ಹರಿಶ್ಚಂದ್ರ ಪಿ ಸಾಲ್ಯಾನ್ ಸನ್ಮಾನ

ಮೂಲ್ಕಿ : ಮೂಲ್ಕಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿ ಆರುವರೆ ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಹರಿಶ್ಚಂದ್ರ ಪಿ ಸಾಲ್ಯಾನ್ ರವರನ್ನು ಪೌರ ಸೇವಾ ನೌಕರರ ಸಂಘ ಮತ್ತು ಪಂಚಾಯತ್ ಸಿಬ್ಬಂದಿಗಳ ಪರವಾಗಿ ಸನ್ಮಾನಿಸಲಾಯಿತು
ಪೌರ ಸೇವಾ ನೌಕರರ ಸಂಘದ ಶಾಖಾ ಅಧ್ಯಕ್ಷರು ಮತ್ತು ಸಂಘದ ರಾಜ್ಯ ಪರಿಷತ್ ಸದಸ್ಯ ಅಶೋಕ್ ಹಾಗೂ ಪಂಚಾಯತ್ ಅಧಿಕಾರಿ ವಾಣಿ ಆಳ್ವಾ ಜಂಟಿಯಾಗಿ ಚಿನ್ನದ ಉಂಗುರ ಸಹಿತ ನೀಡಿ  ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ವಾಣಿ ಆಳ್ವಾ, ಉತ್ತಮ ಅಧಿಕಾರಿಯಾಗಿ ಸಾರ್ವಜನಿಕರೊಂದಿಗೆ ತಾಳ್ಮೆ ಹಾಗೂ ಸಹೃದಯತೆಯಿಂದ ಕರ್ತವ್ಯ ನಿರ್ವಹಿಸಿ ನಮಗೆ ಮಾದರಿಯಾಗಿದ್ದಾರೆ ಇವರ ಈ  ನಿಲುವುಗಳ ಪರಿಣಾಮ ಪ್ರಪ್ರಥಮ ಬಾರಿಗೆ ಜಿಲ್ಲಾಡಳಿತ ವತಿಯಿಂದ ಮುಖ್ಯಾಧಿಕಾರಿ ಹರಿಶ್ಚಂದ್ರ ಸಾಲ್ಯಾನ್ ರವರನ್ನು ಮಂಗಳೂರಲ್ಲಿ ಸನ್ಮಾನಿಸಲಾಗಿದೆ ಎಂದರು.
ಈ ಸಂದರ್ಭ ಹಿರಿಯ ಸಿಬ್ಬಂದಿ ಶಶಿಕಲಾ, ಸದಸ್ಯ ಪುತ್ತುಬಾವಾ, ಹರ್ಷರಾಜ ಶೆಟ್ಟಿ ವೇದಿಕೆಯಲ್ಲಿದ್ದರು. ಚುನಾಯಿತ ಪಂಚಾಯತ್ ಪ್ರತಿನಿಧಿಗಳು, ಸಿಬ್ಬಂದಿಗಳು ಪೌರ ಕಾರ್ಮಿಕರು ಉಪಸ್ಥಿತರಿದ್ದರು.

Mulki 28021411

Bhagyawan Sani

Comments

comments

Comments are closed.

Read previous post:
ಅಂತರ್ ಕಾಲೇಜು ಸಾಪ್ಟ್ ಬಾಲ್ ಕ್ರೀಡಾ ಕೂಟ

ಮೂಲ್ಕಿ: ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಪುರುಷರ ಸಾಪ್ಟ್ ಬಾಲ್ ಕ್ರೀಡಾ ಕೂಟದ ಪ್ರಥಮ ಪ್ರಶಸ್ತಿಯನ್ನು ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜು ಗಳಿಸಿಕೊಂಡಿದೆ. ದ್ವಿತೀಯ ಪ್ರಶಸ್ತಿ...

Close