ಪುನರೂರು ರಾಶಿ ಪೂಜೆ ಸಮಾಲೋಚನ ಸಭೆ

ಕಿನ್ನಿಗೋಳಿ: ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಮೇ ತಿಂಗಳಿನಲ್ಲಿ ನಡೆಯುವ ರಾಶಿ ಪೂಜೆಯ ನಿಮಿತ್ತಿ ಸಮಾಲೋಚನ ಸಭೆ ಫೆ. 23 ರಂದು ದೇವಸ್ಥಾನದಲ್ಲಿ ನಡೆಯಿತು. ಕಟೀಲಿನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ , ದೇವಳದ ತಂತ್ರಿಗಳಾದ ಕಳತ್ತೂರು ಕರುಣಾಕರ ತಂತ್ರಿ ರಾಶಿ ಪೂಜೆ ನಡೆಸುವ ಬಗ್ಗೆ ಮಾಹಿತಿ ನೀಡಿ ಮುಂದಿನ ಮೇ 16 ರಂದು ರಾಶಿ ಪೂಜೆ ನಡಸುವ ಬಗ್ಗೆ ದಿನ ನಿಗದಿಮಾಡಲಾಯಿತು. ಬಳಿಕ ದೇವರ ಮುಂದೆ ಸಾಮೂಹಿಕ ಪ್ರಾರ್ಥನೆ ನಡೆಯಿತು. ದೇವಳದ ಧರ್ಮದರ್ಶಿ ಪಟೇಲ್ ವೆಂಕಟೇಶ್ ರಾವ್, ರಾಮಮೂರ್ತಿರಾವ್, ಕೊಡೆತ್ತೂರು ಭುವನಾಭಿರಾಮ ಉಡುಪ, ಸುರೇಶ್ ರಾವ್ ಪುನರೂರು, ರಮೇಶ್ ಶೆಟ್ಟಿ ಪುನರೂರುಗುತ್ತು, ಸೀತಾರಾಮ ಭಟ್, ರವಿ ಶೆಟ್ಟಿ ಪುನರೂರು ಗುತ್ತು, ಹರಿಭಟ್ ಮೂಡುಮನೆ , ಮಂಜುನಾಥ ರಾವ್, ಶ್ರೀಧರ ಶೆಟ್ಟಿ ಪುನರೂರು ಬಾಳಿಕೆ, ಅವಿನಾಶ್ ಶೆಟ್ಟಿ ಪುನರೂರು ಬಾಳಿಕೆ, ದೇವದಾಸ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು. ವಾಸುದೇವ ರಾವ್ ಕಾರ್ಯಕ್ರಮ ನಿರೂಪಿಸಿದರು.

Kinnigoli 24021402Raghunath Kamath

Comments

comments

Comments are closed.

Read previous post:
ಮೂಲ್ಕಿ: ಮಹಿಳಾ ಸಮಾವೇಶ

ಮೂಲ್ಕಿ: ನಗರ ಪಂಚಾಯತ್ ಮೂಲ್ಕಿಯ ಸ್ವರ್ಣ ಜಯಂತಿ ಶಹರಿ ರೋಜ್‌ಗಾರ್ ಯೋಜನೆಯಡಿ ನಿರಂತರ ಉಳಿತಾಯ ಗುಂಪುಗಳ ಮಹಿಳೆಯರ ಮಹಿಳಾ ಸಮಾವೇಶವನ್ನು ಆಯೋಜಿಸಲಾಗಿತ್ತು. ಸಮಾವೇಶವನ್ನು ಕಾವೇರಿ ಲಯನ್ಸ್ ಕ್ಲಬ್ಬಿ...

Close