ಅಕ್ಯುಪ್ರೆಷರ್ ಕಾರ್ಯಗಾರ ಉದ್ಘಾಟನೆ

ಮೂಲ್ಕಿ:ಅನಾರೋಗ್ಯ ಅತೀವ ನೋವನ್ನು ಪರಿಣಾಮಕಾರಿಯಾಗಿ ಯಾವುದೇ ಅಡ್ಡಪರಿಣಾಮವಿಲ್ಲದೆ (ಸೈಡ್ ಇಫೆಕ್ಟ್) ಗುಣಪಡಿಸಲು ಅಕ್ಯುಪ್ರೆಷರ್ ಮತ್ತು ಅಕ್ಯು ಪಂಕ್ಚರ್ ನಿಂದ ಸಾದ್ಯವಿದ್ದು ವೈದ್ಯರು ಮತ್ತು ದಾದಿಗಳು ಶಾಲೆಯ ಶಿಕ್ಷಕರು ಮುಖ್ಯವಾಗಿ ಕಲಿಯಬೇಕಾದ ವಿದ್ಯೆಯಾಗಿದೆ ಎಂದು ಕುಟುಂಬ ವೈದ್ಯರ ಸಂಘದ ಅಧ್ಯಕ್ಷ ಅಕ್ಯು ಪಂಕ್ಚರ್ ತಜ್ಞ ಡಾ.ಎಂ.ಎ.ಆರ್ ಕುಡ್ವಾ ಹೇಳಿದರು.
ಮೂಲ್ಕಿ ಸೈಂಟ್ ಆನ್ಸ್ ನರ್ಸಿಂಗ್ ಕಾಲೇಜಿನ ಎಂ.ಎಸ್ಸಿ ವಿಭಾಗದಿಂದ ಸಂಯೋಜನೆಗೊಂಡ
ಅಕ್ಯುಪ್ರೆಷರ್ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಅಕ್ಯುಪ್ರೆಷರ್ ತೆರಪಿಯಿಂದ ದೇಹದ ಆಯ್ದ ಬಾಗಗಳ ನರಮಂಡಲದ ಮೇಲೆ ಒತ್ತಡ ನೀಡುವುದರಿಂದ ತಡೆಯಲಸಾಧ್ಯ ನೋವು ಕೂಡಾ ಶೀಘ್ರ ಗುಣವಾಗುತ್ತದೆ ಈ ತರಬೇತಿಯು ಪ್ರಥಮ ಚಿಕಿತ್ಸೆ ನೀಡಲು ಕೂಡಾ ಸಹಕಾರಿಯಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸೈಂಟ್ ಆನ್ಸ್ ಕಾಲೇಜಿನ ಮುಖ್ಯಸ್ಥ ಇರಿಕ್ ಸಿ.ಲೋಬೋ ವಹಿಸಿದ್ದರು
ಪ್ರಾಂಶುಪಾಲೆ ಸಿ.ಪ್ಲೋರಾ ಡಿಸೋಜಾ, ಕಾರ್ಯಕ್ರಮ ಸಂಯೋಜಕಿ ಫಾತಿಮಾ ವಾಯ್‌ಲೆಟ್ ಫೆರ್ನಾಂಡಿಸ್ ವೇದಿಕೆಯಲ್ಲಿದ್ದರು. ಶರೀನ್ ರೋಡ್ರಿಗಸ್, ಸಿ.ಬಾರ್ತಲೋಮಾ ಜೋಸೆಪ್, ಲಸಿತಾ ತೋಮ್ಸನ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಮರಿನ್ ಮತ್ತು ಸಂಗಡಿಗರು ಕಾರ್ಯಕ್ರಮ ನಿರೂಪಿಸಿದರು.

Kinnigoli 25021405Bhagyawan Sanil

Comments

comments

Comments are closed.

Read previous post:
ನದಿಯಲ್ಲಿ ನೌಕಾ ವಿಹಾರ

ಮೂಲ್ಕಿ: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಶ್ರೀಡಿ.ವೀರೇಂದ್ರ ಹೆಗ್ಗಡೆಯವರು ಮೂಲ್ಕಿ ಬಡಗುಹಿತ್ಲು ನಾಗಸಾನಿಧ್ಯದ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ಮತ್ತು ಚತುಃಪವಿತ್ರ ನಾಗಮಂಡಲ ಸೇವೆಯ ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಬಂದಿದ್ದ...

Close