ಪರಿಶ್ರಮ, ಪ್ರಯತ್ನ, ಸಮಯಕ್ಕೆ ಮಹತ್ವ ನೀಡಿ

ಕಿನ್ನಿಗೋಳಿ: ಗುರಿ ಮತ್ತು ಕನಸು ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾದದ್ದು, ಪರಿಶ್ರಮ, ಪ್ರಯತ್ನ ಹಾಗೂ ಸಮಯಕ್ಕೆ ಮಹತ್ವ ನೀಡಿ ಹೊಸ ಚಿಂತನೆ ಬೆಳೆಸಿಕೊಂಡು ಆದರ್ಶ ಪ್ರಜೆಗಳಾಗಿ ಸಮಾಜದ ಋಣ ತೀರಿಸಬೇಕು ಎಂದು ಐಕಳ ಪೊಂಪೈ ಕಾಲೇಜು ಸಂಚಾಲಕ ಫಾ. ಪೌಲ್ ಪಿಂಟೋ ಹೇಳಿದರು.
ಐಕಳ ಪೊಂಪೈ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಸಾಧಕರಾದ ಮಂಗಳೂರು ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ಟೆಕ್ನಾಲಾಜಿ ಆಡಳಿತ ನಿರ್ದೇಶಕ ವಾಲ್ಟರ್ ಸ್ಟೀಫನ್ ಮೆಂಡಿಸ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಎಲಿಯಾಸ್ ಸಾಂತಿಸ್ ಅವರನ್ನು ಸನ್ಮಾನಿಸಲಾಯಿತು. ಕಾಲೇಜು ಪತ್ರಿಕೆ “ಪ್ರೊವಿಡೆನ್ಸ್” ಬಿಡುಗಡೆಗೊಳಿಸಲಾಯಿತು.
ಪ್ಲೋರಾ ಮೆಂಡಿಸ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸಂತಾನ್ ಡಿಸೋಜ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶರತ್ ಶೆಟ್ಟಿ, ಕಿರೆಂ ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಮಾಕ್ಸಿಂ ಪಿಂಟೊ, ಕಾರ್ಯದರ್ಶಿ ಅನಿತಾ ಡಿಸೋಜ ಉಪಸ್ಥಿತರಿದ್ದರು.
ಶಿಕ್ಷಕರ ಸಂಘದ ಕಾರ್ಯದರ್ಶಿ ಮೈಖಲ್ ಪಿಂಟೊ ಸ್ವಾಗತಿಸಿದರು. ಐಕಳ ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ| ಜಾನ್ ಕ್ಲಾರೆನ್ಸ್ ಮಿರಾಂದ ವಾರ್ಷಿಕ ವರದಿ ಮಂಡಿಸಿದರು. ಪ್ರೋ| ಥಾಮಸ್ ಜಿ.ಎಂ. ವಂದಿಸಿದರು. ಶೆರ್ಲಿನ್ ಡೇಸಾ ಕಾರ್ಯಕ್ರಮ ನಿರೂಪಿಸಿದರು.

Kinnigoli 21021401 Kinnigoli 21021402 Kinnigoli 21021403

Comments

comments

Comments are closed.

Read previous post:
ಬಪ್ಪನಾಡು ಬಹ್ಮಕಲಶೋತ್ಸವ ಸಂಪನ್ನ

ಮೂಲ್ಕಿ: ಬಪ್ಪನಾಡು ಬಡಗುಹಿತ್ಲು ನಾಗಸಾನಿಧ್ಯದ ನೂತನ ಆರೂಢದಲ್ಲಿ ಪ್ರತಿಷ್ಠಿತ ಶ್ರೀನಾಗದೇವರಿಗೆ ಗುರುವಾರ ಬ್ರಹ್ಮಶ್ರೀ ಶಿಬರೂರು ಗೋಪಾಲಕೃಷ್ಣ ತಂತ್ರಿವರ್ಯರ ಪ್ರಧಾನ ಪೌರೋಹಿತ್ಯದಲ್ಲಿ ವೇದಮೂರ್ತಿ ಶ್ರೀ ಬಿ. ಕೃಷ್ಣದಾಸ ಭಟ್...

Close