ವಿಮಾ ಪ್ರತಿನಿಧಿ ಸಾರ್ಥಕ-25

ಮೂಲ್ಕಿ: ವ್ಯವಹಾರ ಜೀವನದಲ್ಲಿ ಬರುವ ಬದಲಾವಣೆಗಳಿಗೆ ಧನಾತ್ಮಕವಾಗಿ ಸ್ಪಂದಿಸಿ ಸಾರ್ವಜನಿಕ ವಲಯದಲ್ಲಿ ಸೇವೆಗೆ ಪ್ರಾಸ್ಥಸ್ಯ ನೀಡಿದಲ್ಲಿ ಮಾತ್ರ ವ್ಯವಹಾರಿಕವಾಗಿ ಉನ್ನತಿಗೊಳ್ಳಲು ಸಾಧ್ಯ ಎಂದು ಬೀದರ್‌ನ ಹಿರಿಯ ವಿಮಾ ಪ್ರತಿನಿಧಿ ಶಿವಶಂಕರಯ್ಯ ಹೇಳಿದರು.
ಬುಧವಾರ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಭಾರತೀಯ ಜೀವವಿಮಾ ನಿಗಮ ಮೂಲ್ಕಿ ಶಾಖೆಯ ವತಿಯಿಂದ 25 ವರ್ಷಗಳ ಸಾರ್ಥಕ ಸೇವೆ ನೀಡಿದ ವಿಮಾ ಪ್ರತಿನಿಧಿಗಳನ್ನು ಅಭಿನಂದಿಸುವ ಸಾರ್ಥಕ-25 ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಬೀದರ್‌ನ ಹಿರಿಯ ಅಭಿವೃದ್ಧಿ ಅಧಿಕಾರಿ ಎ.ಜಿ.ಕಲ್ಬುರ್ಗಿ ಮಾತನಾಡಿ, ನಿಗಮದ ಅಧಿಕಾರಿಗಳು ಮತ್ತು ಪ್ರತಿನಿಧಿಗಳ ಸಂಭಂದ ಗುರು ಶಿಷ್ಯ ಪರಂಪರೆಯಂತೆ ಧನಾತ್ಮಕ ಸಂಭಂದದ ಬೆಳವಣಿಗೆ ಮತ್ತು ಸಮಾಜದ ಜನರಿಗೆ ವಿಶ್ವಾಸ ಮೂಡಿಸುವ ಕಾರ್ಯಗಳಿಂದ ಸೇವಾ ಕ್ಷೇತ್ರ ವೃದ್ಧಿ ಮತ್ತು ವ್ಯವಹಾರ ಉನ್ನತಿ ಸಾಧ್ಯ ಎಂದರು.
ಈ ಸಂದರ್ಭ ನೂರಕ್ಕೂ ಅಧಿಕ ಸಾಥಕ ಸೇವೆ ನೀಡಿದ ಪ್ರತಿನಿಧಿಗಳನ್ನು ಗೌರವಿಸಲಾಯಿತು. ವಿವಿಧ ಸ್ಪರ್ದೆಗಳ ಬಹುಮಾನ ವಿತರಿಸಲಾಯಿತು.
ಹಿರಿಯ ಶಾಖಾಧಿಕಾರಿ ಇ.ಬಿ.ಲೋಬೊ ಕಾರ್ಯಕ್ರಮ ಉದ್ಘಾಟಿಸಿದರು.ಉಪಶಾಖಾಧಿಕಾರಿ ಬಾಲಚಂಧ್ರ ಪ್ರಸ್ಥಾವಿಸಿದರು.ಮಂಗಳೂರು ಅಭಿವೃದ್ಧಿ ಅಧಿಕಾರಿ ವಿಧ್ಯಾಧರ ಶೆಟ್ಟಿ ಪ್ರತಿನಿಧಿಗಳನ್ನು ಸನ್ಮಾನಿಸಿದರು.
ಲಿಯೋ ತಾವ್ರೋ ಸ್ವಾಗತಿಸಿದರು.ಜೀವನ್ ಕುಮಾರ್ ನಿರೂಪಿಸಿದರು. ಜೆರಾಲ್ಡ್ ಕ್ರಾಸ್ತಾ ವಂದಿಸಿದರು.

Mulki 27021401

Bhagyawan Sanil

Comments

comments

Comments are closed.

Read previous post:
ಬಡವರ್ಗದ ಅವಶ್ಯಕತೆಗೆ ಧನಾತ್ಮಕವಾಗಿ ಸ್ಪಂದಿಸಿ

ಮೂಲ್ಕಿ: ಸರ್ಕಾರದ ಸವಲತ್ತುಗಳನ್ನು ಸರಿಯಾದ ಸಮಯದಲ್ಲಿ ಅರ್ಹರಿಗೆ ನೀಡಲು ಹಾಗೂ ಗ್ರಾಮಿಣ ಬಡವರ್ಗದ ಅವಶ್ಯಕತೆಗಳಿಗೆ ಧನಾತ್ಮಕವಾಗಿ ಸ್ಪಂದಿಸಲು ತರಬೇತಿ ಕಾರ್ಯಕ್ರಮಳು ಬಹಳ ಅಗತ್ಯವಾಗಿದ್ದು ಎಲ್ಲರೂ ಇದರ ಸಂಪೂರ್ಣ...

Close