ಮೆನ್ನಬೆಟ್ಟು ಭ್ರಾಮರೀ ಮಹಿಳಾ ಸಮಾಜ ಕಟ್ಟಡ ಉದ್ಘಾಟನೆ

ಕಿನ್ನಿಗೋಳಿ: ಮಹಿಳೆಯರು ಸಮಾಜದಲ್ಲಿ ಉತ್ತಮ ಸ್ಥಾನಮಾನ ಕಾಪಾಡಿಕೊಂಡು ಬರುತ್ತಿದ್ದು ಸದಾ ಸಮಾಜ ಮುಖಿ ಕೆಲಸಗಳನ್ನು ಮಾಡುವಂತಾಗಲಿ ಎಂದು ದ.ಕ.ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲು ಹೇಳಿದರು.
ಕಿನ್ನಿಗೋಳಿ ರಾಜರತ್ನಪುರದಲ್ಲಿ ನಿರ್ಮಿಸಲಾದ ಭ್ರಾಮರೀ ಮಹಿಳಾ ಸಮಾಜದ ಕಟ್ಟಡವನ್ನು ಉಧ್ಘಾಟಿಸಿ ಮಾತನಾಡಿದರು.
ನಂತರ ಯುಗಪುರುಷ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಈಶ್ವರ ಕಟೀಲು ಅವರನ್ನು ಸನ್ಮಾನಿಸಲಾಯಿತು.
ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ, ಆಳ್ವಾಸ್ ಕಾಲೇಜು ಉಪನ್ಯಾಸಕಿ ಸುಧಾರಾಣಿ, ವೇದವ್ಯಾಸ ಉಡುಪ, ಮೆನ್ನಬೆಟ್ಟು ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ, ಸದಸ್ಯರಾದ ಅರುಣ್ ಕುಮಾರ್, ಕೇಶವ ಕರ್ಕೇರ, ಕೃಷ್ಣಪ್ಪ ಮೂರುಕಾವೇರಿ, ಬೇಬಿ ಕೆಮ್ಮಡೆ, ಮುಂಬಯಿಯ ಧರ್ಮಾನಂದ ಕುಂದರ್, ಭ್ರಾಮರೀ ಮಹಿಳಾ ಸಮಾಜ ಗೌರವಾಧ್ಯಕ್ಷೆ ಸಾವಿತ್ರಿ ಶೆಟ್ಟಿ, ಅಧ್ಯಕ್ಷೆ ಮೀನಾಕ್ಷಿ ಧರ್ಮಾನಂದ ಮತ್ತಿತರರು ಉಪಸ್ಥಿತರಿದ್ದರು.
ಸುಜಯ ಜಿ.ಶೆಟ್ಟಿ ಸ್ವಾಗತಿಸಿ, ಅನುಷಾ ವಂದಿಸಿದರು. ಸುನಂದ ಜೆ. ಕರ್ಕೇರ ಹಾಗೂ ರೇವತಿ ಪುರುಷೋತ್ತಮ್ ಕಾರ್ಯಕ್ರಮ ನಿರೂಪಿಸಿದರು.

Kinnigoli 21021404

Comments

comments

Comments are closed.

Read previous post:
ಪರಿಶ್ರಮ, ಪ್ರಯತ್ನ, ಸಮಯಕ್ಕೆ ಮಹತ್ವ ನೀಡಿ

ಕಿನ್ನಿಗೋಳಿ: ಗುರಿ ಮತ್ತು ಕನಸು ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾದದ್ದು, ಪರಿಶ್ರಮ, ಪ್ರಯತ್ನ ಹಾಗೂ ಸಮಯಕ್ಕೆ ಮಹತ್ವ ನೀಡಿ ಹೊಸ ಚಿಂತನೆ ಬೆಳೆಸಿಕೊಂಡು ಆದರ್ಶ ಪ್ರಜೆಗಳಾಗಿ ಸಮಾಜದ ಋಣ ತೀರಿಸಬೇಕು...

Close