ಕಟೀಲು ದೇವಳಕ್ಕೆ ಚಿತ್ರನಟಿ ತಾರಾ ಭೇಟಿ

ಕಿನ್ನಿಗೋಳಿ: ಚಿತ್ರನಟಿ ಹಾಗೂ ಬಿಜೆಪಿ ನಾಯಕಿ ವಿಧಾನ ಪರಿಷತ್ ಸದಸ್ಯೆ ತಾರಾ ಶುಕ್ರವಾರ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ರಾಜ್‌ಕುಟುಂಬವು ಸ್ವಂತ ನಿರ್ಧಾರದಿಂದ ರಾಜಕೀಯಕ್ಕೆ ಬಂದಿದೆ. ರಾಜಕೀಯ ಮತ್ತು ಕನ್ನಡ ಚಿತ್ರರಂಗದ ನಂಟಿರುವುದರಿಂದ ಇದು ಸಹಜ. ಶಿವಮೊಗ್ಗದಲ್ಲಿ ಗೀತಾ ಶಿವರಾಜ್‌ಕುಮಾರ್‌ರ ರಾಜಕೀಯ ಗೆಲುವು ಸೋಲು ಅವರ ಕ್ಷೇತ್ರದ ಮತದಾರರನ್ನು ಅವಲಂಬಿಸಿದೆ. ಎಂದು ಕನ್ನಡ ಚಿತ್ರನಟಿ ಹಾಗೂ ಬಿಜೆಪಿ ನಾಯಕಿ ತಾರಾ ಹೇಳಿದರು.
ಅಭ್ಯರ್ಥಿಗಳು ಕಣ್ಣೀರಿನ ಮೂಲಕ ಮತಯಾಚಿಸುವುದು ಯಾಕೆ ಎಂಬ ಪ್ರಶ್ನೆಗೆ ಪ್ರಚಾರ ವೈಖರಿಯಲ್ಲಿ ಯಾವ ರೀತಿಯಲ್ಲೂ ಮತ ಯಾಚನೆ ಮಾಡಬಹುದು ಅದು ಅವರವರಿಗೆ ಬಿಟ್ಟ ವಿಷಯ ಎಂದರು.
ಅಭಿವೃದ್ದಿ ಪರ ಸ್ವಾಭಿಮಾನಿ ರಾಷ್ಟ್ರವಾಗಲು ನರೇಂದ್ರ ಮೋದಿಯ ನೇತೃತ್ವದಲ್ಲಿ ದೇಶವನ್ನು ಮುನ್ನಡೆಸುವ ಸಂಕಲ್ಪವನ್ನು ಮತದಾರರು ಹೊಂದಿದ್ದು ಅದಕ್ಕೆ ಪೂರಕವಾಗಿ ವಾತಾವರಣವೂ ನಿರ್ಮಾಣವಾಗಿದೆ. ತನ್ನ ರಾಜಕೀಯ ಜೀವನವು ಸಹ ಕರಾವಳಿ ಜಿಲ್ಲೆಯಿಂದಲೇ ಆರಂಭವಾಗಿ ಇಲ್ಲೇ ನನ್ನ ಮೊದಲ ಭಾಷಣವನ್ನು ಮಾಡಿದ್ದೇನೆ ಆದುದರಿಂದ ತನಗೆ ಈ ಜಿಲ್ಲೆಯ ಬಗ್ಗೆ ಹೆಮ್ಮೆ ಎನಿಸಿದೆ ಎಂದು ಹೇಳಿದರು.
ಕನ್ನಡ ಚಿತ್ರರಂಗವು ಒಡೆದ ಮನೆಯಾಗದೇ ಸಂಘಟಿತವಾಗಿ ಬೆಳೆಯಬೇಕು. ಡಬ್ಬಿಂಗ್‌ಗೆ ನನ್ನ ಸ್ಪಷ್ಟ ವಿರೋಧವಿದೆ. ಇತ್ತಿಚಿನ ದಿನಗಳಲ್ಲಿ ನನ್ನ ರಾಜಕೀಯ ಹಾಗೂ ಸಂಸಾರದ ನಡುವೆ ಸಾಕಷ್ಟು ಒತ್ತಡದ ಕೆಲಸವಿರುವುದರಿಂದ ಚಿತ್ರರಂಗದಿಂದ ಸ್ವಲ್ಪ ದೂರ ಉಳಿಯುವಂತಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ ಪ್ರಸಾದ ವಿತರಿಸಿದರು. ಸುಲೋಚನ ಭಟ್, ಕಸ್ತೂರಿ ಪಂಜ, ಲೀಲಾ ಬಂಜನ್, ಜಯಲಕ್ಷ್ಮೀ ಶೆಟ್ಟಿಗಾರ್, ಪ್ರವಿತಾ ಈಶ್ವರ ಕಟೀಲು, ಪ್ರಭಾಮಾಲಿನಿ, ಕೊಡೆತ್ತೂರು ಭುವನಾಭಿರಾಮ ಉಡುಪ, ದೇವಪ್ರಸಾದ ಪುನರೂರು, ಪ್ರಾಣೇಶ್ ಭಟ್ ದೇಂದಡ್ಕ, ಗೋಪಾಲ ಶೆಟ್ಟಿಗಾರ್, ಗಿರೀಶ್ ಕುಮಾರ್ ಇನ್ನಿತರರು ಹಾಜರಿದ್ದರು.

Kinnigoli-04041406 Kinnigoli-04041405

Comments

comments

Comments are closed.

Read previous post:
ನರೇಂದ್ರ ಮೋದಿ ಸುಳ್ಳಿನ ಸರದಾರ

ಕಿನ್ನಿಗೋಳಿ : ಬಿಜೆಪಿ ಪ್ರಧಾನ ಮಂತ್ರಿ ಅಭ್ಯರ್ಥಿ ಮಹಾ ಸುಳ್ಳಿನ ಸರದಾರ ಗುಜರಾತಿನಲ್ಲಿ ಅಭಿವೃದ್ಧಿಯಾಗಿಯೇ ಇಲ್ಲ ಕೇವಲ ಅಭಿವೃದ್ಧಿ ಎಂಬ ಹೆಸರಿನಲ್ಲಿ ಜನರನ್ನು ಮರುಳು ಮಾಡುತ್ತಿದ್ದಾರೆ. ಎಂದು ದಕ್ಷಿಣ...

Close