ಕಟೀಲು: ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಸನ್ಮಾನ

ಕಿನ್ನಿಗೋಳಿ: ಯಕ್ಷಗಾನ ಕಲೆ ಸಂಸ್ಕೃತಿ, ಧರ್ಮದ ಸಂಕೇತ ನೂರಾರು ವರ್ಷ ಬಾಳುವುದರ ಜೊತೆಗೆ ಜನರನ್ನು ಸಂಸ್ಕಾರವಂತರನ್ನಾಗಿಯೂ ಮಾಡುತ್ತದೆ. ಕಲಾ ಸಂಘಟಕ ಕಲಾವಿದರನ್ನು ಗೌರವಿಸುವುದು ನಾಡಿನ ಸಂಸ್ಕೃತಿಯನ್ನು ಗೌರವಿಸಿದಂತೆ ಎಂದು ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಬುಧವಾರ ಕಿನ್ನಿಗೋಳಿಯ ಭ್ರಾಮರಾಂಬಿಕೆ ನಿವಾಸದಲ್ಲಿ ಮುಂಬಯಿ ಉದ್ಯಮಿ ಐಕಳ ಹರೀಶ್ ಶೆಟ್ಟಿ ಹಾಗೂ ಅನ್ನದ ಗುತ್ತು ಯಮುನಾ ಶೆಟ್ಟಿ ಯವರ ಬಾಬ್ತು ನಡೆದ 25 ನೇ ವರ್ಷದ ಕಟೀಲು ಮೇಳದ ಯಕ್ಷಗಾನ ಬಯಲಾಟ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭ ಕಟೀಲು ಆರು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಮುಂಬಯಿ ಹಾಗೂ ಊರಿನ ಗಣ್ಯರನ್ನು ಹಾಗೂ ಮೇಳದ 49 ಹಿಮ್ಮೇಳ ಮುಮ್ಮೇಳ ಕಲಾವಿದರನ್ನು ಗೌರವಿಸಲಾಯಿತು.
ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಿದ್ದರು. ಕಟೀಲು ದೇವಳ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ , ಕಮಲಾದೇವಿಪ್ರಸಾದ್ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ , ಮಾಜಿ ಸಚಿವ ಅಮರನಾಥ ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಸಿ. ಎ. ಶಂಕರ ಶೆಟ್ಟಿ , ಬೆಳಗಾವಿ ಬಂಟರ ಸಂಘದ ಅಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ , ಮುಂಡ್ಕೂರು ಅನ್ನದಗುತ್ತು ಯಮುನ ಶೆಟ್ಟಿ, ಚಂದ್ರಿಕಾ ಹರೀಶ್ ಶೆಟ್ಟಿ , ಅರ್ಜುನ್ ಶೆಟ್ಟಿ , ಸನ್ನಿಧಿ ಶೆಟ್ಟಿ, ಪುರುಷೋತ್ತಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಐಕಳ ಹರೀಶ್ ಶೆಟ್ಟಿ ಸ್ವಾಗತಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli 20021405

Comments

comments

Comments are closed.

Read previous post:
ಮೆನ್ನಬೆಟ್ಟು ತಂಡ ಭೇಟಿ

ಕಿನ್ನಿಗೋಳಿ : ರಾಷ್ಟಿಯ ಪ್ರಶಸ್ತಿಗೆ ನಾಮಕರಣಗೊಂಡ ಪಂಚಾಯಿತಿಗಳ ಪರಿಶೀಲನೆಗಾಗಿ ಕೇರಳದ ಕೂಟ್ಟಾಯಂನ ಸೆಂಟ್ರಲ್ ರೂರಲ್ ಮೇನೆಜ್‌ಮೆಂಟ್ ನಿರ್ದೇಶಕರಾದ ಡಾ| ಎಮ್. ಜೋನ್ ಮತ್ತು ಡಾ| ಜೋಶ್ ಸತ್ಲಮ್...

Close