ಸಸಿಹಿತ್ಲು ಭಗವತಿ ಕ್ಷೇತ್ರದ ಬ್ರಹ್ಮಕಲಶೋತ್ಸವ

ಮೂಲ್ಕಿ: ಇತಿಹಾಸ ಪ್ರಸಿದ್ಧ ಹಳೆಯಂಗಡಿ ಬಳಿಯ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದಲ್ಲಿ ದೇವಿಯ ನೂತನ
ಬಿಂಬಪ್ರತಿಷ್ಠೆಯೊಂದಿಗೆ ಬ್ರಹ್ಮಕಲಶೋತ್ಸವವು ಮಾರ್ಚ್ 3 ರಿಂದ 9ನೇ ತಾರೀಖಿನವರೆಗೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ವಾಮನ ಇಡ್ಯಾ ಹೇಳಿದರು.
ಅವರು ಕ್ಷೇತ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುತ್ತಾ ಹಿರಿಯ ಧಾರ್ಮಿಕ ಗುರುಗಳಾದ ಕೃಷ್ಣ ಮೂರ್ತಿ ಭಟ್ ಹೊಗೆಗುಡ್ಡೆ ಹಾಗೂ ವೆಂಕಟೇಶ್ ತಂತ್ರಿ ಎಡಪದವು ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ. ಕ್ಷೇತ್ರದ ಜೀರ್ಣೋದ್ಧಾರವನ್ನು ಸುಮಾರು ಮೂರು ಕೋಟಿ ರೂಗಳ ವೆಚ್ಚದಲ್ಲಿ ನಡೆಸಿದ್ದು ಮುಖ್ಯವಾಗಿ ಗರ್ಭಗುಡಿಯಲ್ಲಿರುವ ದಾರು ಪೀಠ, ಕೀರ್ತಿಮುಖ, ಪ್ರವೇಶದ್ವಾರದ ರಾಜಗೋಪುರ, ಪಡುಬದಿಯ ಕಿರಿಯ ರಾಜಗೋಪುರ, ಕೆರೆ, ಆದಿಸ್ಥಳ, ಒಳಾಂಗಣದ ಗೋಪುರಕ್ಕೆ ಗ್ರಾನೈಟ್ ಹಾಸಲಾಗಿದೆ ಎಂದು ತಿಳಿಸಿದರು.
ಮಾರ್ಚ್ 3ರಂದು ಋತ್ವಿಜರ ಸ್ವಾಗತ, ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಮಾರ್ಚ್ 4ರಂದು ಮೂಲಸ್ಥಳದಲ್ಲಿ ಬಿಂಬ
ಆಧಿವಾಸ, ಹೋಮಾಧಿಗಳು ನಡೆಯಲಿದೆ, ಮಾರ್ಚ್ 5ರಂದು ಪ್ರತಿಷ್ಠಾ ಹೋಮ, ಭಗವತೀ ದೇವಿಯ ಬಿಂಬ ಪ್ರತಿಷ್ಠೆ, ಶಕ್ತಿ ದಂಡಕ ಪೂಜೆ, ಭಂಡಾರ ಸೇವೆ,
ಮಾರ್ಚ್ 6ರಂದು ಶತಚಂಡಿಕಾಯಾಗ, ನಾಗದೇವ ಸನ್ನಿಧಿಯಲ್ಲಿ ಆಶ್ಲೇಷ ಬಲಿ ನಡೆಯಲಿದೆ. ಮಾರ್ಚ್ 9ರಂದು ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪ್ರತಿದಿನ ಧಾರ್ಮಿಕ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ, ಸುಮಾರು 25 ಸಾವಿರ ಭಕ್ತರು ಈ ಕ್ಷೇತ್ರಕ್ಕೆ ಈ
ದಿನಗಳಲ್ಲಿ ಆಗಮಿಸುವ ನಿರೀಕ್ಷೆ ಇದ್ದು ಪ್ರತಿದಿನ ಅನ್ನಸಂತರ್ಪಣೆ ನಡೆಯಲಿದೆ ಅಲ್ಲದೇ ಸ್ಥಳೀಯ ಎಲ್ಲಾ ಸಂಘ ಸಂಸ್ಥೆಗಳು ವಿಶೇಷ ಸಹಕಾರ
ನೀಡಲಿದೆ. ಹಳೆಯಂಗಡಿಯ ತೀರದ ಜನರಿಗೆ ಅನುಕೂಲವಾಗುವಂತೆ ದೋಣೆ ಸೇವೆಯನ್ನು ಉಚಿತವಾಗಿ ಕಲ್ಪಿಸಲಿದ್ದೇವೆ, ಸರ್ಕಾರದಿಂದ ಒಟ್ಟು 35 ಲಕ್ಷದ ಅನುದಾನದಲ್ಲಿ ಅರ್ಧಾಂಶ ಬಂದಿದ್ದು ಉಳಿದ ಅರ್ಧಾಂಶಕ್ಕೆ ಅಧಿಕಾರಿಗಳು ಸ್ಥಳವೀಕ್ಷಣೆ ನಡೆಸಿ ವರದಿಯನ್ನು ಸಲ್ಲಿಸಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೋರ್ಣೋದ್ಧಾರ ಸಮಿತಿಯ ಅಧ್ಯಕ್ಷ ಜಗನ್ನಾಥ ಸಾಲ್ಯಾನ್, ಕಾರ್ಯಾಧ್ಯಕ್ಷ ಲಕ್ಷ್ಮೀಕಾಂತ್ ತೋನ್ಸೆ, ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀನಿವಾಸ ಅಪ್ಪು ಪೂಜಾರಿ, ಕೋಶಾಧಿಕಾರಿ ದಯಾನಂದ ಸಸಿಹಿತ್ಲು, ಪ್ರಚಾರ ಸಮಿತಿಯ ಸುನಿಲ್ ಹಳೆಯಂಗಡಿ ಉಪಸ್ಥಿತರಿದ್ದರು.

Mulki 28021407

Puneethakrishna

Comments

comments

Comments are closed.

Read previous post:
ಶ್ರೀ ಸದಾಶಿವ ದೇವಸ್ಥಾನದಲ್ಲಿ ಶಿವರಾತ್ರಿ ಉತ್ಸವ

ಮೂಲ್ಕಿ: ಪಂಚಮಹಲ್  ಶ್ರೀ ಸದಾಶಿವ ದೇವಸ್ಥಾನದಲ್ಲಿ ಶಿವರಾತ್ರಿ ಉತ್ಸವ ಭಜನಾ ಸಂಕೀರ್ಥನೆಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಗುರುವಾರ ಉದ್ಘಾಟಿಸಿದರು.ಈಸಂದರ್ಭ ಸತೀಷ್ ಭಂಡಾರಿ, ಆನಂದ ದೇವಾಡಿಗ, ಚಂದ್ರಶೇಖರ ಮಯ್ಯ,...

Close