ಪುನರೂರು ಗೃಹಿಣಿ ಸಾವು; ಕೊಲೆ ಶಂಕೆ

Kinnigoli 25021401

 

ಕಿನ್ನಿಗೋಳಿ : ಇಲ್ಲಿನ ಮೂಲ್ಕಿ ಠಾಣಾ ವ್ಯಾಪ್ತಿಯ ಪುನರೂರು ಎಂಬಲ್ಲಿ ಗೃಹಿಣಿಯೋರ್ವಳು ಮಂಗಳವಾರ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು ಆಕೆಯ ಮನೆಯವರು ಇದೊಂದು ಕೊಲೆ ಎಂಬ ಶಂಕೆ ವ್ಯಕ್ತಪಡಿಸಿರುವುದರಿಂದ ಮೂಲ್ಕಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸಾವನ್ನಪ್ಪಿದ ಗೃಹಿಣಿಯನ್ನು ಪುನರೂರು ಕಲ್ಲಟ್ಟ ನಿವಾಸಿ ದೇಜಪ್ಪ ಪೂಜಾರಿ ಮತ್ತು ಜಾನಕಿ ಅಂಚನ್‌ರ ಕಿರಿಯ ಪುತ್ರಿ ಮಲ್ಲಿಕಾ ಅಂಚನ್ (23)ಎಂದು ಗುರುತಿಸಲಾಗಿದ್ದು. ಮಂಗಳವಾರ ಮಧ್ಯಾಹ್ನ ಮನೆಯ ಹೊರಗಡೆ ಸಂಶಯಾಸ್ಪದ ರೀತಿಯಲ್ಲಿ ಶವ ಕಂಡು ಬಂದಿದ್ದು ಕುತ್ತಿಗೆಗೆ ಶಾಲಿನಿಂದ ಬಿಗಿದ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೊಚ್ಚಲ ಹೆರಿಗೆ;
ಮಲ್ಲಿಕಾ ಅಂಚನ್ ಕಳೆದ ಎರಡು ವರ್ಷದ ಹಿಂದೆ ಐಕಳ ಕಂಬಳದ ಮುಡೋಡಿ ಮನೆಯ ವಿಶ್ವನಾಥ ಪೂಜಾರಿಯ ಮಗ ಸುಧಾಕರ ಪೂಜಾರಿಯನ್ನು ಮದುವೆಯಾಗಿದ್ದು ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಚೊಚ್ಚಲ ಹೆರಿಗೆಯಲ್ಲಿ ಗಂಡು ಮಗುವಿನ ತಾಯಿಯಾಗಿ ತವರು ಮನೆಯಲ್ಲಿ ಬಾಣಂತನದೊಂದಿಗೆ ಮಗುವಿನೊಂದಿಗೆ ಇದ್ದವಳು ಯಾವುದೇ ಖಿನ್ನತೆಯಾಗಲಿ ಆಕೆಗೆ ಇರಲಿಲ್ಲ ಎಂದು ಆಕೆಯ ಮನೆಯವರು ತಿಳಿಸಿದ್ದಾರೆ. ಆಕೆಯ ಪತಿ ಐಕಳ ಸುಧಾಕರ ಪೂಜಾರಿ ವಿದೇಶಕ್ಕೆ ಉದ್ಯೋಗ ನಿಮಿತ್ತ ತೆರಳಿದ್ದನು. ಕಳೆದ ನಾಲ್ಕು ತಿಂಗಳ ಹಿಂದೆ ಮಗುವಿನ ನಾಮಕರಣಕಕ್ಕೆ ಆಗಮಿಸಿ ಮರಳಿ ವಿದೇಶಕ್ಕೆ ತೆರಳಿದ್ದನು ಗಂಡನ ಮನೆಯಲ್ಲಿಯೂ ಯಾವುದೇ ರೀತಿಯ ತೊಂದರೆ ಇದೆ ಎಂದು ಹೇಳಿಕೊಂಡಿರಲಿಲ್ಲ ಎಂದು ಹೇಳುತ್ತಾರೆ.

ಆತ್ಮಹತ್ಯೆ/ಕೊಲೆಯೇ;
ಮಂಗಳವಾರ ಮಲ್ಲಿಕಾಳ ತಾಯಿ ಜಾನಕಿ ಹಾಗೂ ತಂದೆ ದೇಜಪ್ಪರವರು ಮಲ್ಲಿಕಾಳ ಮಗ ಶಾಶ್ವತ್‌ನ ಹೆಸರನ್ನು ನೊಂದಣಿ ಮಾಡಲು ಬೆಳಿಗ್ಗೆ ಕಿನ್ನಿಗೋಳಿ ಗ್ರಾಮ ಪಂಚಾಯಿತಿಗೆ ತೆರಳಿದ್ದು ಮಲ್ಲಿಕಾಳು ಆಕೆಯ ಇಳಿ ವಯಸ್ಸಿನ ದೊಡ್ಡಮ್ಮ ಹಾಗೂ ಮಗುವಿನೊಂದಿಗೆ ಮನೆಯಲ್ಲೇ ಇದ್ದಳು ಎಂದು ಹೇಳುವ ಆಕೆಯ ತಂದೆ ದೇಜಪ್ಪ ಪಂಚಾಯಿತಿಯಿಂದ ಹಿಂತಿರುಗಿ ಬಂದಾಗ ಮನೆಯ ಜಗುಲಿಯಲ್ಲಿ ಮಲ್ಲಿಕಾಳನ್ನು ಮಲಗಿಸಿದ್ದು ದೊಡ್ಡಮ್ಮನನ್ನು ವಿಚಾರಿಸಿದಾಗ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಷ್ಟೆ ಅರಳು ಮರಳಾಗಿ ಮಾತನಾಡುತ್ತಿದ್ದರು ತಕ್ಷಣ ಅಕ್ಕ ಪಕ್ಕದವರ ಸಹಾಯದಿಂದ ಕಿನ್ನಿಗೋಳಿ ಖಾಸಗಿ ಆಸ್ಪತ್ರೆಗೆ ಸಾಗಿಸಿದಾಗ ಆಕೆ ಮೃತ ಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದರು ಎಂದು ಪೊಲೀಸರಿಗೆ ವಿವರಿಸಿದ್ದಾರೆ. ಇದೊಂದು ವ್ಯವಸ್ಥಿತ ಕೊಲೆ ಎಂದು ಹೆತ್ತವರ ಮನೆಯವರು ಆರೋಪಿಸಿದ್ದಾರೆ.

ಅಧಿಕಾರಿಗಳ ಭೇಟಿ;
ಗೃಹಿಣಿಯ ಸಾವಿನ ಬಗ್ಗೆ ಮನೆಯವರು ಸಂಶಯ ವ್ಯಕ್ತಪಡಿಸಿದ್ದರಿಂದ ಅಪರಾದ ಪತ್ತೆ ದಳದ ಡಿಸಿಪಿ ವಿಷ್ಣುವರ್ಧನ ಹಾಗೂ ಪಣಂಬೂರು ಎಸಿಪಿ ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದು ಮೂಲ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ಮಲ್ಲಿಕಾಳ ಶವವನ್ನು ಪರಿಶೀಲಿಸಿ ಅದನ್ನು ತಹಶೀಲ್ದಾರ್‌ರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಸೂಚನೆ ನೀಡಿದ್ದರಿಂದ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದು ಮಲ್ಲಿಕಾಳ ಮೃತ ದೇಹವನ್ನು ಮಂಗಳೂರಿನ ವೆನ್‌ಲಾಕ್‌ಗೆ ರವಾನಿಸಲಾಗಿದೆ.

Written By : NARENDRA KEREKADU

Comments

comments

Comments are closed.

Read previous post:
ಅಪರಿಚಿತ ಯುವತಿಯ ಶವ ಪತ್ತೆ

ಮುಲ್ಕಿ: ಮುಲ್ಕಿ ಠಾಣಾ ವ್ಯಾಪ್ತಿಯ ಪಡು ಪಣಂಬೂರು ಪೆಟ್ರೋಲ್ ಪಂಪ್ ಬಳಿ ಅಪರಿಚಿತ ಯುವತಿಯ ಶವ ಪತ್ತೆಯಾಗಿದೆ, ಸುಮಾರು 30 ವರ್ಷ ಪ್ರಾಯದ ಈ ಯುವತಿಯನ್ನು ಕೊಲೆ...

Close