ಮೂಲ್ಕಿ: ಶೃದ್ದಾಂಜಲಿ ಸಭೆ

ಮೂಲ್ಕಿ: ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಜನತೆಗೆ ಸ್ವಾಭಿಮಾನದ ಪಾಠವನ್ನು ನೀಡುವುದರೊಂದಿಗೆ ಉತ್ತಮ ಜನಪ್ರತಿನಿಧಿಯಾಗಿ ಮಾದರಿ ಸೇವೆ ನೀಡಿದ ಸ್ವಾತಂತ್ರ್ಯ ಹೋರಾಟಗಾರ ಡಾ. ಸಂಜೀವನಾಥ ಐಕಳ ಮತ್ತು ಸ್ವಾತಂತ್ರ್ಯ ಸೇನಾನಿ ಹಾಗೂ ಹಿರಿಯ ಕೃಷಿಕ ಉಪ್ಪಿಕಳ ರಾಮರಾವ್ ಎಂದಿಗೂ ಸ್ಮರಣೀಯರು ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಸೋಮವಾರ ಮೂಲ್ಕಿ ಲಯನ್ಸ್ ಕ್ಲಬ್‌ನಲ್ಲಿ ನಡೆದಲಯನ್ಸ್ ಮತ್ತು ಸಾರ್ವಜನಿಕ ಶೃದ್ದಾಂಜಲಿ ಸಮಿತಿ ಸಂಯೋಜನೆಯಲ್ಲಿ ನಡೆದ ಶೃದ್ದಾಂಜಲಿ ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಡಾ. ಸಂಜೀವನಾಥ ಐಕಳ ಮತ್ತು ಉಪ್ಪಿಕಳ ರಾಮರಾವ್ ರವರಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಈ ಸಂದರ್ಭ ಮೂಲ್ಕಿ ಲಯನ್ಸ್ ಅಧ್ಯಕ್ಷ ಧನಂಜಯ ಮಟ್ಟು,ಕಾರ್ಯದರ್ಶಿ ಪ್ರೊ.ನಾರಾಯಣ,ಸರ್ವೋತ್ತಮ ಅಂಚನ್, ಆನಂದ ದೇವಾಡಿಗಾ,ಬಾಲಚಂದ್ರ ಸನಿಲ್,ವಿಜಯಕುಮಾರ್ ಕುಬೆವೂರು, ಎಂ.ಸದಾಶಿವ,ಸುಂದರ ಮತ್ತಿತರರು ಉಪಸ್ಥಿತರಿದ್ದರು.

Kinnigoli 19021420.

Bhagyawan Sanil

Comments

comments

Comments are closed.

Read previous post:
Kinnigoli 19021413
ಏಳಿಂಜೆ ಲಕ್ಷ ಮಹಾಮೋದಕ ಯಾಗ

ಕಿನ್ನಿಗೋಳಿ: ಫೆಬ್ರವರಿ 18 ಮಂಗಳವಾರ ಅಂಗಾರಿಕಾ ಸಂಕಷ್ಠಿಯ ದಿನ ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ಮತ್ತು ಮಹಾಗಣಪತಿ ದೇವರ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ಮೋದಕ ಪ್ರಿಯ ಮಹಾಗಣಪತಿಗೆ ಸಾಮೂಹಿಕ ಲಕ್ಷಮೋದಕ...

Close