ಬಡವರ್ಗದ ಅವಶ್ಯಕತೆಗೆ ಧನಾತ್ಮಕವಾಗಿ ಸ್ಪಂದಿಸಿ

ಮೂಲ್ಕಿ: ಸರ್ಕಾರದ ಸವಲತ್ತುಗಳನ್ನು ಸರಿಯಾದ ಸಮಯದಲ್ಲಿ ಅರ್ಹರಿಗೆ ನೀಡಲು ಹಾಗೂ ಗ್ರಾಮಿಣ ಬಡವರ್ಗದ ಅವಶ್ಯಕತೆಗಳಿಗೆ ಧನಾತ್ಮಕವಾಗಿ ಸ್ಪಂದಿಸಲು ತರಬೇತಿ ಕಾರ್ಯಕ್ರಮಳು ಬಹಳ ಅಗತ್ಯವಾಗಿದ್ದು ಎಲ್ಲರೂ ಇದರ ಸಂಪೂರ್ಣ ಪ್ರಯೋಜನ ಪಡೆಯಬೇಕು ಎಂದು ಸಿಡಿಎಸ್‌ನ ಅಧ್ಯಕ್ಷರಾದ ವತ್ಸಲಾ ವಿ. ಬಂಗೇರ ಹೇಳಿದರು.
ಮೂಲ್ಕಿ ಪಟ್ಟಣ ಪಂಚಾಯತ್‌ನ ಸ್ವರ್ಣ ಜಯಂತಿ ಶಹರಿ ರೋಜ್‌ಗಾರ್ ಯೋಜನೆಯಡಿ ಆರ್.ಸಿ.ವಿ. ಗಳಿಗೆ/ಸಂಚಾಲಕಿಯರಿಗೆ ಒಂದು ದಿನದ ಚೈತನ್ಯದಾಯಿ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು ಕಮ್ಯುನಿಟಿ ಎಫೇರ‍್ಸ್ ಆಫೀಸರ್ ವಾಣಿ ವಿ. ಆಳ್ವ ಮತ್ತು ಸಮುದಾಯ ಸಂಘಟಕರು ತರಬೇತಿಯನ್ನು ನಡೆಸಿ ಕೊಟ್ಟರು. ಮುಖ್ಯಾಧಿಕಾರಿ ಹರಿಶ್ಚಂದ್ರ ಪಿ. ಸಾಲಿಯಾನ್ ಸ್ವಾಗತಿಸಿದರು. ಒಕ್ಕೂಟದ ಅಧ್ಯಕ್ಷರಾದ ಯಶೋಧ ಸಿ. ಪುತ್ರನ್ ವಂದಿಸಿದರು.

Kinnigoli 27021401

Comments

comments

Comments are closed.

Read previous post:
ಅಕ್ಯುಪ್ರೆಷರ್ ಕಾರ್ಯಗಾರ ಉದ್ಘಾಟನೆ

ಮೂಲ್ಕಿ:ಅನಾರೋಗ್ಯ ಅತೀವ ನೋವನ್ನು ಪರಿಣಾಮಕಾರಿಯಾಗಿ ಯಾವುದೇ ಅಡ್ಡಪರಿಣಾಮವಿಲ್ಲದೆ (ಸೈಡ್ ಇಫೆಕ್ಟ್) ಗುಣಪಡಿಸಲು ಅಕ್ಯುಪ್ರೆಷರ್ ಮತ್ತು ಅಕ್ಯು ಪಂಕ್ಚರ್ ನಿಂದ ಸಾದ್ಯವಿದ್ದು ವೈದ್ಯರು ಮತ್ತು ದಾದಿಗಳು ಶಾಲೆಯ ಶಿಕ್ಷಕರು...

Close