ತುಳು ಭಾಷಾಂತರ ಕಾರ್ಯಾಗಾರ

ಮೂಲ್ಕಿ: ದ್ರಾವಿಡ ಬಾಷೆಗಳಲ್ಲಿ ಅತೀ ಪುರಾತನವಾದ ತುಳು ಬಾಷೆಯು ಅತೀ ಸಂಕೀರ್ಣ ಲಿಪಿಯನ್ನು ಹೊಂದಿದ್ದು ಅದರ ತಿಳುವಳಿಕೆ ಬಾಷಾ ಜ್ಞಾನ ಹೆಚ್ಚಿಸಲು ಪೂರಕ ಎಂದು ಹಿರಿಯ ಸಾಹಿತಿ ನಾರಾಯಣ.ಪಿ. ಶೆಟ್ಟಿ ಹೇಳಿದರು.
ಆಂದ್ರಪ್ರದೇಶದ ಕುಪ್ಪಂನ ದ್ರಾವೀಡಿಯನ್ ವಿಶ್ವವಿದ್ಯಾನಿಲಯದ ಸಂಯೋಜನೆಯಲ್ಲಿ ನಡೆದ ಸರ್ವಜ್ಞನ ವಚನಗಳನ್ನು ತುಳುವಿಗೆ ಭಾಷಾಂತರಿಸುವ ಎರಡು ದಿನಗಳ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ತುಳು ಬಾಷೆಯು ಸುಂದರ ಸುಶೀಲವಾಗಿ ಸಂಸ್ಕೃತಿ ಸಂಸ್ಕಾರದ ತಿರುಳಿನೊಂದಿಗೆ ಪ್ರದೇಶದ ಧಾರ್ವಿಕ ಮತ್ತು ಆದ್ಯಾತ್ಮಿಕ ಕಂದಾಚಾರಗಳನ್ನು ಸೇರಿಸಿಕೊಂಡು ಮೌಕಿಕ ಹಾಗೂ ಸ್ವಂತ ಮತ್ತು ಇತರ ಭಾಷೆಯ ಲಿಪಿಗಳೊಂದಿಗೆ ಸೇರಿ ಬೆಳೆದ ಭಾಷೆಯಾಗಿದ್ದು ಈ ಬಗ್ಗೆ ತಿಳಿಯಲು ಅಧ್ಯಯನ ಶೀಲತೆ ಬಹುಮುಖ್ಯ ಎಂದರು.
ಈ ಸಂದರ್ಭ ಇತರ ಸಂಪನ್ಮೂಲ ವ್ಯಕ್ತಿಗಳಾದ ಡಾ| ವಾಮನ ನಂದಾವರ, ಡಾ| ವಸಂತ ಕುಮಾರ್ ಪೆರ್ಲಾ ಮಂಗಳೂರು, ಡಾ| ಕೆ.ಕಮಾಲಾಕ್ಷ ಮತ್ತು ಕುಪ್ಪಂ ವಿಶ್ವ ವಿದ್ಯಾನಿಲಯದ ಪ್ರಥಮ ತುಳು ಪಿ.ಎಚ್.ಡಿ. ಪುರಸ್ಕೃತೆ ಡಾ| ಸಾಯಿಗೀತ ಇವರು ಕುಪ್ಪಂ ವಿಶ್ವವಿದ್ಯಾನಿಲಯದಲ್ಲಿ ಎರಡು ದಿನದ ತರಬೇತಿ ಕಾರ್ಯಾಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕುಪ್ಪಂ ದ್ರಾವಿಡ ವಿಶ್ವ ವಿದ್ಯಾಲಯವು ದಕ್ಷಿಣಭಾರತದ ಎಲ್ಲಾ ಭಾಷಾಗಳನ್ನು ವಿದ್ಯಾರ್ಥಿಗಳು ಕಲಿಯುವ ಅವಕಾಶ ಕಲ್ಪಿಸಿ ಈ ಭಾಷೆಗಳಲ್ಲಿ ಎಂ.ಎ ಮತ್ತು ಪಿ.ಎಚ್.ಡಿ.ಮಾಡಬಹುದಾಗಿದೆ.

Mulki 31031401

Bhagyavan Sanil

Comments

comments

Comments are closed.