ಅನುದಾನಗಳ ಹೇಳಿಕೆಗಳೇ ಬಿಜೆಪಿ ಸರಕಾರದ ಸಾಧನೆ

ಕಿನ್ನಿಗೋಳಿ: ಹಿಂದಿನ ಬಿಜೆಪಿ ಸರಕಾರ ನಾಡಿನ ಜ್ವಲಂತ ಸಮಸ್ಯೆಗಳಿಗೆ ಸರಿಯಾದ ಅನುದಾನ ನೀಡಲಿಲ್ಲ. ಕೇವಲ ಬಾಯಿ ಮಾತಿನಲ್ಲಿ ಮಾತ್ರ ಕೋಟಿ, ಕೋಟಿ ಅನುದಾನ ಬಿಡುಗಡೆ ಮಾಡಿದ್ದೇವೆ ಎಂಬ ಹೇಳಿಕೆಗಳೇ ಬಿಜೆಪಿ ಸರಕಾರದ ಸಾಧನೆ ಎಂದು ಯುವಜನ ಸೇವೆ ಮತ್ತು ಮೀನುಗಾರಿಕೆ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.
ಸೋಮವಾರ ಕಿನ್ನಿಗೋಳಿ ಸಮೀಪದ ಮಾರಡ್ಕದಲ್ಲಿ ಮೂಲ್ಕಿ ಬ್ಲಾಕ್ ಕಾಂಗ್ರೇಸ್ ಸಮಿತಿಯ ಕಟೀಲು ವಲಯದ ಕಾಂಗ್ರೇಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಬಡವರ ಸುಖ, ಶಾಂತಿ, ನೆಮ್ಮದಿಗಾಗಿ ಹಾಗೂ ಬಡವರ ಧ್ವನಿಯಾದ ಕಾಂಗ್ರೇಸ್ ಅಭ್ಯರ್ಥಿ ಜನಾರ್ಧನ ಪೂಜಾರಿ ಅವರನ್ನು ಗೆಲ್ಲಿಸಬೇಕು ಎಂದು ಸಚಿವರು ತಿಳಿಸಿದರು.
ಕಳೆದ ಕೆಲವು ವರ್ಷಗಳ ಹಿಂದೆ ಕಟೀಲು ದೇವಳದಲ್ಲಿ ಅದ್ದೂರಿಯ ಬ್ರಹ್ಮಕಲಶೋತ್ಸ ನಡೆದಿದ್ದು ಈ ಸಂದರ್ಭ ಬಿಜೆಪಿಯ ನಾಯಕ ಯಡಿಯೂರಪ್ಪ , ಜೆಡಿಎಸ್ ನಾಯಕರಾದ ಕುಮಾರ ಸ್ವಾಮಿ, ದೇವೆಗೌಡ ಬೇಟಿ ನೀಡಿದರೇ ವಿನಹ ದೇವಳದ ಮೂಲಭೂತ ಸೌಕರ್ಯಕ್ಕೆ ಗಮನ ನೀಡಿಲ್ಲ. ಪತ್ರಿಕೆಯಲ್ಲಿ ಪುಕ್ಕಟ್ಟೆ ಪ್ರಚಾರ ಪಡೆಯುವ ನಿಟ್ಟಿನಲ್ಲಿ ಕೋಟಿ ಕೋಟಿ ಅನುದಾನಗಳ ಆಶ್ವಾಸನೆಗಳನ್ನು ನೀಡಿದ್ದಾರೆ. ಜನರು ಯೋಚಿಸಿ ಕಾಂಗ್ರೇಸಿಗೆ ಮತ ನೀಡಿ ಎಂದು ಹೇಳಿದರು.
ಈ ಸಂದರ್ಭ ೫ ಮಂದಿ ವಿವಿಧ ಪಕ್ಷದ ಕಾರ್ಯಕರ್ತರನ್ನು ಕಾಂUಸ್‌ಗೆ ಸೇರ್ಪಡೆ ಗೊಂಡರು.
ಹಿರಿಯ ಕಾಂಗ್ರೇಸ್ ಮುಖಂಡರಾದ ಗುಣಪಾಲ ಶೆಟ್ಟಿ , ಗೋಪಿನಾಥ್ ಪಡಂಗ, ತಾ. ಪಂ. ಸದಸ್ಯ ರಾಜು ಕುಂದರ್, ಮಾಜಿ. ತಾ. ಪಂ. ಸದಸ್ಯ ತಿಮ್ಮಪ್ಪ ಕೋಟ್ಯಾನ್, ಎ.ಪಿ.ಎಮ್.ಸಿ. ಸದಸ್ಯ ಪ್ರಮೋದ್ ಕುಮಾರ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸದಸ್ಯರಾದ ರೋನಿ ಡಿಸೋಜ, ರೋಸಿ ಪಿಂಟೋ, ರಾಜೀವಿ, ಹರಿಶ್ಚಂದ್ರ ರಾವ್, ಸುನಿಲ್ ಸಿPರಾ, ಗಂಗಾಧರ ಪೂಜಾರಿ, ಡೋಲ್ಫಿ ಸಂತುಮಾಯೂರ್, ನವೀನ್ ಪಿ. ಸನಿಲ್, ಮೂಲ್ಕಿ ಬ್ಲಾಕ್ ಕಾಂಗ್ರೇಸ್ ಕಾರ್ಯದರ್ಶಿ ವಸಂತ್ ಬೆರ್ನಾಡ್ ಮತ್ತಿತರರು ಉಪಸ್ಥಿತರಿದ್ದರು.
ಮಾಜಿ ಜಿ. ಪಂ. ಸದಸ್ಯೆ ಶೈಲಾ ಸಿಕ್ವೇರಾ ಸ್ವಾಗತಿಸಿ, ರಮಾನಂದ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

Kinnigoli-04041410

Comments

comments

Comments are closed.

Read previous post:
ಕಿನ್ನಿಗೋಳಿ ವಲಯ ಕಾಂಗ್ರೇಸ್ ಕಾರ್ಯಕರ್ತರ ಸಭೆ

ಕಿನ್ನಿಗೋಳಿ: ವಿರೋಧ ಪಕ್ಷಗಳು ಸುಳ್ಳುಗಳ ಸರಮಾಲೆಯನ್ನು ಹೇಳಿ ಜನರ ದಿಕ್ಕು ತಪ್ಪಿಸುತ್ತಿದೆ. ಕಾಂಗ್ರೇಸ್‌ನ ವಿರುದ್ದ ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿದೆ. ಸರಕಾರದ ಜನಪರ ಸಮಾಜ ಉಪಯೋಗಿ ಅಭಿವೃದ್ಧಿ ಕೆಲಸಗಳನ್ನು...

Close