ಮೂಲ್ಕಿ: ಮಹಿಳಾ ಸಮಾವೇಶ

ಮೂಲ್ಕಿ: ನಗರ ಪಂಚಾಯತ್ ಮೂಲ್ಕಿಯ ಸ್ವರ್ಣ ಜಯಂತಿ ಶಹರಿ ರೋಜ್‌ಗಾರ್ ಯೋಜನೆಯಡಿ ನಿರಂತರ ಉಳಿತಾಯ ಗುಂಪುಗಳ ಮಹಿಳೆಯರ ಮಹಿಳಾ ಸಮಾವೇಶವನ್ನು ಆಯೋಜಿಸಲಾಗಿತ್ತು. ಸಮಾವೇಶವನ್ನು ಕಾವೇರಿ ಲಯನ್ಸ್ ಕ್ಲಬ್ಬಿ  ಅಧ್ಯಕ್ಷೆ ಶಮಿತಾ ಸಂಜಯ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಿಡಿಎಸ್‌ನ ಅಧ್ಯಕ್ಷೆ  ವತ್ಸಲಾ ವಿ. ಬಂಗೇರ ಅಧ್ಯಕ್ಷತೆ ವಹಿಸಿದ್ದರು. ವಿಜಯಾ ಕಾಲೇಜಿನ ಉಪನ್ಯಾಸಕಿ ಪಮೀದಾ ಮನ್ಸೂರ್ ಇಂದಿನ ಯುಗದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿ ಸಮಾಜದ ಆಗು ಹೋಗುಗಳಲ್ಲಿ ಮುಕ್ತವಾಗಿ ಬಾಗವಹಿಸಿದರೆ ಉತ್ತಮ ಸಮಾಜ ನಿರ್ಮಾಣವಾಗುವುದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಕಾವೇರಿ ಲಯನ್ಸ್ ಕ್ಲಬ್‌ನಿಂದ ಆಯೋಜಿಸಲಾಗಿತ್ತು. ಮುಖ್ಯಾಧಿಕಾರಿ ಹರಿಶ್ಚಂದ್ರ ಪಿ. ಸಾಲಿಯಾನ್ ಮತ್ತು ಸಿಡಿಎಸ್‌ನ ಮಹಿಳಾ ಪ್ರತಿನಿಧಿ  ವಿಮಲಾ ಪೂಜಾರಿ ಉಪಸ್ಥಿತರಿದ್ದರು.

ಕಮ್ಯುನಿಟಿ ಎಫೇರ‍್ಸ್ ಆಫೀಸರ್  ವಾಣಿ ವಿ. ಆಳ್ವ ಸ್ವಾಗತಿಸಿದರು. ಸಮುದಾಯ ಸಂಘಟಕ ಪ್ರಸನ್ನಕುಮಾರ್ ವಂದಿಸಿದರು.

Mulki 24021401

Puneethakrishna

Comments

comments

Comments are closed.

Read previous post:
ಕಾರ್ನಾಡು ಧರ್ಮಸ್ಥಾನ ವರ್ಷಾವಧಿ ಜಾತ್ರೆ

ಮೂಲ್ಕಿ;ಕಾರ್ನಾಡು ಧರ್ಮಸ್ಥಾನದಲ್ಲಿ ವರ್ಷಾವಧಿ ಜಾತ್ರೆಯ ಪ್ರಯುಕ್ತ ನೇಮೋತ್ಸವ ನಡೆಯಿತು. Puneethakrishna 

Close