ಕಟೀಲು ದೇವಳಕ್ಕೆ ವಿ ರಾಜೇಂದ್ರ ಸಿಂಗ್ ಬಾಬು ಭೇಟಿ

ಕಿನ್ನಿಗೋಳಿ: ಕನ್ನಡ ಚಲನ ಚಿತ್ರ ನಿರ್ದೇಶಕ ನಿರ್ಮಾಪಕ ವಿ ರಾಜೇಂದ್ರ ಸಿಂಗ್ ಬಾಬು ಶುಕ್ರವಾರ ಕಟೀಲು ದೇವಳಕ್ಕೆ ಭೇಟಿ ನೀಡಿದರು.
ಚಿತ್ರರಂಗದ ಮೇರು ನಟ ಸಚಿವ ಅಂಬರೀಷ್ ಶ್ರೀಘ್ರ ಗುಣಮುಖರಾಗಿ ಮೊದಲಿನಂತೆ ಲವಲವಿಕೆಯಿಂದ ಇರಬೇಕು ಎನ್ನುವ ಇರಾದೆಯಲ್ಲಿ ಧರ್ಮಸ್ಥಳ ಮಂಜುನಾಥ ದೇವಳ ಹಾಗೂ ಕಟೀಲು ದುರ್ಗಾಪರಮೇಶ್ವರೀ ದೇವಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದೇನೆ ಎಂದು ಮಾಧ್ಯಮ ಮಿತ್ರರಲ್ಲಿ ಹೇಳಿಕೊಂಡರು.
ದೇಶದಲ್ಲಿ ದಾಖಲೆಯ 1500 ಸಾವಿರಕ್ಕೂ ಮಿಕ್ಕಿ ಹೊಸ ಚಿತ್ರಗಳು ತೆರೆಕಂಡಿವೆ ಹಾಗೂ ಕನ್ನಡದಲ್ಲಿ 150 ಕ್ಕೂ ಮಿಕ್ಕಿ ಚಿತ್ರಗಳು ತೆರೆಕಂಡಿವೆ. ಡಬ್ಬಿಂಗ್‌ನಿಂದ ಚಿತ್ರರಂಗಕ್ಕೆ ಹೊಡೆತ ಬೀಳುವುದಿಲ್ಲ , ನಾವು ಒಳ್ಳೆ ಚಿತ್ರಗಳನ್ನು ನೀಡಿದಾಗ ಜನ ಅದನ್ನು ಖಂಡಿತಾ ಸ್ವೀಕರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಪ್ರಾದೇಶಿಕ ಹೆಚ್ಚಾಗಿ ಬೆಳವಳಿಗೆ ಕಾಣುವುದರಿಂದ ಭಾಷೆಗಳು ಬೆಳೆಯುತ್ತದೆ. ಕಿರುತೆರೆಯ ಬಗ್ಗೆ ನನಗೆ ಆಸಕ್ತಿ ಇಲ್ಲ , ಚಿತ್ರ ರಂಗ ಇಂದು ತುಂಬಾ ಬೆಳವಣಿಗೆ ಹೊಂದುತ್ತಿದೆ. ನೂತನ ತಂತ್ರಜ್ಞಾನ ಯುಗದಲ್ಲಿ ಚಿತ್ರರಂಗ ಹೊಸ ಮಜಲುಗಳನ್ನು ಕಂಡಿವೆ. ಹೊಸ ಹೊಸ ಅವಿಷ್ಕಾರದಿಂದ ಚಿತ್ರ ರಂಗ ಇನ್ನಷ್ಟು ಬೆಳೆವಣಿಗೆ ಕಾಣಲಿದೆ, ಐತಿಹಾಸಿಕ, ಪೌರಣಿಕ ಚಿತ್ರಗಳನ್ನು ಈಗಿನ ತಂತ್ರಜ್ಞಾನ ಬಳಸಿ ರೂಪಿಸುವುದು ಸುಲಭ ಸಾಧ್ಯವಾಗಿದೆ. ಕಾದಂಬರಿ ಅಧಾರಿತ ಚಿತ್ರಗಳು ಬರಬೇಕು. ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಜನತಾ ಚಿತ್ರಮಂದಿರ ಯೋಜನೆ ಶ್ಲಾಘನೀಯ ಬಡವರು ಕೈ ಗೆಟಕುವ ಬೆಲೆಯಲ್ಲಿ ಚಲನಚಿತ್ರ ನೋಡಲು ಸಾಧ್ಯ. ಎಂದು ರಾಜೇಂದ್ರಸಿಂಗ್ ಬಾಬು ಹೇಳಿದರು.
ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಪ್ರಾರ್ಥಿಸಿ ಪ್ರಸಾದ ನೀಡಿದರು. ಯಜಮಾನ ಸಂಸ್ಥೆಯ ವರದರಾಜ ಪೈ ಉಪಸ್ಥಿತರಿದ್ದರು.

108 ಎಳನೀರು ಅಭಿಷೇಕ ಹರಕೆ
ಈ ಸಂದರ್ಭ ಯುವ ಜನಸೇವೆ ಮತ್ತು ಮಿನುಗಾರಿಕಾ ಸಚಿವ ಅಭಯಚಂದ್ರ ಜೈನ್ ಕಟೀಲು ದೇವಳಕ್ಕೆ ಭೇಟಿ ನೀಡಿ ಸಚಿವ ಅಂಬರೀಷ್ ಶ್ರೀಘ್ರವಾಗಿ ಗುಣಮುಖರಾಗಲಿ ಎಂದು ೧೦೮ ಎಳನೀರ ಅಭಿಷೇಕ ಮಾಡಿಸುವ ಬಗ್ಗೆ ಹರಕೆ ಹೇಳಿರುತ್ತೇನೆ ಹಾಗೂ ಅವರು ಗುಣಮುಖರಾದ ಕೂಡಲೇ ಕಟೀಲು ದೇವಸ್ಥಾನಕ್ಕೆ ಬೇಟಿ ನೀಡಲಿದ್ದಾರೆ ಎಂದು ಸಚಿವರು ತಿಳಿಸಿದರು.

Mulki 28021412 Mulki 28021413 Mulki 28021414 Mulki 28021415 Mulki 28021416

Comments

comments

Comments are closed.

Read previous post:
ಹರಿಶ್ಚಂದ್ರ ಪಿ ಸಾಲ್ಯಾನ್ ಸನ್ಮಾನ

ಮೂಲ್ಕಿ : ಮೂಲ್ಕಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿ ಆರುವರೆ ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಹರಿಶ್ಚಂದ್ರ ಪಿ ಸಾಲ್ಯಾನ್ ರವರನ್ನು ಪೌರ ಸೇವಾ ನೌಕರರ ಸಂಘ ಮತ್ತು...

Close