ಶ್ರೀ ಅರಸು ಕುಂಜಿರಾಯ ನೇಮೋತ್ಸವ ಧಾರ್ಮಿಕ ಸಭೆ

ಕಿನ್ನಿಗೋಳಿ: ದೈವಸ್ಥಾನ ದೇವಳಗಳು ಜನರಲ್ಲಿ ಒಗ್ಗಟ್ಟನ್ನು ಮೂಡಿಸುವ ಹಾಗೂ ಸೌಹಾರ್ದತೆಯನ್ನು ಪಸರಿಸುವ ಕಾರ್ಯ ಮಾಡಬೇಕು. ಎಂದು ಧಾರ್ಮಿಕ ಚಿಂತಕ ಪಂಜ ಭಾಸ್ಕರ ಭಟ್ ಹೇಳಿದರು.
ಶುಕ್ರವಾರ ಅತ್ತೂರು- ಕೆಮ್ರಾಲ್- ಕಿಲೆಂಜೂರು ಗ್ರಾಮಗಳ ಶ್ರೀ ಅರಸು ಕುಂಜಿರಾಯ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವದ ಅಂಗವಾದ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು.
ಮಂಗಳೂರು ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ| ಆಶಾಜ್ಯೋತಿ ರೈ ಅಧ್ಯಕ್ಷತೆ ವಹಿಸಿದ್ದರು.
ಉದಯವಾಣಿಯ ಸಹ ಉಪಾಧ್ಯಕ್ಷ ರಾಮಚಂದ್ರ ಮಿಜಾರ್, ಉದ್ಯಮಿ ಲಕ್ಷ್ಮೀಶ ಭಂಡಾರಿ, ಪಂಜದಗುತ್ತು ವಿಶ್ವನಾಥ ಶೆಟ್ಟಿ , ಗುತ್ತಿನಾರ್ ಭೋಜ ಶೆಟ್ಟಿ ನಲ್ಯಗುತ್ತು, ಅತ್ತೂರುಬಲು ಶ್ರೀ ಮಹಾಗಣಪತಿ ಮಂದಿರ ಅರ್ಚಕ ವೆಂಕಟರಾಜ ಉಡುಪ, ಶ್ರೀ ಅರಸು ಕುಂಜಿರಾಯ ಆಡಳಿತ ಮಂಡಳಿಯ ಅಧ್ಯಕ್ಷ ರಘುನಾಥ ಶೆಟ್ಟಿ ಮೂಡ್ರಗುತ್ತು, ಅತ್ತೂರು ಭಂಡಾರ ಮನೆ ಶಂಭು ಮುಕ್ಕಾಲ್ದಿ , ಜಯಕರ್ನಾಟಕ ಸಂಸ್ಥೆಯ ದಿವಾಕರ ಶೆಟ್ಟಿ, ಮಾಲತಿ ಬಿ. ಶೆಟ್ಟಿ, ರಾಜೇಂದ್ರ ಶೆಟ್ಟಿ ಕೆಳಗಿನ ಮನೆ, ಸುಖಿರಾಜ್ ಶೆಟ್ಟಿ, ಚರಣ್ ಶೆಟ್ಟಿ ಉಪಸ್ಥಿತರಿದ್ದರು. ಈ ಸಂಧರ್ಭ ಕ್ಷೇತ್ರದ ಶಾಶ್ವತ ನಿಧಿಗೆ ಸಹಕರಿಸಿದ ೫೦ ಕ್ಕೂ ಮಿಕ್ಕಿ ದಾನಿಗಳನ್ನು ಸನ್ಮಾನಿಸಲಾಯಿತು.
ಕುಡ್ತಿಮಾರುಗುತ್ತು ರಾಜೇಂದ್ರ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು.ಶಿಕ್ಷಕ ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-04041409

Comments

comments

Comments are closed.

Read previous post:
ಜನಾರ್ದನ ಪೂಜಾರಿ ಪಕ್ಷಿಕೆರೆ ಚರ್ಚ್ ಭೇಟಿ

 ಕಿನ್ನಿಗೋಳಿ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಶುಕ್ರವಾರ ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಚರ್ಚ್ ಧರ್ಮಗುರು ಫಾ|...

Close