ಕೃತಕ ಆಭರಣ ತಯಾರಿಕಾ ತರಬೇತಿ ಶಿಬಿರ

ಕಿನ್ನಿಗೋಳಿ: ತಾಂತ್ರಿಕತೆ ನೈಪುಣ್ಯತೆಯ ತರಬೇತಿ ಪಡೆದಾಗ ಸ್ವಂತ ಉದ್ಯಮ ಸ್ಥಾಪಿಸುವ ಮನೋಭಾವ ಬೆಳೆಯುತ್ತದೆ. ಅಲ್ಲದೆ ತಮ್ಮ ವೃತ್ತಿ ಜೀವನದಲ್ಲಿ ಕೂಡ ಬಹಳಷ್ಟು ಎತ್ತರಕ್ಕೆ ತಲುಪಲು ಸಹಾಯಕ ಎಂದು ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ ಹೇಳಿದರು.
ದ.ಕ ಜಿಲ್ಲಾ ಪಂಚಾಯಿತಿ ಕೈಗಾರಿಕಾ ವಿಭಾಗ ಮಂಗಳೂರು, ಲಯನ್ಸ್ ಮತ್ತು ಲಯನೆಸ್ ಕ್ಲಬ್ ಕಿನ್ನಿಗೋಳಿ, ಮುಲ್ಕಿಯ ಬಂಟ್ಸ್ ಸಂಘ ಮತ್ತು ಬಂಟ್ಸ್ ಮಹಿಳಾ ಘಟಕ ಹಾಗೂ ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಜಂಟೀ ಆಶ್ರಯದಲ್ಲಿ ಕಿನ್ನಿಗೋಳಿ ಸಹಕಾರ ಸೌಧದಲ್ಲಿ ಶನಿವಾರ ನಡೆದ ಕೃತಕ ಆಭರಣ ತಯಾರಿಕಾ ತರಬೇತಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದ.ಕ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುಮ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ಹಾಗೂ ತರಬೇತಿ ನೀಡಿದರು
ಈ ಸಂದರ್ಭ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ವೈ. ಕೃಷ್ಣ ಸಾಲ್ಯಾನ್, ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಶಾಖಾ ಪ್ರಭಂದಕ ಶೇಖರ ಮಾಡ, ಮುಲ್ಕಿ ಬಂಟ್ಸ್ ಮಹಿಳಾ ಘಟಕ ಸಂಯೋಜಕಿ ಸಾವಿತ್ರಿ ಶೆಟ್ಟಿ, ದ.ಕ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಭವ್ಯಾ ಗಂಗಾಧರ್, ದ.ಕ. ಜಿಲ್ಲಾ ಪಂಚಾಯಿತಿ ಕೈಗಾರಿಕ ವಿಭಾಗದ ಉಪ ನಿರ್ದೇಶಕ ಸೋಮಪ್ಪ ನಾಯಕ್, ರಾಮಕೃಷ್ಣ ಆಚಾರ್ಯ ಉಪಸ್ಥಿತರಿದ್ದರು.
ಶಾಂಭವಿ ಶೆಟ್ಟಿ ಸ್ವಾಗತಿಸಿ, ದಿನೇಶ್ ಕೊಡೆತ್ತೂರು ಕಾರ್ಯಕ್ರಮ ನಿರೂಪಿಸಿದರು.

Kinnigoli 22021409 Kinnigoli 22021410 Kinnigoli 22021411 Kinnigoli 22021412 Kinnigoli 22021413

Comments

comments

Comments are closed.

Read previous post:
ಪುನರೂರು ದೇವಳ ಹಗಲು ರಥೋತ್ಸವ

ಕಿನ್ನಿಗೋಳಿ: ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ವರ್ಷಾವಧಿ ಜಾತ್ರೆಯ ಅಂಗವಾಗಿ ಶನಿವಾರ ಹಗಲು ರಥೋತ್ಸವ ನಡೆಯಿತು.

Close