ಸ್ಥಳೀಯರು ವಾಹನಗಳನ್ನು ಬದಿಗೆ ಸರಿಸಿ ಹೆದ್ದಾರಿಯನ್ನು ತೆರವುಗೊಳಿಸಿದರು. ಬಪ್ಪನಾಡು ಮೇಳದ ವ್ಯವಸ್ಥಾಪಕರ ಓಮ್ನಿ ಚಾಲಕನ ನಿರ್ಲ್ಯಕ್ಷ ಚಾಲನೆಯೇ ಅಫಘಾತಕ್ಕೆ ಕಾರಣ ಎನ್ನಲಾಗಿದೆ.

Kinnigoli 19021421 Kinnigoli 19021422

Puneethakrishna Sk

Comments

comments

Comments are closed.

Read previous post:
ಮೂಲ್ಕಿ: ಶೃದ್ದಾಂಜಲಿ ಸಭೆ

ಮೂಲ್ಕಿ: ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಜನತೆಗೆ ಸ್ವಾಭಿಮಾನದ ಪಾಠವನ್ನು ನೀಡುವುದರೊಂದಿಗೆ ಉತ್ತಮ ಜನಪ್ರತಿನಿಧಿಯಾಗಿ ಮಾದರಿ ಸೇವೆ ನೀಡಿದ ಸ್ವಾತಂತ್ರ್ಯ ಹೋರಾಟಗಾರ ಡಾ. ಸಂಜೀವನಾಥ ಐಕಳ ಮತ್ತು ಸ್ವಾತಂತ್ರ್ಯ...

Close