ಮುದ್ರಣ ಲೋಕದ ಪಿತಾಮಹ ಗುಟೆನ್ ಬರ್ಗ್

ಫೆಬ್ರವರಿ 24ರ ದಿನವನ್ನು ಮುದ್ರಣದಿಂದಾಗಿ ಜೀವನ ನಡೆಸುವ ಪ್ರತಿಯೊಬ್ಬ ವ್ಯಕ್ತಿಯೂ ನೆನಪಿನಲ್ಲಿಡಬೇಕಾದ ಶುಭದಿನ. ಅಂದು ಮುದ್ರಣ ಲೋಕದ ಪಿತಾಮಹ ಯೋಹಾಸನ್ ಗುಟೆನ್ ಬರ್ಗ್‌ನ ಜನ್ಮದಿನ.

Kinnigoli 22021414

ಇಂದು ಅತ್ಯಾಧುನಿಕ ಯಂತ್ರಗಳಿಂದಾಗಿ ಒಮ್ಮೆಗೇ ಐದಾರು ಬಣ್ಣಗಳಲ್ಲಿ ತಯಾರಾಗುವ ಪತ್ರಿಕೆಗಳು, ಪುಸ್ತಕಗಳು ಎಲ್ಲವೂ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಆದರೆ ಹಿಂದೊಮ್ಮೆ ಈ ಮುದ್ರಣ ಎಂದರೇನೆಂದೇ ಗೊತ್ತಿರಲಿಲ್ಲವೆಂದರೆ ಆಶ್ಚರ್ಯವಾಗುತ್ತದೆ.
ಪ್ರಾಚೀನ ಕಾಲದಲ್ಲಿ ಎಲೆಗಳ ಮೇಲೆ ಬರೆಯುತ್ತಿದ್ದರು. ಭಾರತೀಯರು ಓಲೆಗರಿಯ ಮೇಲೆ ಗ್ರಂಥಗಳ ರಚನೆ ಮಾಡಿದರು. ಚೀನೀಯರು ಕಲ್ಲಿನ ಮೇಲೆ ಅಕ್ಷರಗಳನ್ನು ಕೆತ್ತುತ್ತಿದ್ದರು. ಕ್ರಿ.ಪೂ.600ರಲ್ಲಿ ಮರದಿಂದ ಹಾಗೂ ಮಣ್ಣಿನಿಂದ ಅಚ್ಚು ತಯಾರಿಸುವುದನ್ನು ಮೊದಲು ಚೀನೀಯರೇ ಪ್ರಾರಂಭಿಸಿದರು. 1400ರಲ್ಲಿ ಅಕ್ಷರಗಳ ಮೊಳೆಗಳನ್ನು ಮಣ್ಣಿನಲ್ಲಿ ತಯಾರಿಸಿ ಸುಟ್ಟು ಉಪಯೋಗಿಸುತ್ತಿದ್ದರು. ಆದರೆ ಅವು ಬಹಳ ಬೇಗ ಮುರಿದು ಹೋಗುತ್ತಿದ್ದವು. 1500ರ ಹಾಗೆ ಕೊರಿಯಾ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಚೀನಾದ ಪಿ.ಚೆಂಗ್ ಎಂಬುವವನು ಲೋಹದಿಂದ ಅಚ್ಚು ಮೊಳೆಗಳ ತಯಾರಿಕೆ ಕಂಡು ಹಿಡಿದನು.
ಜಗತ್ತಿನ ಅತ್ಯಂತ ಹಳೆಯ ಮುದ್ರಿತ ಪುಸ್ತಕ “ವಜ್ರಸೂತ್ರ” ಚೀನಾದ ಗುಹೆಯೊಂದರಲ್ಲಿ ಸಿಕ್ಕಿದೆ. ಆರು ಹಾಳೆಗಳ್ಳುಳ್ಳ ಈ ಪುಸ್ತಕದ ಪ್ರತಿ ಹಾಳೆ4.8ಮೀಟರ್ ಉದ್ದ 1.2ಮೀಟರ್ ಅಗಲವಿದ್ದು ಕಲ್ಲಿನ ಅಚ್ಚು ತಯಾರಿಸಿ ಅದಕ್ಕೆ ಬಣ್ಣ ಹಚ್ಚಿ ಹಾಳೆಗಳ ಮೇಲೆ ಒತ್ತು ಪುಸ್ತಕ ಮುದ್ರಿಸಿದ್ದಾರೆ. ಈ ಪುಸ್ತಕ ಈಗ ಬ್ರಿಟನ್ನಿನ ಸಂಗ್ರಾಹಾಲಯದಲ್ಲಿದೆ.

OLYMPUS DIGITAL CAMERA

1440ರಲ್ಲಿ ಜರ್ಮನಿಯಲ್ಲಿ ಯೋಹಾನಸ್ ಗುಟೆನ್ ಬರ್ಗ್ ಎಂಬಾತ ಮೊಟ್ಟಮೊದಲ ಬಾರಿಗೆ ಮುದ್ರಣ ಯಂತ್ರವನ್ನೂ, ಅದಕ್ಕೆ ಬಳಸುವ ಶಾಯಿಯನ್ನು ಕಂಡುಹಿಡಿದ. ಇವನು ಯಂತ್ರದಲ್ಲಿ ಲೋಹದ ಮೊಳೆಗಳಿಂದ ಮುದ್ರಿಸಿದ ಮೊಟ್ಟಮೊದಲ ಪುಸ್ತಕ ಬಂದು ಬೈಬಲ್‌ನ ಪೂರ್ತಿ ಪ್ರತಿಯನ್ನು ಮುದ್ರಿಸಿದಾಗ ಇದೊಂದು ಕೌತುಕದ ಸಂಗತಿಯೆನಿಸಿತು. ಜನರು ಕುತೂಹಲದಿಂದ ಹೇಳಿದಷ್ಟು ಬೆಲೆ ಕೊಟ್ಟು ಇದರ ಪ್ರತಿಗಳನ್ನು ಖರೀದಿಸಲು ಮುಂದಾದರೂ ಸಾಕಷ್ಟು ಪ್ರತಿಗಳು ಸಿಗದೇ ಹೊಡೆದಾಟಗಳೂ ಸಹ ನಡೆದವಂತೆ. ಮುದ್ರಣದ ಬಗ್ಗೆ ಕುತೂಹಲ ಬೆಳೆಯುತ್ತಾ ಹೋದಂತೆ ಹೊಸ ಹೊಸ ಅನ್ವೇಷಣೆ, ಅವಿಷ್ಕಾರಕ್ಕೆ ದಾರಿ ತೆರೆದುಕೊಂಡಿದ್ದರಿಂದ ಜ್ಞಾನ ಪ್ರಸಾರ ದೇಶದ ಎಲ್ಲೆಗಳನ್ನು ದಾಟಿತು. ಕೊನೆಗೆ ಮದ್ರಣ ಮಾಧ್ಯಮ ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ ಮೆರೆಯಿತು.
ಗುಟೆನ್ ಬರ್ಗ್‌ನ ಕಾಲಾನಂತರ ಬಹಳ ಕಾಲ ಅಂತಹ ಕ್ರಾಂತಿಕಾರಕ ಬದಲಾವಣೆ ಎನೂ ಕಾಣಬರಲಿಲ್ಲ. 1880ರಲ್ಲಿ ಮೊಳೆಗಳನ್ನು ಬಿಡಿ ಬಿಡಿಯಾಗಿ ಜೋಡಿಸುವ ಬದಲಾಗಿ ಸಾಲು ಪಂಕ್ತಿಗಳ್ನು ಇಡೀ ಪುಟವನ್ನೇ ಎರಕಹೊಯ್ದು ಮುದ್ರಿಸಿ ನಂತರ ಮತ್ತೆ ಕರಗಿಸಿ ಬಿಡುವ ಪದ್ಧತಿ ಜಾರಿಗೆ ಬಂದು “ಲೈನೋ” ಎಂದು ಪ್ರಸಿದ್ಧವಾದ ಈ ರೀತಿಯಿಂದಾಗಿ ವೇಗದ ಅಕ್ಷರ ಜೋಡಣೆ ಜೊತೆಗೆ ಅಂದವಾದ ಮುದ್ರಣ ಸಾಧ್ಯವಾಗಿ “ಮೋನೋಟೈಪ್” ಯಂತ್ರವೂ ಸಿದ್ಧವಾಯಿತು.
ಕ್ರಮೇಣ ಲೋಹದ ಹಾಳೆಯ ಮೇಲೆ ಚುಕ್ಕೆಗಳ ರೂಪದಲ್ಲಿ ಚಿತ್ರ ಮೂಡಿಸಿಕೊಂಡು ಅಚ್ಚೋತ್ತಿ ಛಾಯಾಚಿತ್ರ ಮೂಡಿಸುವ “ಹಾಫ್ ಟೋನ್” ಮುದ್ರಣ ಪ್ರಾರಂಭವಾಯಿತು. ಒಂದೇ ಚಿತ್ರದ ಹಲವಾರು ಅಚ್ಚುಗಳನ್ನು ಬೇರೆ ಬೇರೆಯಾಗಿ ಒಂದೇ ಹಾಳೆ ಮೇಲೆ ಒಂದಾದ ನಂತರ ಒಂದು ವಿವಿಧ ಚಿತ್ರಗಳನ್ನು ಮುದ್ರಿಸಿ ವರ್ಣಮಯ ಮುದ್ರಣ ಪ್ರಾರಂಭವಾಯಿತು.
ಪ್ರಾರಂಭದಲ್ಲಿ ಯಂತ್ರಗಳಿಂದ 800-1000 ಪ್ರತೀ ಗಂಟೆಗೆ ಮುದ್ರಿಸಲು ಸಾಧ್ಯವಿದ್ದರೆ, ನವಶೋಧವೆನಿಸಿರುವ “ರೋಟರೀ ಯಂತ್ರ”ಗಳಲ್ಲಿ ಒಂದೇ ಒಂದು ನಿಮಿಷದಲ್ಲಿ ಸಾವಿರ ಪ್ರತಿಗಳ ಮುದ್ರಣ ಸಾಧ್ಯವೆನಿಸಿತು. ಇನ್ನೂರು ಪುಟಗಳ 50 ಸಾವಿರ ಪ್ರತಿಗಳ ದಿನ ಪತ್ರಿಕೆಯೊಂದು ಒಂದೇ ಗಂಟೆಯಲ್ಲಿ ತಯಾರಾಗಿ ಹೊರಬರುವಷ್ಟು ಈ ಮಾಧ್ಯಮ ಬೆಳೆಯಿತು.
ಕನ್ನಡದಲ್ಲಿ 1820ರಲ್ಲಿ ಮೊಟ್ಟಮೊದಲು ಅಚ್ಚಾದ ಪುಸ್ತಕ ಜಾನ್ ಮ್ಯಾಕೆಲರ್‌ನ ಕನ್ನಡ ಭಾಷಾ ವ್ಯಾಕರಣ ಪುಸ್ತಕವಾಗಿ. ಇದೂ ಕೂಡಾ ಈಗ ಭಾರತದಲ್ಲಿ ಇಲ್ಲ. ನ್ಯಾಯಾರ್ಕ್‌ನ ಗ್ರಂಥ ಭಂಡಾರದಲ್ಲಿ ಜೋಪಾನವಾಗಿ ಕುಳಿತಿದೆ. 1930ರಲ್ಲಿ ಜೆ.ಪ್ಲೆಬಸ್ ಎಂಬ ಜರ್ಮನ್ ಮಿಷಿನರಿ ಪ್ರ ಪ್ರಥವಾಗಿ ಮಂಗಳೂರಿನಲ್ಲಿ ಕನ್ನಡ ಅಚ್ಚು ಮೊಳೆಗಳನ್ನು ತಯಾರಿಸಿದ ಹಿರಿಮೆಗೆ ಪಾತ್ರನಾದ. ಹೀಗೆ ಕ್ರೈಸ್ತ ಧರ್ಮ ಪ್ರಚಾರಕರಿಂದಾಗಿ ಕನ್ನಡ ಅಚ್ಚುಮೊಳೆಗಳು ಹಾಗೂ ಮುದ್ರಣ ವ್ಯವಸ್ಥೆ ರೂಪುಗೊಂಡಿತು.
ಕಂಠಪಾಠದ ಮೂಲಕವೇ ಪೀಳಿಗೆಯಿಂದ ಪೀಳಿಗೆಗೆ ಸಾಗಬೇಕಾಗಿದ್ದ ಜ್ಞಾನವನ್ನು ಪುಸ್ತಕಗಳನ್ನು ಸಂಗ್ರಹಿಸಿ ವಿವಿಧ ಜನಾಂಗಕ್ಕೆ ವಿವಿಧ ದೇಶಗಳಿಗೆ ಪ್ರಸಾರವಾಗುವಂತೆ ಮಾಡಿದ ಹಿರಿಮೆ ಮುದ್ರಣ ಮಾಧ್ಯಮಕ್ಕೆ ಸಲ್ಲುತ್ತದೆ. ಕೆಲವೇ ಪಂಡಿತರ ಸ್ವತ್ತಾಗಿದ್ದ ಜ್ಞಾನ ಎಲ್ಲರಿಗೂ ಹಂಚಲು ಸಾಧ್ಯವಾಯಿತು. ಅಕ್ಷರಸ್ಥರ ಸಂಖ್ಯೆ ಬೆಳೆಯುವುದರಲ್ಲಿ ಮುದ್ರಣಕ್ಕೆ ಮಹತ್ವದ ಪಾತ್ರವಿದೆ. ವರ್ಣಮಯ ಪತ್ರಿಕೆಗಳು, ಪುಸ್ತಕಗಳು ಓದುಗರ ಸಂಖ್ಯೆಯನ್ನು ಹೆಚ್ಚಿಸಿದವು. ಜೊತೆಗೆ ಲಕ್ಷಾಂತರ ಜನರಿಗೆ ಉದ್ಯೋಗ ದೊರಕಿಸಿದ್ದು ಈ ಮಾದ್ಯಮದ ಹಿರಿಮೆ, ಮುದ್ರಣಾಲಯಗಳ ಸ್ವಂತ ಉದ್ಯಮ, ಕೆಲಸಗಾರರಾಗಿ ಉದ್ಯೋಗ, ಪತ್ರಿಕೋದ್ಯಮ, ಈ ಎಲ್ಲಕ್ಕೂ ಪೂರಕವಾಗಿ ಅಗತ್ಯವಾದ ಪೇಪರ್, ಯಂತ್ರಗಳು, ಶಾಯಿಗಳ ತಯಾರಿಕೆಯಲ್ಲಿ ಇಂದು ಲಕ್ಷಾಂತರ ಜನರಿಗೆ ಉದ್ಯೋಗ ದೊರಕಿದೆ ಇದೊಂದು ದೊಡ್ಡ ಬೃಹತ್ ಲೋಕವೆನಿಸಿದೆ.
ಮುದ್ರಣದ ಅವಿಷ್ಕಾರ ಇಂದು ಯಾವ ಹಂತ ತಲುಪಿದೆ ಎಂದರೆ, ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಅಧಿವೇಶನ ಪ್ರಾರಂಭವಾಗಿದ್ದರೆ, ಅದು ಮುಗಿಯವುದರೊಳಗಾಗಿ ಅದರ ಬಗ್ಗೆ ಸುದ್ದಿ ಸಮಾಚಾರ ಹಾಗೂ ಚಿತ್ರಗಳು ಅಚ್ಚಾಗಿ ವಿಶ್ವದ ಇನ್ನೊಂದು ಭಾಗದಲ್ಲಿರುವ ನಮ್ಮ ಕೈಗೆ ತಲುಪಿರುತ್ತದೆ…!

Kinnigoli 22021416

ಹೀಗೆ ಓದನ್ನು ಸುಲಭಗೊಳಿಸಿದ, ಶಿಕ್ಷಣ ಕ್ಷೇತ್ರಕ್ಕೆ ಅನಿವಾರ್ಯವಾಗಿರುವ, ಒಂದು ಬೃಹತ್ ಉದ್ಯಮವಾಗಿ ಕೋಟ್ಯಾಂತರ ಜನಕ್ಕೆ ಅನ್ನಕ್ಕೆ ದಾರಿಯಾಗಿರುವ ಮುದ್ರಣವನ್ನು ಪ್ರಪಂಚಕ್ಕೆ ಪರಿಚಯಿಸಿದ ಮುದ್ರಣ ಪಿತಾಮಹ ಯೋಹಾನಸ್ ಗುಟೆನ್‌ಬರ್ಗ್‌ನನ್ನು ಫೆಬ್ರವರಿ 24ರ ಅವರ ಹುಟ್ಟುಹಬ್ಬದ ದಿನ ಸ್ಮರಿಸಿಕೊಳ್ಳುವುದು ಎಲ್ಲ ಅದರಲ್ಲೂ ಮುಖ್ಯವಾಗಿ ಈ ಉದ್ಯಮವನ್ನು ನಂಬಿಯೇ ಬದುಕುತ್ತಿರುವ ಪ್ರತೀಯೊಬ್ಬರ ಕರ್ತವ್ಯವಾಗಿದೆ.

Narendra Kerekadu

 

Comments

comments

Comments are closed.

Read previous post:
21KinniSujan1111
Sujan B. 7th Birthday Wishes

7th Birthday Wishes  Dear   Sujan  Baba It’s great feelings when you know, someone likes you, someone cares about you,...

Close