ಗುತ್ತಕಾಡು ಶಾಲೆಗೆ ಧ್ವನಿ ವರ್ಧಕ ಕೊಡುಗೆ

ಕಿನ್ನಿಗೋಳಿ: ಸೂಕ್ತ ಸವಲತ್ತು, ಶಿಕ್ಷಣ ಹಾಗೂ ಪ್ರೋತ್ಸಾಹ ನೀಡಿದಲ್ಲಿ ವಿದ್ಯಾರ್ಥಿಗಳು ಪ್ರತಿಭಾವಂತರಾಗುತ್ತಾರೆ ಎಂದು ಮಂಗಳೂರಿನ ಉದ್ಯಮಿ ವಿನಯ ಕುಮಾರ್ ಹೇಳಿದರು.
ಸೋಮವಾರ ಕಿನ್ನಿಗೋಳಿ ಸಮೀಪದ ಗುತ್ತಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಮಾರು 50 ಸಾವಿರ ವೆಚ್ಚದ ಧ್ವನಿವರ್ಧಕ ಉಪಕರಣಗಳನ್ನು ಕೊಡುಗೆಯಾಗಿ ನೀಡಿ ಮಾತನಾಡಿದರು.
ಮಂಗಳೂರು ಕೇಂದ್ರ ಗ್ರಂಥಾಲಯ ಕೊಡ ಮಾಡಿದ ಪುಸ್ತಕಗಳನ್ನು ಉದಯ ರವಿ ಶೆಟ್ಟಿ ಹಸ್ತಾಂತರಿಸಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ, ಗ್ರಾಮ ಪಂಚಾಯಿತಿ ಸದಸ್ಯ ಟಿ.ಎಚ್. ಮಯ್ಯದ್ದಿ, ಶಾಂತ, ಎಸ್.ಡಿ.ಎಮ್.ಸಿ ಅಧ್ಯಕ್ಷ ನಾರಾಯಣ ಪೂಜಾರಿ, ವಿವೇಕಾನಂದ, ಶಾಲಾ ಮುಖ್ಯ ಶಿಕ್ಷಕಿ ಉಷಾ ರಾಮದಾಸ್, ಶಾಲಾ ಶಿಕ್ಷಕರಾದ ಹರಿರಾವ್, ತನುಜ ಕೆ., ಅನುರಾಧ ಸಿ.ಎನ್. ಮತ್ತು ಎಸ್.ಡಿ.ಎಮ್.ಸಿ ಸದಸ್ಯರು ಉಪಸ್ಥಿತರಿದ್ದರು.

Kinnigoli 20021401 Kinnigoli 20021402

Comments

comments

Comments are closed.

Read previous post:
ಮೂಲ್ಕಿಯಲ್ಲಿ ಭೀಕರ ಅಫಘಾತ

ಮೂಲ್ಕಿ :  ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರು ಕಡೆಗೆ ಹೋಗುವ ಬಸ್ಸು ನಿಲ್ದಾಣದ ಬಳಿ ಬುಧವಾರ ರಾತ್ರಿ ಕಾಂಕ್ರೀಟ್ ಮಿಕ್ಸ್ ಲಾರಿ ಮತ್ತು ಸರಕು ಲಾರಿ ಮುಖಾಮುಖಿ ಡಿಕ್ಕಿ...

Close