ಬೀಳ್ಕೊಡುಗೆ ಪೂರ್ವಭಾವಿ ಸಭೆ

ಮೂಲ್ಕಿ : ಇಲ್ಲಿನ ನಗರ ಪಂಚಾಯತಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಮುಖ್ಯಾಧಿಕಾರಿಯಾಗಿದ್ದುಕೊಂಡು ಮೂಲ್ಕಿ ನಗರ ಪಂಚಾಯತನ್ನು ಮಾದರಿಯಾನ್ನಾಗಿರಿಸದ್ದೇ ಅಲ್ಲದೆ ಪ್ರಖ್ಯಾತ ಲೇಖನ, ಜ್ಯೋತಿಶಾಸ್ತ್ರದಲ್ಲಿ ಪರಿಣತಿಯನ್ನು ಪಡೆದು ಫೆಬ್ರವರಿ ಅಂತ್ಯದಲ್ಲಿ ನಿವೃತ್ತಿ ಹೊಂದಲಿರುವ ಹರಿಶ್ಚಂದ್ರ ಸಾಲ್ಯಾನ್ ರವರಿಗೆ ಬೀಳ್ಕೊಡುಗೆ ಸಮಾರಂಭದ ಬಗ್ಗೆ ಪೂರ್ವಭಾವಿ ಸಭೆ ಪುನರೂರು ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜೀ ಕ.ಸಾಪ. ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ ಓರ್ವ ಉತ್ತಮ ವ್ಯಕ್ತಿ ಮಾಡಿದ ಸಾಧನೆಯನ್ನು ಸಮಾಜದಲ್ಲಿ ಗುರುತಿಸಿ ನಿವೃತ್ತಿಯಾಗುವಾಗ ಸನ್ಮಾನ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.

ಬಳಿಕ ಮಾರ್ಚ 1ರಂದು ಮೂಲ್ಕಿಯ ವಿಜಯಾ ಕಾಲೇಜಿನಲ್ಲಿ ಮೂಲ್ಕಿ ನಾಗರಿಕ ಸನ್ಮಾನ ಸಮಿತಿಯಿಂದ ಸನ್ಮಾನ ಮಾಡುವುದೆಂದು ಸಮಿತಿ ತೀರ್ಮಾನ ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸಚಿವ ಅಭಯಚಂದ್ರ ವಹಿಸಲಿದ್ದು ಜಿಲ್ಲಾಧಿಕಾರಿಗಳು, ಕಿನ್ನಿಗೋಳಿ ಯುಗಪುರುಷದ ಭುವನಾಭಿರಾಮ ಉಡುಪ ಮತ್ತಿತರರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ತೀರ್ಮಾನಿಸಲಾಯಿತು. ಸಭೆಯಲ್ಲಿ ಮೂಲ್ಕಿ ನ.ಪಂ. ಮುಖ್ಯಾಧಿಕಾರಿಗಳಾದ ಹರಿಶ್ಚಂದ್ರ ಸಾಲ್ಯಾನ್, ಮುಲ್ಕಿ ನ.ಪಂ. ಮಾಜೀ ಅಧ್ಯಕ್ಷ ಬಿ.ಎಂ.ಆಸೀಫ್, ಉದ್ಯಮಿ ಎಂ.ಬಿ. ಖಾನ್, ಪತ್ರಕರ್ತ ಪರಮಾನಂದ ಸಾಲ್ಯಾನ್, ಪ್ರಕಾಶ ಸುವರ್ಣ, ಪುತ್ತುಬಾವ,ಸತೀಶ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.

Mulki 22021417Puneethakrishna Sk

Comments

comments

Comments are closed.

Read previous post:
Kinnigoli 22021416
ಮುದ್ರಣ ಲೋಕದ ಪಿತಾಮಹ ಗುಟೆನ್ ಬರ್ಗ್

ಫೆಬ್ರವರಿ 24ರ ದಿನವನ್ನು ಮುದ್ರಣದಿಂದಾಗಿ ಜೀವನ ನಡೆಸುವ ಪ್ರತಿಯೊಬ್ಬ ವ್ಯಕ್ತಿಯೂ ನೆನಪಿನಲ್ಲಿಡಬೇಕಾದ ಶುಭದಿನ. ಅಂದು ಮುದ್ರಣ ಲೋಕದ ಪಿತಾಮಹ ಯೋಹಾಸನ್ ಗುಟೆನ್ ಬರ್ಗ್‌ನ ಜನ್ಮದಿನ. ಇಂದು ಅತ್ಯಾಧುನಿಕ...

Close