ಮೂಲ್ಕಿಯಲ್ಲಿ ಭೀಕರ ಅಫಘಾತ

ಮೂಲ್ಕಿ :  ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರು ಕಡೆಗೆ ಹೋಗುವ ಬಸ್ಸು ನಿಲ್ದಾಣದ ಬಳಿ ಬುಧವಾರ ರಾತ್ರಿ ಕಾಂಕ್ರೀಟ್ ಮಿಕ್ಸ್ ಲಾರಿ ಮತ್ತು ಸರಕು ಲಾರಿ ಮುಖಾಮುಖಿ ಡಿಕ್ಕಿ ಹೊಡೆದು ಇಬ್ಬರು ಲಾರಿ ಚಾಲಕರು ತೀವ್ರ ಗಾಯಗೊಂಡು ಮುಕ್ಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೆದ್ದಾರಿ ಕಾಮಗಾರಿಯ ನವಯುಗ ಕನ್ ಸ್ಟ್ರಕ್ಷನ್ ಕಂಪನಿಯ ಕಾಂಕ್ರೀಟ್ ಮಿಕ್ಸ್ ಲಾರಿಯೊಂದು ಮಂಗಳೂರು ಕಡೆಗೆ ಹೋಗುತ್ತಿದ್ದಾಗ ಉಡುಪಿ ಕಡೆಗೆ ಹೋಗುತ್ತಿದ್ದ ಲಾರಿ ಯ ಚಾಲಕನ ನಿರ್ಲ್ಯಕ್ಷ ಚಾಲನೆಯಿಂದ ಇನ್ನೊಂದು ವಾಹನವನ್ನು ಓವರ್‌ಟೇಕ್ ಮಾಡಿಕೊಂಡು ಬಂದು ಕಾಂಕ್ರೀಟ್ ಮಿಕ್ಸಿನ ಲಾರಿಗೆ ಡಿಕ್ಕಿ ಹೊಡೆದು ಚಾಲಕ ಆಂಧ್ರಪ್ರದೇಶ ನಿವಾಸಿ ಜಿತೇಂದರ ಎಂಬವರು ಕ್ಯಾಬಿನ ಒಳಗಡೆ ಸಿಕ್ಕಿ ಹಾಕಿಕೊಂಡು ಕಾಲಿಗೆ ತೀವ್ರ ತರಹದ ಗಾಯಗಳಾಗಿದ್ದು ಒದ್ದಾಡುತ್ತಿದ್ದು ಕೂಡಲೇ ಸ್ಥಳೀಯರು ಒಟ್ಟು ಸೇರಿ ಇಬ್ಬರು ಚಾಲಕರನ್ನು ಪ್ರಯಾಸದಿಂದ ತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ.ಇನ್ನೊಬ್ಬ ಚಾಲಕನ ತಲೆಗೂ ತೀವ್ರ ಗಾಯಗಳಾಗಿದ್ದು ಊರು ತಿಳಿದು ಬಂದಿಲ್ಲ. ಅಪಘಾತದ ರಭಸಕ್ಕೆ ಹೆದ್ದಾರಿ ಕೆಲ ಗಂಟೆಗಳ ಕಾಲ ತಡೆಯಾಗಿದ್ದು ಕೂಡಲೇ ಮೂಲ್ಕಿ ಪೋಲೀಸರು ಸ್ಥಳಕ್ಕೆ ಬಂದು ನಜ್ಜುಗುಜ್ಜಾಗಿರುವ ಎರಡೂ ಲಾರಿಗಳನ್ನುಕಾರ್ಯಾಚರಣೆ ಮೂಲಕ ತೆರವುಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

Mulki 20021401 Mulki 20021402 Mulki 20021403

Puneethkrishna

Comments

comments

Comments are closed.

Read previous post:
ಇಸ್ಲಾಂ ಸಮಿತಿ ಅಧ್ಯಕ್ಷರಾಗಿ ಮುನೀರ್ ಆಯ್ಕೆ

ಮೂಲ್ಕಿ: ಮೂಲ್ಕಿ ಕಾರ್ನಾಡಿನ ಹಿಮಾಯತುಲ್ ಇಸ್ಲಾಂ ಸಮಿತಿ 2014-15ನೇ ಸಾಲಿನ ಅಧ್ಯಕ್ಷರಾಗಿ ಮುನೀರ್ ಕಾರ್ನಾಡ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಸಮಿತಿಯ ಕಟ್ಟಡದಲ್ಲಿ ನಡೆದ 37ನೇ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ...

Close