ಅಂತರ್ ಕಾಲೇಜು ಸಾಪ್ಟ್ ಬಾಲ್ ಕ್ರೀಡಾ ಕೂಟ

ಮೂಲ್ಕಿ: ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಪುರುಷರ ಸಾಪ್ಟ್ ಬಾಲ್ ಕ್ರೀಡಾ ಕೂಟದ ಪ್ರಥಮ ಪ್ರಶಸ್ತಿಯನ್ನು ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜು ಗಳಿಸಿಕೊಂಡಿದೆ.
ದ್ವಿತೀಯ ಪ್ರಶಸ್ತಿ ಆಳ್ವಾಸ್ ಮೂಡಬಿದ್ರಿ,ತೃತೀಯ: ಎಂ.ಯು.ಕ್ಯಾಂಪಸ್ ಮಂಗಳಗಂಗೋತ್ರಿ, ನಾಲ್ಕನೇ ಸ್ಥಾನವನ್ನು ಡಾ.ಬಿ.ಬಿ.ಹೆಗ್ಡೆ ಕಾಲೇಜು ಕುಂದಾಪುರ ಗಳಿಸಿದೆ.
ಮೂಲ್ಕಿ ವಿಜಯಾ ಕಾಲೇಜು,ಹಳೆವಿದ್ಯಾರ್ಥಿ ಸಂಘ ಮತ್ತು ಮಂಗಳೂರು ವಿಶ್ವ ವಿದ್ಯಾನಿಲಯದ ಸಂಯೋಜನೆಯಲ್ಲಿ ನಡೆದ ಕ್ರೀಡಾಕೂಟ ಶುಕ್ರವಾರ ಸಮಾರೋಪಗೊಂಡಿತು.
ಸಮಾರೋಪ ಮತ್ತು ಪ್ರಶಸ್ತಿ ವಿತರಣಾ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿಶ್ವ ವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಉಪನಿರ್ದೇಶಕ ಡಾ.ಕಿಶೋರ್ ಕುಮಾರ್ ಸಿ.ಕೆ ಮಾತನಾಡಿ, ಮಂಗಳೂರು ವಿಶ್ವ ವಿದ್ಯಾನಿಲಯ ಬಹಳಷ್ಟು ಹೊಸ ಕ್ರೀಡೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದರೊಂದಿಗೆ ಕ್ರೀಡಾ ಅಭಿವೃದ್ಧಿಗೆ ರೂಪಿಸುವ ಯೋಜನೆಗಳಿಗೆ ಮೂಲ್ಕಿ ವಿಜಯಾ ಕಾಲೇಜು ಬಹಳ ಸಹಕಾರಿಯಾಗಿದೆ ಇಲ್ಲಿರುವ ಉತ್ತಮ ಕ್ರೀಡಾಂಗಣದಲ್ಲಿ ಮುಂದಿನ ದಿನಗಳಲ್ಲಿ ಅಂತರ್ ವಿಶ್ವ ವಿದ್ಯಾನಿಲಯ ಕ್ರೀಡೆಗಳನ್ನು ಸಂಘಟಿಸಬಹುದಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಡಾ.ಎಂ.ಎ.ಆರ್ ಕುಡ್ವಾ ವಹಿಸಿದ್ದರು.ತೆಂಕ ನಿಡಿಯೂರು ಪ್ರಥಮ ದರ್ಜೆ ಕಾಲೇಜಿನ ದೈಹಿಕ ನಿರ್ದೇಶಕ ರಾಮಚಂದ್ರ ಪಾಟ್ಕರ್ ಮೂಲ್ಕಿ ವಿಜಯಾ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್.ಶಂಕರ್,ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಪ್ರೊ.ಪಮೀದಾ ಬೇಗಂ,ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊ.ನಾರಾಯಣ,ದೈಹಿಕ ಶಿಕ್ಷಣ ನಿರ್ದೇಶಕ ರಾದ ಜಯಶ್ರೀ ಎಸ್.ನಾಯಕ್,ಯತೀಶ್ ಕುಮಾರ್ ಬಿ ಉಪಸ್ಥಿತರಿದ್ದರು.
ಪ್ರೊ.ನಾರಾಯಣ ಸ್ವಾಗತಿಸಿದರು.ಅರುಣಾ ನಿರೂಪಿಸಿದರು. ಜಯಶ್ರೀ ನಾಯಕ್ ವಂದಿಸಿದರು.

Mulki 28021410Bhagyawan Sanil

Comments

comments

Comments are closed.

Read previous post:
ಕಾರ್ನಾಡು ಹರಿಹರ ದೇವಸ್ಥಾನದಲ್ಲಿ ಆಹೋರಾತ್ರಿ

ಮೂಲ್ಕಿ; ಕಾರ್ನಾಡು ಹರಿಹರ ದೇವಸ್ಥಾನದಲ್ಲಿ ಆಹೋರಾತ್ರಿ ಭಜನಾ ಕಾರ್ಯಕ್ರಮವನ್ನು ಮೂಲ್ಕಿ ವಿಜಯಾ ಕಾಲೇಜು ಪ್ರಾಂಶುಪಾಲ ಫ್ರೊ,ಶಂಕರ್ ನೆರವೇರಿಸಿದರು. ದೇವಳದ ಆಡಳಿತ ಮೊಕ್ತೇಸರ ಎಮ್.ಅರವಿಂದ ಪೂಂಜ ಮತ್ತು ಇನ್ನಿತರರು...

Close