ಕ್ರೀಡೆಯಿಂದ ಏಕಾಗ್ರತೆ ಹಾಗೂ ಆರೋಗ್ಯದ ರಕ್ಷಣೆಯಾಗುತ್ತದೆ

ಮೂಲ್ಕಿ: ಮಂಗಳೂರು ವಿಶ್ವ ವಿದ್ಯಾನಿಲಯ ಎಲ್ಲಾ ಕ್ರೀಡೆಗಳಿಗೆ ಪ್ರ್ರೊತ್ಸಾಹ ನೀಡುವ ಸಲುವಾಗಿ ಸ್ಪರ್ದೆಗಳನ್ನು ಹಮ್ಮಿಕೊಂಡು ಪ್ರತಿಭಾವಂತ ಕ್ರೀಡಾಳುಗಳಿಗೆ ಪುರಸ್ಕಾರ ಸಹಿತ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ಮಂಗಳೂರು ವಿಶ್ವವಿದ್ಯಾ ನಿಲಯದ ಕ್ರೀಡಾ ನಿರ್ದೇಶಕ ಡಾ.ಎಚ್.ನಾಗಲಿಂಗಪ್ಪ ಹೇಳಿದರು.
ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಗುರುವಾರ ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಪುರುಷರ ಸ್ವಾಪ್ಟ್ ಬಾಲ್ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯಿಂದ ಏಕಾಗ್ರತೆ ಮಿತ್ರತ್ವ ಹಾಗೂ ಆರೋಗ್ಯದ ರಕ್ಷಣೆಯಾಗುದರೊಂದಿಗೆ ನಾಯಕತ್ವ ಬೆಳೆಯುತ್ತದೆ ವಿದ್ಯಾರ್ಥಿಗಳು ಪಠ್ಯ ಶಿಕ್ಷಣದೊಂದಿಗೆ ವಿವಿಧ ಕ್ರೇಡೆಗಳ ಬಗ್ಗೆ ಆಸಕ್ತಿವಹಿಸುವುದು ಬಹಳ ಅಗತ್ಯ ಎಂದರು.
ಈ ಸಂದರ್ಭ ಕ್ರೀಡಾ ಕ್ಷೇತ್ರದಲ್ಲಿ ನಡೆಸಿದ ಧೀರ್ಘ ಸೇವೆಗಾಗಿ ಡಾ.ನಾಗಲಿಂಗಪ್ಪ ರವರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಂ.ಎ.ಆರ್.ಕುಡ್ವಾ ವಹಿಸಿದ್ದರು. ವಿಜಯಾ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್ ಶಂಕರ್,ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಪ್ರೊ.ಪಮೀದಾ ಬೇಗಂ,ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರ.ನಾರಾಯಣ, ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶಮೀನಾ ಆಳ್ವಾ,ಕ್ರೀಡಾ ನಿರ್ದೇಶಕರಾದ ಜಯಶ್ರೀ ನಾಯಕ್ ಮತ್ತು ಯತೀಶ್ ಕುಮಾರ್ ,ಪ್ರೊ ನಾಗೇಶ್ ಶೆಣೈ ಉಪಸ್ಥಿತರಿದ್ದರು
ಪ್ರೊ.ಕೆ.ಆರ್ ಶಂಕರ್ ಸ್ವಾಗತಿಸಿದರು. ಪ್ರೊ.ಅರುಣಾ ನಿರೂಪಿಸಿದರು. ಯತೀಶ್ ಕುಮಾರ್ ವಂದಿಸಿದರು.

Mulki 28021403Bhagyawan Sanil

Comments

comments

Comments are closed.

Read previous post:
ಮೂಲ್ಕಿ ಉಸ್ತಾದ್ ಹಿದಾಯತುಲ್ಲಾಗೆ ಸನ್ಮಾನ

ಮೂಲ್ಕಿ: ಮಾನಂಪಾಡಿ ಶ್ರೀ ಧೂಮಾವತಿ ಜಾರಂದಾಯ ದೈವಸ್ಥಾನದಲ್ಲಿ ಕಳೆದ 40ವರ್ಷಗಳಿಂದ ನಾಗಸ್ವರ ಮತ್ತು ಶಹನಾಯಿ ವಾದ್ಯ ಸೇವೆ ಸಲ್ಲಿಸುತ್ತಿರುವ ಉಸ್ತಾದ್ ಹಿದಾಯತುಲ್ಲಾ ಸಾಹೇಬ್ ರವರಿಗೆ ಜಿಲ್ಲಾ ರಾಜ್ಯೋತ್ಸವ...

Close